Advertisement
ತಲಪಾಡಿ ಕಡೆಯಿಂದ ಬಟ್ಟಪ್ಪಾಡಿ ಅಳಿವೆ ಮೂಲಕ ಸಮುದ್ರ ಸೇರುವಲ್ಲಿ ಮರಳು ತುಂಬಿದ ಹಿನ್ನೆಲೆಯಲ್ಲಿ ಹೊಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ ಸ್ಥಳೀಯ ಮನೆಗಳು ಸೇರಿದಂತೆ ಕಾಲು ದಾರಿ, ರೈಲ್ವೇ ಅಂಡರ್‌ಪಾಸನ್ನು ಆವರಿಸಿದೆ.
ಹೂಳು ತೆಗೆಯದೆ ಸಮಸ್ಯೆ ಪ್ರತೀ ವರ್ಷ ಮಳೆ ಕಡಿಮೆಯಾದಾಗ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಹೊಳೆ ಮತ್ತು ಸಮುದ್ರದ ಮರಳು ಮತ್ತು ಮಣ್ಣು ಮಿಶ್ರಿತ ಮರಳು ಬಟ್ಟಪ್ಪಾಡಿಯಲ್ಲಿ ಹೂಳಿನಂತೆ ತುಂಬಿ ನೀರು ಸಮುದ್ರ ಸೇರುವುದಕ್ಕೆ ತಡೆಯಾಗುತ್ತಿತ್ತು. ಈ ಸಂದರ್ಭ ಸೋಮೇಶ್ವರ ಗ್ರಾ.ಪಂ. ಹೂಳು ತೆಗೆಯುವ ಕಾರ್ಯವನ್ನು ಮಾಡುತ್ತಿತ್ತು. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಪಂಚಾಯತ್ ಹೂಳು ತೆಗೆಯುವುದನ್ನು ಸ್ಥಗಿತಗೊಳಿ
ಸಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪಂಚಾಯತ್ ಮಾಹಿತಿ ನೀಡಿತ್ತು ಎಂದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ ಮಾಹಿತಿ ನೀಡಿದ್ದಾರೆ. ಮರಳುಗಾರಿಕೆ ಸ್ಥಗಿತದಿಂದ ಸಮಸ್ಯೆ
ಕಳೆದ ಹಲವು ದಿನಗಳಿಂದ ತಲಪಾಡಿ ಮತ್ತು ಸೋಮೇಶ್ವರ ಗ್ರಾ.ಪಂ.ನ ಗಡಿ ಭಾಗವಾದ ಬಟ್ಟಪ್ಪಾಡಿ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಮರಳುಗಾರಿಕೆ ಮಾಡುತ್ತಿದ್ದವರು ಅಳಿವೆ ಬಾಗಿಲಿನ ಮರಳನ್ನು ಖಾಲಿ ಮಾಡುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಆದರೆ ವಾರದೆ ಹಿಂದೆ ಉಳ್ಳಾಲ ಪೊಲೀಸರು ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಬಳಿಕ ಇಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಮರಳು ಅಳಿವೆ ಬಾಗಿಲಿನಲ್ಲಿ ಶೇಖರಣೆಗೊಂಡು ಈ ವ್ಯಾಪ್ತಿಯಲ್ಲಿ ಕೃತಕ ನೆರೆಯಾಗಿದೆ.
Related Articles
ಅಳಿವೆ ಬಾಗಿನಲ್ಲಿ ಹೂಳು ತೆಗೆಯದಿದ್ದರೆ ಸೋಮೇಶ್ವರ ಗ್ರಾ.ಪಂ. ಎದುರು ಪ್ರತಿಭಟಿಸಲಾಗುವುದು ಎಂದು ಗಡಿನಾಡು ರಕ್ಷಣಾ ವೇದಿಕೆಯ ಸಿದ್ಧಿಕ್ ತಲಪಾಡಿ ತಿಳಿಸಿದ್ದಾರೆ.
Advertisement
ತಹಶೀಲ್ದಾರ್ ಭೇಟಿಕೃತಕ ನೆರೆಯಾದ ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಳಿವೆ ಬಾಗಿಲಿನ ಹೂಳನ್ನು ತೆಗೆಯುವಂತೆ ಸಂಬಂಧ ಪಟ್ಟ ಇಲಾಖೆಗೆ ಆದೇಶ ನೀಡಿದರು.