Advertisement

ಸೋಮೇಶ್ವರ: ಸಿಡಿಲಿಗೆ ಮನೆ, 8 ತೆಂಗಿನಮರಗಳಿಗೆ ಹಾನಿ

10:29 AM May 09, 2017 | Harsha Rao |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ  ಜಿಲ್ಲೆಯಾದ್ಯಂತ ರವಿವಾರ ತಡರಾತ್ರಿ ಗುಡುಗು, ಸಿಡಿಲು, ಗಾಳಿ ಸಹಿತ ಉತ್ತಮ ವರ್ಷಧಾರೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ನಡುಗಲ್ಲು, ಗುತ್ತಿಗಾರು ಮುಂತಾದೆಡೆ ಉತ್ತಮ ಮಳೆಯಾಗಿದೆ. ಕೋಟೆಕಾರು ಪರಿಸರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ.

Advertisement

ಉಳ್ಳಾಲ ಸೋಮೇಶ್ವರದ ಬಾಸ್ರಿತ್ತಾಯಬೈಲಿನಲ್ಲಿ ತೆಂಗಿನಮರಕ್ಕೆ ಬಡಿದ ಸಿಡಿಲಿನಿಂದ ಲಕ್ಷ್ಮಣ್‌ ಸೋಮೇಶ್ವರ ಅವರ ಮನೆಗೆ ಹಾನಿಯಾಗಿದೆ. ಆ ಸಂದರ್ಭ ಮನೆಯಲ್ಲಿ ಏಳು ಮಂದಿ ಮಲಗಿದ್ದರು. ಅವರಲ್ಲಿ ಐವರಿಗೆ ಮೈಧಿಯಲ್ಲಿ ವಿದ್ಯುತ್‌ ಸಂಚಾರದ ಅನುಭವವಾಗಿದ್ದು, ಶರತ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯುತ್‌ ಸಂಬಂಧಿ ವಸ್ತುಗಳು ಸಂಪೂರ್ಣ ಹಾನಿಗೀಡಾಗಿವೆ. ಅಕ್ಕಪಕ್ಕದ ಎಂಟಕ್ಕೂ ಹೆಚ್ಚು ತೆಂಗಿನಮರಗಳಿಗೆ ಹಾನಿಯಾಗಿದೆ. 

ಕುಸಿದ ತಡೆಗೋಡೆ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೋಳಿಗೆ ಬಳಿ ಹೆದ್ದಾರಿಯಿಂದ ಹರಿದ ನೀರು ಸ್ವಾತಂತ್ರÂ ಹೋರಾಟಗಾರ ದಿ| ಕರುಣಾಕರ ಉಚ್ಚಿಲ ಅವರ ಮನೆಗೆ ನುಗ್ಗಿದ್ದರಿಂದ ಮನೆಯ ಆವರಣ ಗೋಡೆ ಸಂಪೂರ್ಣ ಕುಸಿದಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಬಳಿಯ ಅನೇಕ ಮನೆಗಳ ಕಾಂಪೌಂಡ್‌ ಒಳಗೆ ನೀರು ನುಗ್ಗಿದ್ದು, ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. 

ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಸದಸ್ಯ ರವಿಶಂಕರ್‌ ಸೋಮೇಧಿಶ್ವರ, ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಉಚ್ಚಿಲ ಘಟನ ಸ್ಥಳಕ್ಕೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next