Advertisement

ಸೋಮೇಶ್ವರ : ಆಕಸ್ಮಿಕವಾಗಿ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯ ರಕ್ಷಣೆ

12:42 PM Dec 29, 2020 | sudhir |

ಉಳ್ಳಾಲ : ಆಕಸ್ಮಿಕವಾಗಿ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಮಂಗಳವಾರ ನಡೆದಿದೆ.

Advertisement

ಸೋಮೇಶ್ವರ ಸಮುದ್ರ ನೋಡಲು ಬಂದಿದ್ದ ಮಹಿಳೆ ಆಕಸ್ಮಿಕವಾಗಿ ಸಮುದ್ರದ ಸೆಲೆಗೆ ಸಿಲಿಕಿ ಸಮುದ್ರ ಪಾಲಾಗಿದ್ದರು ಈ ವೇಳೆ ಅಲ್ಲೇ ಇದ್ದ ಸ್ಥಳೀಯರಾದ ಅಶೋಕ್ ಸೋಮೇಶ್ವರ ಅವರು ಕಿಶೋರ್ ಸೋಮೇಶ್ವರ, ವಿಶ್ವನಾಥ್ ಮಡ್ಯಾರ್ ಸಹಕಾರದೊಂದಿಗೆ ಸಮುದ್ರಕ್ಕೆ ಹಾರಿ ಮಹಿಳೆಯ ರಕ್ಷಣೆ ಮಾಡಿದ್ದಾರೆ.

ಸದ್ಯ ಮಹಿಳೆಯ ಅರೋಗ್ಯ ಸ್ಥಿರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಸಮುದ್ರ ತೀರದಲ್ಲಿ ಎಚ್ಚರಿಕೆಯಿಂದ ಇರುವುದು ಅವಶ್ಯಕ, ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Advertisement

Udayavani is now on Telegram. Click here to join our channel and stay updated with the latest news.

Next