Advertisement

ಸೋಮೇಶ್ವರ ಕಡಲ ತಡಿಯಲ್ಲಿ ಮೂಲಸೌಕರ್ಯ ಕೊರತೆ

02:35 AM May 22, 2018 | |

ಕುಂದಾಪುರ: ಸೋಮೇಶ್ವರ ಕಡಲ ತೀರದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಒಂದೆಡೆ ಸೋಮೇಶ್ವರ ದೇವಾಲಯ, ಇನ್ನೊಂದೆಡೆ ಕ್ಷಿತಿಜ ನೇಸರಧಾಮ, ಮತ್ತೂಂದೆಡೆ ಸಮುದ್ರ ಬದಿಯಲ್ಲೇ ಸಿಹಿನೀರ ಕೆರೆ ಹೀಗೆ ಹತ್ತಾರು ಆಕರ್ಷಣೆ, ವಿಶೇಷಗಳನ್ನು ಒಳಗೊಂಡಿದ್ದರೂ ಪ್ರವಾಸೋದ್ಯಮದ ದೃಷ್ಟಿಯಿಂದ ಸೋಮೇಶ್ವರ ಹಿಂದುಳಿದಿದೆ. ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‌ ಈಗ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಪ್ರವಾಸೋದ್ಯಮ ಇಲಾಖೆ ಇದನ್ನು ಜಿಲ್ಲೆಯ ಸುರಕ್ಷಿತ ಕಡಲ ಕಿನಾರೆ ಎಂದು ಘೋಷಿಸಲು ಸಿದ್ಧತೆ ನಡೆಸಿದೆ. ಇದರಿಂದಾಗಿ ಬೈಂದೂರು ಪ್ರವಾಸೋದ್ಯಮ ಕ್ಷೇತ್ರವಾಗಿ ಇನ್ನಷ್ಟು ಬೆಳೆಯಲು ಪೂರಕ ವಾತಾವರಣ ನಿರ್ಮಾಣವಾಗಿದೆ.

Advertisement

ಅಪಾಯ ರಹಿತ ಬೀಚ್‌
ಈ ಬೀಚ್‌ ನಗಣ್ಯವಲ್ಲ. ಪ್ರವಾಸಿಗರಿಗೆ ಮಾಹಿತಿಯೂ ಇಲ್ಲದಿಲ್ಲ. ನೂರಾರು ಪ್ರವಾಸಿಗರು ಬರುತ್ತಾರೆ. ಈ ವರೆಗೆ ಯಾವುದೇ ಅಪಾಯ ಸಂಭವಿಸದೇ ಇರುವುದರಿಂದ ಅಪಾಯ ರಹಿತ ಬೀಚ್‌ ಎಂದು ಗುರುತಿಸಲ್ಪಟ್ಟಿದೆ. 

ಸೌಕರ್ಯಗಳಿಲ್ಲ
ಪ್ರವಾಸಿಗರು ಬಂದಾಗ ಸುಸಜ್ಜಿತ ಪಾರ್ಕಿಂಗ್‌, ಕುಳಿತುಕೊಳ್ಳಲು ಬೆಂಚ್‌, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಸ್ನಾನಗೃಹ, ಬಟ್ಟೆ ಬದಲಿಸುವ ಕೊಠಡಿ, ಶೌಚಾಲಯ ಇತ್ಯಾದಿ ಸೌಕರ್ಯಗಳ ಅಗತ್ಯವಿದೆ. ಕಡಲತೀರಕ್ಕೆ ಬರಲು ಸುಸಜ್ಜಿತ ರಸ್ತೆ ಬೇಕು.

ನೇಸರಧಾಮ
ಸಮೀಪದ ವತ್ತಿನೆಣೆಯಲ್ಲಿ  ಅರಣ್ಯ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಕ್ಷಿತಿಜ ನೇಸರಧಾಮವಿದೆ. ಬಾನು ಕೆಂಪೇರುವ ಹೊತ್ತು ತಂಪಾಗಿಸುವ ಆಹ್ಲಾದಕರ ಗಾಳಿಗೆ ಮೈಯೊಡ್ಡಿ ಸಮುದ್ರತಟದಲ್ಲಿ  ಮೇಲ್ದಂಡೆಯ ಅಟ್ಟಳಿಗೆಯಲ್ಲಿ ನಿಂತು ಸೂರ್ಯಾಸ್ತಮಾನ ವೀಕ್ಷಿಸಲೂ ಸಾಧ್ಯ. 

ಹೆಸರಿನಿಂದ ಗೊಂದಲ
ಸೋಮೇಶ್ವರ ಬೀಚ್‌ ಕುರಿತು ಮಾಹಿತಿಯ ಕೊರತೆ ಇದೆ. ಕೆಲವರು ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್‌ ಎಂದು ಭಾವಿಸುತ್ತಾರೆ. ಆದ್ದರಿಂದ ಇಲಾಖೆ ಈ ಕುರಿತು ಗಮನ ಹರಿಸಿ ಮಾಹಿತಿ ಫ‌ಲಕದ ಅಲ್ಲಲ್ಲಿ ಹಾಕುವ ಅಗತ್ಯವಿದೆ. 

Advertisement

ಡಿಸೆಂಬರ್‌ನಲ್ಲಿ ಪೂರ್ಣ
ಮೂಲಸೌಕರ್ಯ ವೃದ್ಧಿಗೆ ವಿಸ್ತೃತ ಯೋಜನಾ ವರದಿ ತಯಾರಾಗುತ್ತಿದ್ದು ಡಿಸೆಂಬರ್‌ ವೇಳೆಗೆ ಕೋಸ್ಟಲ್‌ ಸರ್ಕ್ನೂಟ್‌ ಯೋಜನೆಯಿಂದ ಶೌಚಾಲಯ, ಸ್ನಾನಗೃಹ, ವಿರಾಮದ ಕುರ್ಚಿ ಸೇರಿದಂತೆ ಕಾಮಗಾರಿ ಅನುಷ್ಠಾನವಾಗಲಿದೆ.
– ಅನಿತಾ,ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ

ಮೂಲಸೌಕರ್ಯ ಅಗತ್ಯ
ಇಲ್ಲಿ ಬಂದರೆ ಉಳಿದುಕೊಳ್ಳುವ ಪ್ರವಾಸಿಗರಿಗೆ ವಸತಿಗೃಹದ ಆವಶ್ಯಕತೆಯಿದೆ. ಜತೆಗೆ ಶೌಚಾಲಯ, ಸ್ನಾನಗೃಹ ಬೇಕು. ಪ್ರವಾಸಿಗರ ವಾಹನ ಇರಿಸಲು ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಕೂಡಾ ಇಲ್ಲ. ಪ್ರಕೃತಿ ಸಹಜ ಸುಂದರ ತಾಣ. ಆದರೆ ಮೂಲಸೌಕರ್ಯಗಳಿಲ್ಲದೇ ಬರಡಾಗುತ್ತಿದೆ. 
– ರಾಮ ಕೆ.,ಸೋಡಿತಾರ್‌, ಉದ್ಯಮಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next