Advertisement

ಶತಮಾನ ಪೂರೈಸಿದ ಸೋಮೇಶ್ವರ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆ

10:08 AM Dec 09, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1918 ಶಾಲೆ ಆರಂಭ
ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಶಾಲೆ

ಉಳ್ಳಾಲ: ಸೋಮೇಶ್ವರ ಉಚ್ಚಿಲದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ಉಚ್ಚಿಲ ಬೋವಿ ಶಾಲೆಯ ಪಾತ್ರ ಮಹತ್ವದ್ದು, 1918ರಲ್ಲಿ ಬೋವಿ ಸಮಾಜದ ಹಿರಿಯರಿಂದ ಸ್ಥಾಪಿಸಲ್ಪಟ್ಟ ಈ ಶಾಲೆ ಶತಮಾನೋತ್ಸವವನ್ನು ಪೂರೈಸಿ ಕನ್ನಡ ಮಾಧ್ಯಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ಮೂರೂರ ಬೋವಿ(ಮೋಯ) ಮಹಾಸಭಾದ ಆಡಳಿತಕ್ಕೊಳಪಟ್ಟ ಉಚ್ಚಿಲ ಬೋವಿ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ. ಬೋವಿ ಸಮಾಜದ ಕೆಲವರು ಮಂಗಳೂರಿನಲ್ಲಿ ನಡೆಯುತ್ತಿದ್ದ ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದು ಮುಂಬಯಿನಂತಹ ಹೊರರಾಜ್ಯಗಳಲ್ಲಿ ಉದ್ಯೋಗ ಅರಸಿ ಹೋದ ಸಂದರ್ಭ ಊರಿನಲ್ಲಿದ್ದ ತಮ್ಮವರ ಸಂಪರ್ಕಕ್ಕೆ ಪತ್ರ ಮುಖೇನ ಕ್ಷೇಮ ಸಮಾಚಾರ ಕಳುಹಿಸುತ್ತಿದ್ದರು. ಆದರೆ ಊರಿನಲ್ಲಿ ಪತ್ರವನ್ನು ಓದಲು ಓದು ಬರಹ ತಿಳಿದವರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಯಿತು. ಆ ಕಾಲದಲ್ಲಿ ಉಚ್ಚಿಲದ ಜನರಿಗೆ ಕನ್ನಡ ಭಾಷೆ, ಓದು, ಬರಹವನ್ನು ಮಾಡಲು ಪರಿಚಯಿಸಿದವರು ಉದ್ಯಾವರ ಬೀಚ ಬೆಳ್ಚಪ್ಪಾಡರು. ಅದು ಉಚ್ಚಿಲದಲ್ಲಿ ಶಾಶ್ವತವಾಗಿ ನಿಲ್ಲುವಂತೆ ಪ್ರೋತ್ಸಾಹಿಸಿದವರು ಉಚ್ಚಿಲ ಮಂಜಪ್ಪನವರು. ಈ ರೀತಿಯಾಗಿ ಉಚ್ಚಿಲದಲ್ಲಿ ಅಕ್ಷರದ ಕನಸನ್ನು ಬಿತ್ತುವ ಮೂಲಕ ಸಮಾಜದ ಪ್ರಗತಿಗೆ ಈ ಇಬ್ಬರು ಮಹಾಪುರುಷರು ಕಾರಣೀಭೂತರಾದರು.

ಹುಲ್ಲು ಛಾವಣಿಯಲ್ಲಿ ಶಾಲೆ ಆರಂಭ
ಉಚ್ಚಿಲದ ಬಸ್ತಿಪಡು³ ಬಳಿ ತಲೆಯೆತ್ತಿದ ಸಣ್ಣ ಶಾಲೆ ನಿರ್ಮಾಣಕ್ಕೆ ಬೀಚ ಬೆಳ್ಚಪ್ಪಾಡ ಮತ್ತು ಅವರ ಮಕ್ಕಳಾದ ದೇಜಪ್ಪ ಮತ್ತು ಬಾಲಕೃಷ್ಣನವರ ಶ್ರಮ ಅಪಾರ. ಉದ್ಯಾವರದಿಂದ ಉಚ್ಚಿಲಕ್ಕೆ ದಿನಂಪ್ರತಿ ನಡೆದುಬಂದು ಪಾಠ ಹೇಳುತ್ತಿದ್ದರು. ಎರಡೇ ವರ್ಷಗಳಲ್ಲಿ ಈ ಶಾಲೆ ಸ್ಥಗಿತಗೊಂಡಿತು. ಅನಂತರ “ನಡುಮನೆ’ ಎಂಬಲ್ಲಿ ವಿದ್ವಾನ್‌ ರಾಮಪ್ಪನವರು ಇನ್ನೊಂದು ಶಾಲೆಯನ್ನು ತೆರೆದರು. ಆದರೂ ಕೂಡ ಅದು ಸ್ವಲ್ಪ ಕಾಲದಲ್ಲಿ ಮುಚ್ಚಲ್ಪಟ್ಟಿತು. ಈ ಎರಡೂ ಪ್ರಯತ್ನಗಳಿಂದಾಗಿ ಜನರಲ್ಲಿ ಅಕ್ಷರದ ಪ್ರಜ್ಞೆ ಮೂಡಿತು. ಇದರಿಂದಾಗಿ 1918ರ ಸುಮಾರಿಗೆ ಉಚ್ಚಿಲ ಮಂಜಪ್ಪನವರ ಮಗ ಬಸಪ್ಪನವರು ಸಂಬಂಧಿ ರಾಮಪ್ಪನವರ ಜತೆಗೆ ಉಚ್ಚಿಲಕ್ಕೆ ಬಂದು ಹುಲ್ಲು ಛಾವಣಿಯ ಕಟ್ಟಡದಲ್ಲಿ ಶಾಲೆಯನ್ನು ಆರಂಭಿಸಿದರು.

Advertisement

ಯು. ಮಂಜಪ್ಪ, ಯು. ದೇಜಪ್ಪ ಮತ್ತು ಕೆ. ಐತಪ್ಪ ಬಂಗೇರ ಈ ಮೂವರು ಅಧ್ಯಾಪಕರು ಮತ್ತು 34 ವಿದ್ಯಾರ್ಥಿಗಳಿಂದ ಶಾಲೆ ಆರಂಭವಾಯಿತು. ಸರಕಾರದ ಮಂಜೂರಾತಿ ಪಡೆದು ಈ ಶಾಲೆಯಲ್ಲಿ ತಲಪಾಡಿ, ಕಿನ್ಯ, ಕೋಟೆಕಾರು, ಸೋಮೇಶ್ವರ ಗ್ರಾಮದ ಮಕ್ಕಳು ವಿದ್ಯಾಭ್ಯಾಸಕ್ಕೆ ದಾಖಲಾದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಕಟ್ಟಡದ ಕೊರತೆ ಕಂಡು ಬಂದಾಗ ಯು. ಬಸಪ್ಪನವರ ತಮ್ಮ ಯು. ವೀರಪ್ಪನವರ ಪ್ರಯತ್ನದ ಫಲವಾಗಿ 1920ರಲ್ಲಿ ಅಂದಿನ ನೀಲೇಶ್ವರ ದಾಮೋದರ ತಂತ್ರಿಯವರು (ಉಚ್ಚಿಲತ್ತಾಯರು) ಉಚ್ಚಿಲದ ಈಗಿರುವ ನಿವೇಶನವನ್ನು ದಾನವಾಗಿ ನೀಡಿದರು. ಊರಿನ ಮತ್ತು ಮುಂಬಯಿಯ ಸಮಾಜ ಬಾಂಧವರು ಸರಸ್ವತಿ ವಿದ್ಯಾದಾಯಿನಿ ಸಂಘ ಸ್ಥಾಪಿಸಿ ಊರ ಪರವೂರಿನ ದಾನಿಗಳಿಂದ ಹಣ ಸಂಗ್ರಹಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಯಿತು. 1922ರಲ್ಲಿ ಬಂಗ್ಲೆ ಹುಲ್ಲು ಛಾವಣಿಯ ಕಟ್ಟಡದಿಂದ ಹೊಸ ನಿವೇಶನದ ಹೆಂಚಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅನಂತರ ಸರಕಾರದ ಖಾಯಂ ಮಂಜೂರಾತಿ ಪಡೆಯಿತು. 1927ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿಯಾದ ವೀರಪ್ಪ ಅವರ ಅವಧಿಯಲ್ಲಿ ಈ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡರೆ, ಪ್ರಥಮ ಮಹಿಳಾ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಸರಸ್ವತಿ ಯು. ಬಿ. ಅವರೂ ಶಾಲೆಯ ಉನ್ನತಿಗೆ ಕೊಡುಗೆಯನ್ನು ನೀಡಿದ್ದಾರೆ ಎನ್ನುತ್ತಾರೆ ವಾಸುದೇವ ಉಚ್ಚಿಲ ಅವರು.

ಬೋವಿ ವಿದ್ಯಾ ಸಂಘ ಸ್ಥಾಪನೆ
ಶಾಲೆಯ ಆಡಳಿತವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ 1939ರಲ್ಲಿ ಬೋವಿ ವಿದ್ಯಾ ಸಂಘ ನೋಂದಣಿಯಾಯಿತು. ಈ ಶಾಲೆ 1948ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿ ಪಡೆಯಿತು. ಸಂಘದ ಮೂಲಕ ಶಾಲಾ ಆಟದ ಮೈದಾನಕ್ಕೆ 2.9 ಎಕ್ರೆ ವಿಸ್ತೀರ್ಣದ ಜಾಗದ ಖರೀದಿಸಲಾಗಿದೆ. ಸುಮಾರು 30 ವರ್ಷಗಳ ಕಾಲ ಶಾಲಾ ಕರೆಸ್ಪಾಂಡೆಂಟ್‌ ಆಗಿದ್ದ ಉಚ್ಚಿಲಗುಡ್ಡೆ ನಾರಾಯಣ ಅವರ ಅವಧಿಯಲ್ಲಿ ಊರಿಗೊಂದು ಸರಕಾರಿ ಶಾಲೆ, ಪ್ರಾಥಮಿಕ ಶಾಲಾ ಕಟ್ಟಡಗಳ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1969ರಲ್ಲಿ ಸುವರ್ಣ ಮಹೋತ್ಸವ, 1982ರಲ್ಲಿ ವಜ್ರಮಹೋತ್ಸವ ಆಚರಣೆ ನಡೆದು 2019ರಲ್ಲಿ ಶತಮಾನೋತ್ಸವವನ್ನು ಶಾಲೆ ಆಚರಿಸಿಕೊಂಡಿದೆ. 2007ರಿಂದ ಮೂರೂರ ಬೋವಿ ಮಹಾಸಭಾ ಸೋಮೇಶ್ವರ ಉಚ್ಚಿಲ ಬೋವಿವಿದ್ಯಾಸಂಘಗಳ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು 2009ರಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿತು.

ಶಾಲೆಯಲ್ಲಿ ಕಂಪ್ಯೂಟರ್‌, ಗ್ರಂಥಾಲಯ, ನೃತ್ಯ, ಯಕ್ಷಗಾನ ತರಬೇತಿ, ಕ್ರೀಡೆಗೆ ಆದ್ಯತೆ ನೀಡಲಾಗುತ್ತಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಲಾಗುತ್ತಿದೆ.

ಪ್ರಸ್ತುತ 84 ವಿದ್ಯಾರ್ಥಿಗಳು ಮತ್ತು ಇಬ್ಬರು ಖಾಯಂ, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳಾಗಿದ್ದು, ಖಾಯಂ ಶಿಕ್ಷಕರಾಗಿರುವ ನಾವು ಮಕ್ಕಳ ಸಮವಸ್ತ್ರ ಪುಸ್ತಕಕ್ಕೆ ಸಹಾಯ ಮಾಡುತ್ತೇವೆ.
-ಪೂರ್ಣಿಮಾ, ಮುಖ್ಯ ಶಿಕ್ಷಕಿ

ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳೆಂದೇ ಭಾವಿಸಿ ಸಂಸ್ಕೃತಿ ಸಂಸ್ಕಾರಗಳೊಂದಿಗೆ ಮೌಲ್ಯ, ಜವಾಬ್ದಾರಿಯುತ ಬೌದ್ಧಿಕ ಶಿಕ್ಷಣ ನೀಡಲಾಗುತ್ತಿತ್ತು.
-ಧನರಾಜ್‌ ಎನ್‌. ಉಚ್ಚಿಲ್‌,ಹಳೆ ವಿದ್ಯಾರ್ಥಿ

– ವಸಂತ್‌ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next