Advertisement

ಬದುಕು ಬದಲಾಗಿದೆ, ನಾವೂ ಬದಲಾಗೋಣ : ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿಯೇ ಇದೆ

01:55 AM May 29, 2020 | Hari Prasad |

ಕೋವಿಡ್ ಈಗ ಹಳೆಯ ಕಥೆ. ನಾವು ಏನಿದ್ದರೂ ಅದರೊಂದಿಗೆ ಎಚ್ಚರದಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಮಾಹಿತಿ.

Advertisement

ಕೋವಿಡ್ ಕಾಣಿಸಿಕೊಂಡ ಬಳಿಕ ನಮ್ಮ ಜೀವನ ಶೈಲಿಯೇ ಬದಲಾಗುತ್ತಿದೆ. ಮನೆಯೊಳಗೇ ಕುಳಿತುಕೊಂಡು ಬದುಕು ಕಟ್ಟಿಕೊಳ್ಳಲು ಅಸಾಧ್ಯ. ವಿವಿಧ ಕೆಲಸ ಕಾರ್ಯಗಳಿಗಾಗಿ ಹೊರಗಡೆ ಹೋಗುವುದು ಅನಿವಾರ್ಯ.

ಉದ್ಯೋಗ ಸಹಿತ ವಿವಿಧ ಅನಿವಾರ್ಯ ಕಾರಣಗಳಿಗಾಗಿ ಹೊರಗೆ ಹೋಗುವಂತಹ ಸಂದರ್ಭ ದಲ್ಲಿ ನಾವು ಏನು ಮಾಡಬೇಕು. ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಯಾವೆಲ್ಲ ಕಡೆ ಯಾವ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿರುತ್ತಾರೆ. ನಾವು ಏನೇನು ಕೊಂಡೊಯ್ಯಬೇಕು.

ಯಾವೆಲ್ಲ ಕೆಲಸಗಳನ್ನು ಫೋನ್‌ ಅಥವಾ ಮನೆಯಲ್ಲಿಯೇ ಕುಳಿತುಕೊಂಡು ಹೇಗೆ ಮಾಡಬಹುದು. ಯಾವ ಕೆಲಸ ಕಾರ್ಯಗಳನ್ನು ತುರ್ತಾಗಿ ಮಾಡಬೇಕು. ಯಾವೆಲ್ಲ ಕೆಲಸಗಳಿಗೆ ಅವಸರವಿಲ್ಲ ಎಂಬಿತ್ಯಾದಿ ಸಂಗತಿಗಳ ಮಾಹಿತಿಗಳನ್ನು ‘ಉದಯವಾಣಿ’ ಇಂದಿನಿಂದ ನೀಡುತ್ತಿದೆ. ನಾವು ಜವಾಬ್ದಾರಿಯುತವಾಗಿ ವರ್ತಿಸಿದರೆ ನಮಗೆ ಮಾತ್ರವಲ್ಲದೆ ಸಮಾಜದಲ್ಲೂ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯ. ಇದಕ್ಕೆ ಸರ್ವರ ಸಹಕಾರವೂ ಅಗತ್ಯ

1. ಮನೆಯಿಂದ ಹೊರಗೆ ಹೋಗಬೇಕಾದ ಸಂದರ್ಭ
ತಪ್ಪದೆ ಮಾಸ್ಕ್ ಧರಿಸಿರಬೇಕು. ಒಂದು ವೇಳೆ ಮಾಸ್ಕ್ ಇಲ್ಲದೇ ಇದ್ದರೆ ಕನಿಷ್ಠ ಕರ್ಚೀಫ್ ಅನ್ನು ಆದರೂ ಮುಖಕ್ಕೆ ಸುತ್ತಿಕೊಳ್ಳಲು ಮರೆಯದಿರೋಣ, ಮರೆತರೆ ದಂಡವೂ ಬೀಳುತ್ತದೆ.

Advertisement

2. ಹೊರಗೆ ಹೋಗುವಂತಹ ಸಂದರ್ಭದಲ್ಲಿ ಕೈಗೆ ಗ್ಲೌಸ್‌ ಹಾಕುವುದು ಉತ್ತಮ. ಸಣ್ಣದಾದರೂ ಒಂದು ಸ್ಯಾನಿಟೈಸರ್‌ ಬಾಟ್ಲಿ ಕೈಯಲ್ಲಿದ್ದರೆ ಉತ್ತಮ. ಹೊರಗಿನ ನಮ್ಮ ಕೆಲಸ ಆದ ಕೂಡಲೇ ಅಲ್ಲಿಯೇ ನಾವು ಒಮ್ಮೆ ಕೈಗೆ ಸ್ಯಾನಿಟೈಸರ್‌ ಹಾಕಿ ಸ್ವಚ್ಛಗೊಳಿಸಿಕೊಳ್ಳಬಹುದು.

3. ಕೋವಿಡ್ ವಿರುದ್ಧದ ಪ್ರಬಲ ಅಸ್ತ್ರವೇ ಸಾಮಾಜಿಕ ಅಂತರ. ಎಲ್ಲಿಗೆ ಹೋದರೂ ಇದನ್ನು ಮರೆಯದಿರೋಣ. ಜನ ಗುಂಪುಗೂಡಿದ್ದರೆ ಸಾಧ್ಯವಾದರೆ ಅವರಿಗೆ ತಿಳಿಹೇಳುವ ಅಥವಾ ನಾವು ದೂರವಿದ್ದು, ಗುಂಪು ತಿಳಿಯಾದ ಬಳಿಕ ಅಲ್ಲಿ ಹೋಗುವ ಕೆಲಸವನ್ನು ಮಾಡೋಣ.

4. ಹೊರಗಡೆ ಹೋದಾಗ ಕುರ್ಚಿ, ಟೇಬಲ್‌, ಇತರ ವಸ್ತುಗಳು ಸಹಿತ ಅನಗತ್ಯವಾಗಿ ಯಾವುದನ್ನೂ ಮುಟ್ಟದಿರುವುದು ಸುರಕ್ಷಿತ. ಆ ವಸ್ತುಗಳ ಮೇಲೆ ಸೋಂಕು ಇದ್ದರೆ ತಗಲುವ ಸಾಧ್ಯತೆ ಇರುತ್ತದೆ.

5. ಕೋವಿಡ್ ಸೋಂಕು ಅತೀ ಬೇಗನೆ ತಗಲಿ, ಅಪಾಯ ಎದುರಾಗುವುದು ಮಕ್ಕಳು, ಹಿರಿಯ ನಾಗರಿಕರಿಗೆ. ಆದುದರಿಂದ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗದಿರೋಣ. ಅನಿವಾರ್ಯವಾದರೆ ಗರಿಷ್ಠ ಸುರಕ್ಷತೆಯತ್ತ ಗಮನ ನೀಡಲು ಮರೆಯದಿರಿ.

6. ಮನೆಗೆ ವಾಪಸ್‌ ಬಂದ ಕೂಡಲೇ ಸೋಪ್‌ನಿಂದ ಸರಿಯಾಗಿ ಕೈ ತೊಳೆದುಕೊಳ್ಳೋಣ. ಬಟ್ಟೆ ಬರೆಗಳನ್ನು ಪ್ರತ್ಯೇಕವಾಗಿರಿಸಿ ಸೋಪ್‌ ಬಳಸಿ ತೊಳೆದು ಸರಿಯಾಗಿ ಒಣಗಿಸಿದ ಬಳಿಕ ಬಳಸೋಣ.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.: 9148594259

Advertisement

Udayavani is now on Telegram. Click here to join our channel and stay updated with the latest news.

Next