Advertisement

ಆರೋಗ್ಯ ರಕ್ಷಣೆಗೆ ಕೆಲವು ಟಿಪ್ಸ್‌

01:34 PM Dec 25, 2018 | |

ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ತಂಪಾದ ವಾತಾವರಣದ ಕಾರಣ ನಮ್ಮ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ಸಂದುಗಳಲ್ಲಿ ಹೆಚ್ಚು ನೋವು, ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಮ್ಮ ಮೈ ಕೈ ಚರ್ಮಗಳು ಹೆಚ್ಚು ಬಿರಿಯುತ್ತವೆ. ಚಳಿಗಾಲದಲ್ಲಿ ಸೋಂಕುಗಳು ಬಹಳ ಬೇಗ ಹರಡುತ್ತದೆ ಮತ್ತು ಗಾಯಗಳಾದರೆ ಅದು ಬೇಗ ವಾಸಿಯಾಗುವುದಿಲ್ಲ. ಆದ್ದರಿಂದ ಆರೋಗ್ಯದ ಬಗ್ಗೆ ಚಳಿಗಾಲದಲ್ಲಿ ತುಸು ಹೆಚ್ಚು ಕಾಳಜಿ ವಹಿಸಬೇಕು. ಮನೆಯಲ್ಲೇ ಸಿಗುವ ಸಣ್ಣ ಪುಟ್ಟ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಬಹುದು.

Advertisement

ಬ್ಲಾಕ್‌ ಟಿ
ಪ್ರತಿನಿತ್ಯ ಬ್ಲಾಕ್‌ ಟಿ ಯನ್ನು ಬೆಳಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹವನ್ನು ತುಂಬಾ ಹಗುರವಾಗಿ ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಹೀಗಾಗಿ ಬ್ಲಾಕ್‌ ಟೀ ಸೇವನೆ ಒಂದು ಉತ್ತಮ ಅಭ್ಯಾಸ.

ನಿಂಬೆ ಹಣ್ಣು
ನಿಂಬೆ ಹಣ್ಣಿನ ಉಪಯೋಗ ಯಾರಿಗೆ ತಿಳಿದಿಲ್ಲ ಹೇಳಿ. ಬೆಳಗ್ಗೆ ಹೊತ್ತು ನಿಂಬೆಹಣ್ಣಿನ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಚಳಿಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಂದ ಮುಕ್ತರಾಗಬಹುದು. ಪ್ರತಿನಿತ್ಯ ನಿಂಬೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ನಮ್ಮ ದೇಹದ ತೂಕ ಕೂಡ ಕಡಿಮೆಯಾಗುತ್ತದೆ. ಇದು ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ ಪದಾರ್ಥವಾಗಿದೆ. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹದ ಆಲಸ್ಯ ಕಡಿಮೆಯಾಗಿ ಹೆಚ್ಚು ಲವಲವಿಕೆಯಿಂದ ಇರಬಹುದು. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಚಳಿಗಾಲದಲ್ಲಿ ಆಗುವ ಅಲರ್ಜಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಶುಂಠಿ
ಚಳಿಗಾಲದಲ್ಲಿ ಶೀತ, ಕೆಮ್ಮು, ನೆಗಡಿ ಸರ್ವೇ ಸಾಮಾನ್ಯ. ಶುಂಠಿಯ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಗಂಟಲಿನ ನೋವಿನಿಂದ ಬಳಲುತ್ತಿದ್ದರೆ ಶುಂಠಿಯನ್ನು ನೀರು ಮತ್ತು ಜೇನುತುಪ್ಪದ ಜತೆಗೆ ಮಿಶ್ರಣ ಮಾಡಿ ಕುಡಿಯಿರಿ. ಇದರಿಂದ ಗಂಟಲಿನ ನೋವು ದೂರವಾಗುವುದು.

Advertisement

ಜೇನು ತುಪ್ಪ
ಜೇನು ತುಪ್ಪ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ. ಅಲ್ಲದೆ ಇದು ಜ್ವರ ಮುಂತಾದ ಸೋಂಕು ದೇಹಕ್ಕೆ ತಗುಲದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನು ತುಪ್ಪ ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು.

ಕೊಬ್ಬರಿ ಎಣ್ಣೆ
ಚಳಿಗಾಲ ಬಂತೆಂದರೆ ಚರ್ಮವು ಬಿರುಕು ಬಿಡಲು ಶುರು ಮಾಡುತ್ತದೆ. ಅದಕ್ಕಾಗಿ ಮಾರ್ಕೆಟ್‌ನಲ್ಲಿ ಸಿಗುವ ಕೆಮಿಕಲ್‌ಯುಕ್ತ ಕ್ರೀಮ್‌ಗಳನ್ನು ಹಚ್ಚುವ ಬದಲು ಮನೆಯಲ್ಲೇ ಸಿಗುವ ಕೊಬ್ಬರಿ ಎಣ್ಣೆಯನ್ನು ನಮ್ಮ ಚರ್ಮಕ್ಕೆ ಪ್ರತಿನಿತ್ಯ ಹಚ್ಚುವುದರಿಂದ ಚರ್ಮ ಬಿರುಕು ಬಿಡುವುದನ್ನು ತಡೆಯಬಹುದು. 

ದಾಳಿಂಬೆ
ದೇಹವನ್ನು ಆರೋಗ್ಯವಾಗಿಡಲು ಮತ್ತು ಬಿಳಿ ರಕ್ತಕಣಗಳು ಆರೋಗ್ಯವಾಗುವಂತೆ ನೋಡಿಕೊಳ್ಳಲು ದಾಳಿಂಬೆ ಹಣ್ಣಿನ ಸೇವನೆ ಅತ್ಯುತ್ತಮ.

 ಕಾರ್ತಿಕ್‌ ಚಿತ್ರಾಪುರ 

Advertisement

Udayavani is now on Telegram. Click here to join our channel and stay updated with the latest news.

Next