Advertisement

ವಿವಾಹಿತ ಮಹಿಳೆ ಒಂದು ಪೆಗ್ ವೈನ್ ಮಾತ್ರ ಕುಡಿಯಬೇಕು…ಅಬ್ಬಾ ಕೆಲವು ದೇಶಗಳ ಕಾನೂನುಗಳೇ ವಿಚಿತ್ರ!

11:26 AM Jul 24, 2021 | ಗಿರೀಶ್ ಗಂಗೇನಹಳ್ಳಿ |
ನಾಯಿಗಳನ್ನ ಪ್ರತಿನಿತ್ಯ ವಾಕಿಂಗ್ ಮಾಡಿಸಲೇಬೇಕು. ರೋಮ್ ನಲ್ಲಿ ಪ್ರಾಣಿಗಳ ಹಿಂಸೆಯನ್ನ ತೀವ್ರವಾಗಿ ವಿರೋಧಿಸಲಾಗುತ್ತೆ. ಇಲ್ಲಿ ಪ್ರತಿನಿತ್ಯ ಸಾಕುನಾಯಿಗಳನ್ನ ವಾಕಿಂಗ್ ಕರೆದುಕೊಂಡು ಹೋಗಲೇಬೇಕು. ಇಲ್ಲದೇ ಇದ್ದ ಪಕ್ಷದಲ್ಲಿ 65 ಡಾಲರ್ ತಂಡ ತೆರಬೇಕಾಗುತ್ತೆ. ಇದು ಕನಿಷ್ಠ ದಂಡ. ಆ ಮೊತ್ತ ಇನ್ನೂ ಹೆಚ್ಚಾಗಲೂಬಹುದು. ಅಷ್ಟೇ ಯಾಕೆ ಗೋಲ್ಡ್ ಫಿಶ್ ಗಳನ್ನ ಚಿಕ್ಕ ಬೌಲ್ ಅಥವಾ ಸಣ್ಣ ಅಕ್ವೇರಿಯಮ್ ನಲ್ಲಿ ಸಾಕುವಂತಿಲ್ಲ...
Now pay only for what you want!
This is Premium Content
Click to unlock
Pay with

ಪ್ರಪಂಚದಲ್ಲಿ ಅನೇಕ ವಿಚಿತ್ರ ಕಾನೂನು ನಿಯಮಗಳಿವೆ. ಕೆಲವೊಂದು ತೀರಾ ವಿಚಿತ್ರ ಎನಿಸಿದ್ರು, ಇವುಗಳು ಇರೋದಂತು ಸತ್ಯ. ಅಂತಹದ್ದೇ ಕೆಲ ಕಾನೂನುಗಳು, ಯಾವ ದೇಶಗಳಲ್ಲಿ ಜಾರಿಯಾಗಿವೆ. ಯಾತಕ್ಕಾಗಿ ಈ ಕಾನೂನುಗಳಿವೆ ಎಂಬುದೇ ಒಂದು ಕುತೂಹಲಕರ ಸಂಗತಿಯಾಗಿದೆ.

Advertisement

ಗ್ರೀಸ್ ನ ಅಕ್ರೋಪೋಲಿಸ್ : ಈ ಪ್ರದೇಶದಲ್ಲಿ ಹೈ ಹೀಲ್ಸ್ ಚಪ್ಪಲಿ ಧರಿಸುವುದನ್ನು ನಿಷೇಧ ಮಾಡಲಾಗಿದೆ. ಹೌದು 2009ರಲ್ಲಿ ಇಲ್ಲಿ ಹೈ ಹೀಲ್ಸ್ ಗಳನ್ನ ಬ್ಯಾನ್ ಮಾಡಲಾಗಿದೆ. ಯಾರಾದರೂ ಹೈ ಹೀಲ್ಸ್ ಧರಿಸಿದ್ದು ಕಂಡು ಬಂದ್ರೆ ಅಂಥವರಿಗೆ ದಂಡ ಅಥವಾ ಜೈಲು ಶಿಕ್ಷೆಯೂ ಆಗಬಹುದು. ಇದರಿಂದಾಗಿ ಪಾದಗಳಿಗೆ ಹಾನಿಯಾಗಬಹುದೆಂಬ ಕಾರಣಕ್ಕೆ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಶ್ರೀಲಂಕಾ : ಇಲ್ಲಿ ಯಾರೇ ಆಗಲಿ ಬುದ್ಧನ ಜೊತೆಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತಿಲ್ಲ ಸೆಲ್ಫಿ ಕ್ರೇಜ್ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರ ವರೆಗೂ ಇದೆ. ಎಲ್ಲಾ ಜಾಗಗಳಲ್ಲೂ ಸೆಲ್ಫಿ ತೆಗೆದುಕೊಳ್ಲೋ ಕ್ರೇಜ್ ಇರುತ್ತೆ. ಆದ್ರೆ ಶ್ರೀಲಂಕಾದಲ್ಲಿ ಬುದ್ಧನ ಜೊತೆಗೆ ಸೆಲ್ಫಿ ತೆಗೆದುಕೊಳ್ಳೋ ಮುನ್ನ ಎಚ್ಚರ. ಇಲ್ಲಿ ಬುದ್ಧನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ ಅದು ಕಾನೂನುಬಾಹಿರ. ಆದ್ರೆ ಕೆಲವೆಡೆ ಮಾತ್ರವೇ ಈ ಕಾನೂನು ಅನ್ವಯ ಆಗುತ್ತೆ. ಇನ್ನು ಬುದ್ಧನಿಗೆ ಬೆನ್ನು ತೋರಿಸಿ ಬುದ್ಧನ ಕಡೆ ಬೆರಳು ಮಾಡಿ ತೋರಿಸಿಕೊಂಡು ಸೆಲ್ಫಿ ತೆಗೆದುಕೊಳ್ಳಬಾರದು. ಹೀಗೆ ಮಾಡೋದ್ರಿಂದ ಬುದ್ಧನಿಗೆ ಅಪಮಾನವಾದಂತೆ ಎಂಬುದು ಈ ನಿಯಮದ ಹಿಂದಿನ ಉದ್ದೇಶ.

ಸಿಂಗಾಪುರ : ಚೂಯಿಂಗ್ ಗಮ್ ಅಗೆಯುವುದು ಕಾನೂನುಬಾಹಿರ ( ಅಪರಾಧ)ಸಾಮಾನ್ಯವಾಗಿ ಪ್ರಪಂಚದ ಎಲ್ಲೆಡೆ ಬಹುತೇಕ ಜನರು ಚೂಯಿಂಗ್ ಗಮ್ ಅಗೆಯುತ್ತಾರೆ. ನಮ್ಮ ಭಾರತದಲ್ಲೂ ಇದು ಸಾಮಾನ್ಯ. ಆದ್ರೆ ಸಿಂಗಾಪುರದಲ್ಲಿ ಕಾನೂನು ಬಾಹಿರ ಅಂದ್ರೆ ನೀವು ನಂಬಲೇಬೇಕು. ಹೌದು ಸಿಂಗಾಪುರದಲ್ಲಿ 1992ರಲ್ಲಿ ಎಲ್ಲಾ ರೀತಿಯ ಚೂಯಿಂಗ್ ಗಮ್ ಅಗೆಯುವುದನ್ನ , ಮಾರಾಟ ಮಾಡುವುದನ್ನ, ತಯಾರಿಸುವುದನ್ನ ನಿಷೇಧಿಸಲಾಗಿದೆ. ಹೀಗೆ ಮಾಡಿದಲ್ಲಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. – ಇದಕ್ಕೆ ಕಾರಣ ಚೂಯಿಂಗ್ ಗಮ್ ಗಳನ್ನ ರಸ್ತೆಯಲ್ಲಿ ಸ್ವಚ್ಛಗೊಳಿಸುವುದು ಬಹಳವೇ ಕಷ್ಟ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಡೆನ್ಮಾರ್ಕ್ : ಮಾಸ್ಕ್ ಧರಿಸಿದ್ರೆ ಶಿಕ್ಷೆ ಕಾಯಂ ಕೋವಿಡ್ ಹಾವಳಿಯಿಂದ ಇಡೀ ಪ್ರಪಂಚದಲ್ಲಿ ಜನರು ಮಾಸ್ಕ್ ಇಲ್ಲದೇ ಮನೆಯಿಂದ ಹೊರ ಬರುವಂತಿಲ್ಲ.. ಆದ್ರೆ ಡೆನ್ಮಾರ್ಕ್ ನಲ್ಲಿ ಒಂದು ಕಾನೂನಿದೆ. ಅದೇನೆಂದ್ರೆ ಇಲ್ಲಿನ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಹೆಲ್ಮೆಟ್, ಸ್ಕಾರ್ಫ್, ಹ್ಯಾಟ್ಸ್, ನಕಲಿ ದಾಡಿಗಳು, ಅಷ್ಟೇ ಯಾಕೆ ಬುರ್ಕಾಗಳನ್ನ ಧರಿಸೋ ಹಾಗಿಲ್ವಂತೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗಳನ್ನ ಮುಚ್ಚಿಕೊಂಡು ಓಡಾಡಿದ್ರೆ ಅದು ಅಪರಾಧವಂತೆ. ಈ ವಿವಾದಾತ್ಮಕ ಕಾನೂನು 2018ರಲ್ಲಿ ಜಾರಿಯಾಯ್ತು. ಇದಕ್ಕೆ ಹಲವು ವಿರೋಧಗಳು ಸಹ ವ್ಯಕ್ತವಾಗಿದ್ದವು. – ಅಂದ್ಹಾಗೆ ಕೆಲವು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿರುವವರ ಪತ್ತೆ ಹಚ್ಚುವಿಕೆಗೆ ಜನರ ಮಧ್ಯೆಯೂ ಅಂತವರನ್ನ ಗುರುತಿಸುವ ಸಲುವಾಗಿ ಇಂತಹ ಕಾನೂನನ್ನ ಜಾರಿ ಮಾಡಲಾಗಿದೆಯಂತೆ.

Advertisement

ಆಸ್ಟ್ರೇಲಿಯಾ : ಗಾಳಿಪಟ ಹಾರಿಸುವುದು ಅಪರಾಧ ನಮ್ಮಲ್ಲಿ ಸಾಮಾನ್ಯವಾಗಿ ಗಾಳಿಪಟ ಹಾರಿಸೋದನ್ನ ಎಲ್ಲರೂ ಇಷ್ಟ ಪಡ್ತೇವೆ. ಇದಕ್ಕಾಗಿ ಮೇಳವನ್ನೂ ಸಹ ಹಮ್ಮಿಕೊಳ್ಳಲಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಾಳಿಪಟ ಹಾರಿಸುವುದು ಕಾನೂನು ಬಾಹಿರವಾಗಿದೆ. ಹೌದು – ಇತರರಿಗೆ ತೊಂದರೆಯಾಗುವ ಸಾಧ್ಯತೆಯಿಂದ ಈ ಕಾನೂನನ್ನ ತರಲಾಗಿದೆ.

ಜಪಾನ್ : ಕತ್ತಲಾದ ನಂತರ ಅಂದ್ರೆ ಮಧ್ಯರಾತ್ರಿಯಲ್ಲಿ ಡ್ಯಾನ್ಸ್ ಮಾಡುವುದು ಅಪರಾಧ ಹೌದು.. ಅಮೆರಿಕಾದ ಸೈನಿಕರು ಜಪಾನ್ ನ ವಶಪಡಿಸಿಕೊಂಡಿದ್ದ ವೇಳೆ ಅಂದ್ರೆ 1948 ರಲ್ಲಿ ಈ ಕಾನೂನನ್ನ ತರಲಾಗಿತ್ತು. – ಜಪಾನ್ ನ ಒಳ್ಳೆಯ ಸಂಸ್ಕೃತಿಯನ್ನ ಅಮೇರಿಕನ್ನರು ಹಾಳು ಮಾಡ್ತಿದ್ದಾರೆಂಬ ಉದ್ದೇಶಕ್ಕೆ ಈ ನಿಯಮ ಜಾರಿ ಮಾಡಲಾಗಿತ್ತು. ಆದ್ರೆ 2015ರಲ್ಲಿ ಈ ನಿಯಮವನ್ನ ಹಿಂಪಡೆಯಲಾಯಿತಾದರೂ ಮಧ್ಯರಾತ್ರಿಯಲ್ಲಿ ಡ್ಯಾನ್ಸ್ ಮಾಡಿದರೂ ಕತ್ತಲಲ್ಲಿ ನೃತ್ಯ ಮಾಡಿದ್ರೆ ತಕ್ಕ ದಂಡ ತೆರಬೇಕಾಗುತ್ತೆ. ‘

ರೋಮ್ : ನಾಯಿಗಳನ್ನ ಪ್ರತಿನಿತ್ಯ ವಾಕಿಂಗ್ ಮಾಡಿಸಲೇಬೇಕು. ರೋಮ್ ನಲ್ಲಿ ಪ್ರಾಣಿಗಳ ಹಿಂಸೆಯನ್ನ ತೀವ್ರವಾಗಿ ವಿರೋಧಿಸಲಾಗುತ್ತೆ. ಇಲ್ಲಿ ಪ್ರತಿನಿತ್ಯ ಸಾಕುನಾಯಿಗಳನ್ನ ವಾಕಿಂಗ್ ಕರೆದುಕೊಂಡು ಹೋಗಲೇಬೇಕು. ಇಲ್ಲದೇ ಇದ್ದ ಪಕ್ಷದಲ್ಲಿ 65 ಡಾಲರ್ ತಂಡ ತೆರಬೇಕಾಗುತ್ತೆ. ಇದು ಕನಿಷ್ಠ ದಂಡ. ಆ ಮೊತ್ತ ಇನ್ನೂ ಹೆಚ್ಚಾಗಲೂಬಹುದು. ಅಷ್ಟೇ ಯಾಕೆ ಗೋಲ್ಡ್ ಫಿಶ್ ಗಳನ್ನ ಚಿಕ್ಕ ಬೌಲ್ ಅಥವಾ ಸಣ್ಣ ಅಕ್ವೇರಿಯಮ್ ನಲ್ಲಿ ಸಾಕುವಂತಿಲ್ಲ. ಬದಲಾಗಿ ದೊಡ್ಡ ಅಕ್ವೇರಿಯಮ್ ಅಥವಾ ಸ್ವಿಮ್ಮಿಂಗ್ ಫೂಲ್ ಗಳಲ್ಲೇ ಸಾಕಬೇಕು. ಇಲ್ಲ ತಂಡ ತೆರಬೇಕಾಗುತ್ತೆ.

ಸ್ಪೇನ್ : ಮರಳಿನ ಕಟ್ಟಡಗಳನ್ನ ಕಟ್ಟುವುದು ಸ್ಪೇನ್ ನಲ್ಲಿ ಅಪರಾಧ. ಸಮುದ್ರದ ಪಕ್ಕದಲ್ಲಿ ಮರಳಿನ ಕಾಸ್ಟಲ್ಸ್ ಅಥವಾ ಕಟ್ಟಡಗಳನ್ನು ಕಟ್ಟುವುದು ಅಪರಾಧ. ಹೀಗೆ ಮಾಡಿದಲ್ಲಿ ಧಮಡ ಕಟ್ಟಬೇಕಾಗುತ್ತೆ. ಮಕ್ಕಳು ಸಹ ಈ ಈ ರೀತಿಯಾದ ಮರಳಿನ ದಿಬ್ಬಗಳನ್ನ ಕಟ್ಟುವಂತಿಲ್ಲ. ಹಾಗೆ ಮಾಡಿದ ಪಕ್ಷದಲ್ಲಿ ಪೋಷಕರು ತಂಡ ಕಟ್ಟಬೇಕು.

ಬೋಲಿವಿಯಾ : ಇಲ್ಲಿ ವಿವಾಹಿತ ಮಹಿಳೆಯರು ಒಂದಕ್ಕಿಂತ ಹೆಚ್ಚು ಕಪ್ ವೈನ್ ಸೇವಿಸುವಂತಿಲ್ಲ. ಮದುವೆಯಾಗದ ಯುವತಿಗರಿಗೆ ಈ ಕಾನೂನು ಅನ್ವಯ ಆಗೋದಿಲ್ಲ. ಆದ್ರೆ ಮದುವೆಯಾದ ಮಹಿಳೆಯರು ಮಾತ್ರ ಒಂದಕ್ಕಿಂತ ಹೆಚ್ಚು ಕಪ್ ವೈನ್ ಸೇವನೆ ಮಾಡುವಂತಿಲ್ಲ. ಅದ್ರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಆಲ್ಕೋಹಾಲ್ ಕುಡಿಯೋದು ಕಂಡು ಬಂದ್ರೆ ಅವರ ಪತಿ ಡೈವೋರ್ಸ್ ಸಹ ಕೊಡಬಹುದಾದ ಕಾನೂನು ಇದೆ. – ಇನ್ನೂ ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಮಹಿಳೆಯರು ತಪ್ಪು ದಾರಿ ಹಿಡಿಯಬಹುದೆಂಬ ನಂಬಿಕೆಯಿಂದ ಈ ಕಾನೂನು ಜಾರಿ ಮಾಡಲಾಗಿದೆ.

ಜಾರ್ಜಿಯಾ : ನಿಮ್ಮ ಸಾಕು ಕೋಳಿಗಳು ರಸ್ತೆ ದಾಟಿದ್ರೆ ಅಪರಾಧ. ಈ ದೇಶದಲ್ಲಿ ಜನರು ಅವರು ಸಾಕಿದ ಕೋಳಿಗಳು ರಸ್ತೆ ದಾಟಿದ್ರೆ ಅಪರಾಧ. ಇದಕ್ಕೆ ಸೂಕ್ತ ದಂಡವನ್ನೂ ತೆರಬೇಕಾಗುತ್ತೆ . ಕೋಳಿಗಳ ಕಳ್ಳತನವಾದರೂ ಸಹ ದಂಡ ಕಟ್ಟಬೇಕಾಗುತ್ತೆ.

ಇಟಲಿ : ದಿನಕ್ಕೆ 3 ಬಾರಿ ನಾಯಿಗಳನ್ನ ವಾಕಿಂಗ್ ಕರೆದೊಯ್ಯುವುದು ಇಟಲಿಯ ಟ್ಯೂರಿನ್ ನಲ್ಲಿ ಈ ನಿಯಮವನ್ನ ಜನರ ಅನುಸರಿಸಬೇಕು. ದಿನಕ್ಕೆ 3 ಬಾರಿ ನಾಯಿಗಳನ್ನ ವಾಕಿಂಗ್ ಮಾಡಿಸಲೇಬೇಕು. ಇಲ್ಲದೇ ಹೋದ ಪಕ್ಷದಲ್ಲಿ 500 ಯೂರೋಗಳಷ್ಟು ದಂಡ ಕಟ್ಟಲೇಬೇಕು.

Advertisement

Udayavani is now on Telegram. Click here to join our channel and stay updated with the latest news.