Advertisement

ಕೆಲವೊಂದು ದಾಖಲೆಗಳು; ಒಂದಿಷ್ಟು ವಿಶೇಷಗಳು

06:20 AM Nov 08, 2018 | Team Udayavani |

ಬೆಂಗಳೂರು: ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಾಗ ರಾಜಕೀಯ ಪಕ್ಷಗಳು ಸೇರಿ ನಾಲ್ಕಾರು ತಿಂಗಳ ಅವಧಿಗೆ “ಈ ಚುನಾವಣೆ ಬೇಕಿರಲಿಲ್ಲ’ ಎಂದು ಹೇಳಿದವರೇ ಹೆಚ್ಚು.

Advertisement

ಆದರೆ, ಚುನಾವಣೆಯ ಫ‌ಲಿತಾಂಶ ಎಲ್ಲ ಲೆಕ್ಕಚಾರಗಳನ್ನೂ ತಲೆಕೆಳಗೆ ಮಾಡಿಬಿಟ್ಟಿತು.ಇದೇ ವೇಳೆ ಈ ಉಪ ಚುನಾವಣೆ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.

ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳು ದಾಖಲೆ ಅಂತರದ ಗೆಲುವು ಕಂಡಿದ್ದರೆ,ಶಿವಮೊಗ್ಗ ಲೋಕಸಭಾ ಕ್ಷೇತ್ರ ದಾಖಲೆ ಅಂತರದ ಸೋಲಿಗೆ ಸಾಕ್ಷಿಯಾಯಿತು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈವರೆಗಿನ ಅತಿ ಹೆಚ್ಚು ಅಂತರದ ದಾಖಲೆ 1977ರ ಲೋಕಸಭಾ ಚುನಾವಣೆಯಲ್ಲಿ 1,45,544 ಆಗಿತ್ತು. ಇದೀಗ 40 ವರ್ಷಗಳ ದಾಖಲೆ ಹಿಂದಿಕ್ಕಿರುವ ಉಗ್ರಪ್ಪ 2,28,255 ಮತಗಳ ದಾಖಲೆ ಅಂತರದಿಂದ ಗೆದ್ದಿದ್ದಾರೆ.

ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 1998ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಂಬರೀಷ್‌ 1,80,523 ಮತಗಳ ಅಂತರದಿಂದ ಗೆದ್ದಿದ್ದು, ಈವರೆಗಿನ ದಾಖಲೆಯಾಗಿತ್ತು.ಇದೀಗ ಎಲ್‌.ಆರ್‌. ಶಿವರಾಮೇಗೌಡರು 2,89,371 ಮತಗಳ ಅಂತರದಿಂದ ಗೆದ್ದು ಹಿಂದಿನ ದಾಖಲೆ ಮುರಿದಿದ್ದಾರೆ.

Advertisement

ಹಾಗೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಈ ಉಪ ಚುನಾವಣೆ ಭಾರೀ ಕಡಿಮೆ ಅಂತರದ ಸೋಲಿನ ದಾಖಲೆ ಬರೆದಿದೆ. 2009ರಲ್ಲಿ ಬಿ.ವೈ. ರಾಘವೇಂದ್ರ 54,893 ಮತಗಳ ಅಂತರದಿಂದ ಎಸ್‌. ಬಂಗಾರಪ್ಪ ವಿರುದಟಛಿ ಗೆದ್ದಿದ್ದು, ಇದೀಗ ಬಂಗಾರಪ್ಪ ಪುತ್ರನ ವಿರುದಟಛಿವೂ 52,148 ಮತಗಳ ಅಂತರದಿಂದ ಗೆಲ್ಲುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಈವರೆಗಿನ ಇತಿಹಾಸದ ಕಡಿಮೆ ಅಂತರದ ಗೆಲವಿನ ದಾಖಲೆ ಬರೆದಿದ್ದಾರೆ.

ಇದು ಮೂವರು ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶೇಷತೆ. 1967ರಲ್ಲಿ ಜೆ.ಎಚ್‌. ಪಟೇಲರು ಈ ಕ್ಷೇತ್ರದಿಂದ ಆಯ್ಕೆಯಾಗಿ, ಸಂಸತ್ತಿನಲ್ಲಿ ಕನ್ನಡ ಭಾಷಣ ಮಾಡಿದ ಮೊದಲಿಗರು ಎಂಬ ಖ್ಯಾತಿ ಗಳಿಸಿದರು. ಅದೇ ರೀತಿ ಎಸ್‌. ಬಂಗಾರಪ್ಪ ಹಾಗೂ ಬಿ.ಎಸ್‌. ಯಡಿಯೂರಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸೇರಿ ಮೂವರು ಮಹಿಳೆಯರು ಪ್ರತಿನಿಧಿಸಿದ್ದು ಬಳ್ಳಾರಿ ಲೋಕಸಭಾ ಕ್ಷೇತ್ರದ
ಹಿರಿಮೆಯಾಗಿದೆ. 1999ರಲ್ಲಿ ಸೋನಿಯಾಗಾಂಧಿ ಈ ಕ್ಷೇತ್ರದಿಂದ ಗೆದ್ದಿದ್ದರು. ಅದೇ ರೀತಿ ಬಸವರಾಜೇಶ್ವರಿ ಹಾಗೂ ಜೆ. ಶಾಂತ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ ಇನ್ನಿಬ್ಬರು ಮಹಿಳೆಯರಾಗಿದ್ದಾರೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು 1980ರಲ್ಲಿ ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next