ಶಿವಮೊಗ್ಗ: ಮಂಗಳೂರು ಘಟನೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಶಂಕಿತ ಉಗ್ರ ಮತಿನ್ ನನ್ನು ತಪ್ಪಿಸಿಡುವ ಪ್ರಯತ್ನವನ್ನು ಕೆಲವು ಸಂಘಟನೆಗಳು ಮಾಡಿವೆ. ಭೂಮಿ ಮೇಲೆ ಎಲ್ಲಿಯೇ ಇದ್ದರೂ ಸಿಗದೇ ಎಲ್ಲೂ ಹೋಗಲ್ಲ. ನಮ್ಮ ಪೊಲೀಸರು ಹಿಡಿದು ತರುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಬ್ಲಾಸ್ಟ್ ಪ್ರಕರಣದ ಕೂಲಂಕಷ ತನಿಖೆ ನಡೆಯುತ್ತಿದೆ. ಆತನ ಆರೋಗ್ಯ ಸುಧಾರಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಸುಧಾರಿಸಿದ ನಂತರ ಆತನ ಮಾಹಿತಿ ಆಧಾರದ ಮೇಲೆ ವಿಚಾರಣೆ ನಡೆಯಲಿದೆ. ಅನೇಕ ಮಾಹಿತಿ ದೊರೆತಿದೆ. ಈ ಸಂದರ್ಭದಲ್ಲಿ ಹೇಳಲಾಗುವುದಿಲ್ಲ. ಯಾರನ್ನು ವಶಕ್ಕೆ ಪಡೆದಿಲ್ಲ, ಕೆಲವರಿಂದ ಮಾಹಿತಿ ಪಡೆಯಲು ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ಆರೋಗ್ಯ ಸರಿಹೋದ ಮೇಲೆ ತನಿಖೆ ಒಂದು ಹಂತಕ್ಕೆ ಬರಲಿದೆ ಎಂದರು.
ಸ್ಯಾಟಲೈಟ್ ಪೋನ್ ಬಳಕೆ ವಿಚಾರವಾಗಿ ಮಾತನಾಡಿದ ಆರಗ, ಸ್ಯಾಟಲೈಟ್ ಪೋನ್ ಬಳಕೆ ಬಗ್ಗೆ ಖಾತರಿಯಾಗಿಲ್ಲ. ಕರಾವಳಿ ಭಾಗದಲ್ಲಿ ಹಡಗುಗಳಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಮಾಡುತ್ತಾರೆ. ಪರಿಣಿತರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆತ ಎಲ್ಲೆಲ್ಲಿ ಓಡಾಡಿದ್ದಾನೆ. ಅಲ್ಲೆಲ್ಲಾ ತಂಡ ಮಾಡಿ ವಿಶೇಷವಾಗಿ ತನಿಖೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ನೀವು ಹೇಳಿದಂತೆ ಆಗಲ್ಲ…ಕೊಲಿಜಿಯಂ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ರಿಜಿಜುಗೆ ಸುಪ್ರೀಂ ಚಾಟಿ
ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಘಟನೆ ನಡೆಯುತ್ತಿದೆ. ಎರಡು ಸರಕಾರಗಳು ಮಾತುಕತೆ ನಡೆಸುತ್ತಿವೆ. ಎರಡು ಕಡೆ ಎಡಿಜಿಪಿ ಮಟ್ಟದಲ್ಲಿ ಸಭೆ ನಡೆದಿವೆ. ಗಡಿ ಜಿಲ್ಲೆಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಯಾರೇ ಕಾನೊನು ಕೈಗೆತ್ತಿಕೊಂಡರೂ ಖಂಡಿತ ಬಿಡಲ್ಲ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದರು.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಮತ್ತೆ ಆರಗ ಜ್ಞಾನೇಂದ್ರ ಆಯ್ಕೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ, ನಾನು ಅವರ ಗರಡಿಯಲ್ಲಿ ಪಳಗಿದವನು. ಆ ಪ್ರೀತಿ ವಿಶ್ವಾಸ ಇದೆ. ಟಿಕೆಟ್ ಕೊಡುವುದೇ ಅವರು. ಅವರ ಬಾಯಲ್ಲಿ ಇಂತಹ ಮಾತು ಬಂದಿದೆ ಅಂದರೆ ನನಗೆ ಖುಷಿಯಾಗಿದೆ ಎಂದರು.