Advertisement
ಅತ್ಯಧಿಕ 5 ಶತಕಇನ್ನೊಮ್ಮೆ ಮೂರಂಕೆಯ ಗಡಿ ದಾಟಿದರೆ ವಿಶ್ವಕಪ್ ಕೂಟವೊಂದರಲ್ಲಿ ಅತೀ ಹೆಚ್ಚು 5 ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮ ಅವರದಾಗುತ್ತದೆ. ಕುಮಾರ ಸಂಗಕ್ಕರ ಕೂಡ 4 ಶತಕ ಬಾರಿಸಿದ್ದಾರೆ (2015). ತಮ್ಮ 3 ದ್ವಿಶತಕಗಳಲ್ಲಿ ಎರಡನ್ನು ಶ್ರೀಲಂಕಾ ವಿರುದ್ಧವೇ ಸಿಡಿಸಿರುವ ರೋಹಿತ್, ಶನಿವಾರ ಇಂಥದೇ ಕಮಾಲ್ ಮಾಡಿಯಾರೇ ಎಂಬ
ಕುತೂಹಲವೂ ಇದೆ.
ವಿಶ್ವಕಪ್ ಕೂಟವೊಂದರಲ್ಲಿ ಅತ್ಯಧಿಕ 673 ರನ್ ಬಾರಿಸಿದ ತೆಂಡುಲ್ಕರ್ ದಾಖಲೆಯನ್ನು ಮುರಿಯುವ ಅವಕಾಶವೂ ರೋಹಿತ್ ಮುಂದಿದೆ. ಇದಕ್ಕಾಗಿ ಅವರು 130 ರನ್ ಗಳಿಸಿದರೆ ಸಾಕು. ಸದ್ಯ ಈ ಯಾದಿಯಲ್ಲಿ ರೋಹಿತ್ 5ನೇ ಸ್ಥಾನದಲ್ಲಿದ್ದಾರೆ. ಇವರಿಗಿಂತ ಮುಂದಿರುವ ಉಳಿದ ಮೂವರೆಂದರೆ ಹೇಡನ್ (659), ಜಯವರ್ಧನೆ (548), ಗಪ್ಟಿಲ್ (547). ವರ್ಲ್ಡ್ ಕಪ್ ಗ್ರೂಪ್/ಲೀಗ್ ಹಂತದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯೂ ರೋಹಿತ್‌ಗೆ ಒಲಿಯಬಹುದು. ಸದ್ಯ ಇದು ತೆಂಡುಲ್ಕರ್ ಹೆಸರಲ್ಲಿದೆ (586). ಲಂಕಾ ಎದುರು 43 ರನ್ ಮಾಡಿದರೆ ರೋಹಿತ್ ಈ ದಾಖಲೆಯ ಒಡೆಯನಾಗುತ್ತಾರೆ.