Advertisement

ಪ್ರತಿಭಟನೆ ಹೆಸರಲ್ಲಿ ಆಸ್ತಿಪಾಸ್ತಿ ಹಾಳು ಮಾಡಿದ್ರೆ ಸಿಟ್ಟು ಬರಲ್ವಾ? : ರೆಡ್ಡಿ

10:08 AM Jan 07, 2020 | sudhir |

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುವವರು ದೇಶ ಬಿಟ್ಟು ಹೋಗಿ ಎಂದಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ ಇದೀಗ ಮುಸಲ್ಮಾನರ ಪರ ನಾವಿದ್ದೇವೆ. ದೇಶ ಬಿಟ್ಟು ಹೋಗುವ ಪರಿಸ್ಥಿತಿ ಯಾರಿಗೂ ಬರಲ್ಲ ಎನ್ನುವ ಮೂಲಕ ಮುಸಲ್ಮಾನರ ಬೆನ್ನಿಗೆ ನಿಂತಿದ್ದಾರೆ.

Advertisement

ಇಲ್ಲಿನ ಶ್ರೀನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶಬಿಟ್ಟು ಹೋಗುವ ಪರಿಸ್ಥಿತಿ ಯಾರಿಗೂ ಬರಲ್ಲ. ಮುಸಲ್ಮಾನರ ಪರ ನಾವಿದ್ದೇವೆ. ಬಿಜೆಪಿ ಎಲ್ಲರನ್ನೂ ಕಾಪಾಡುತ್ತದೆ. ದೇಶ ಬಿಡೋ ಪರಿಸ್ಥಿತಿ ಬಂದರೆ ನಾನೂ ಅವರ ಹಿಂದೆ ಹೋಗುತ್ತೇನೆ ಎಂದರು.

ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಇಲ್ಲಿನ ಸದಸ್ಯರು. ನೂರಕ್ಕೆ ನೂರರಷ್ಟು ಹೇಳುತ್ತೇನೆ ಭಾರತದಲ್ಲಿ ಹುಟ್ಟಿದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪೌರತ್ವ ವಿರೋಧಿಸುವುದಕ್ಕಾಗಿ ಪ್ರತಿಭಟನೆ, ಗಲಾಟೆ ಹಿಂಸೆ ಮಾಡಿದರೆ ಉಪಯೋಗವಿಲ್ಲ. ಹಲವೆಡೆ ಗಲಾಟೆಯಾಗಿದೆ. ಆದರೆ ಯಾವೊಬ್ಬ ಮುಸಲ್ಮಾನರು ದೂರು ನೀಡಿಲ್ಲ. ಕಾಂಗ್ರೆಸ್‌ ನಾಯಕರು ದೂರು ಕೊಟ್ಟಿದ್ದಾರೆ. ಇದೇ ವಿಷಯಕ್ಕೆ ದೇಶದಲ್ಲಿ 13,800 ಕೋಟಿ ರೂ. ಆಸ್ತಿಪಾಸ್ತಿ ಹಾನಿಯಾಗಿದೆ. ಈ ಕಾರಣಕ್ಕಾಗಿಯೇ ನಾನು ಮಾತನಾಡಿದ್ದೇನೆ ಹೊರತು, ನಾನು ಮುಸ್ಲಿಂ ವಿರೋಧಿಯಲ್ಲ ದೇಶದ ಆಸ್ತಿಪಾಸ್ತಿ ಹಾನಿಯಾದರೆ ನಮಗೆ ಕೋಪ ಬರುತ್ತದೆ ಎಂದರು.

ಪೌರತ್ವ ತಿದ್ದುಪಡಿ ಕಾನೂನು ವಿರೋಧ ಮಾಡುವುದಾದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಕಾಯ್ದೆ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡುವ ಸಲುವಾಗಿ ಕರಪತ್ರ ಹಂಚಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next