Advertisement

ಗೋಪಾಲಯ್ಯ ಪರ ಸೋಮಣ್ಣ ಮತ ಯಾಚನೆ

12:38 AM Nov 24, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರಾತಂಕವಾಗಿ ಪೂರ್ಣಾವಧಿ ಪೂರೈಸಲಿ ಎಂಬ ಭಾವನೆ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಮತದಾರರಲ್ಲಿ ಕಂಡುಬರುತ್ತಿದೆ ಎಂದು ಸಚಿವ ವಿ.ಸೋಮಣ್ಣ ಹರ್ಷ ವ್ಯಕ್ತಪಡಿಸಿದರು. ಕ್ಷೇತ್ರದ ಬಸವೇಶ್ವರನಗರ, ವೃಷಭನಗರ, ಕಿರ್ಲೋಸ್ಕರ್‌ ಕಾಲೋನಿ ಮುಂತಾದೆಡೆ ಸ್ಥಳೀಯ ಮುಖಂಡರ ಜತೆಗೂಡಿ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರ ಪರ ಪ್ರಚಾರ ಕೈಗೊಂಡು ಮಾತನಾಡಿದರು.

Advertisement

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅಭಿವೃದ್ಧಿಗಾಗಿ ಸ್ಥಿರ ಸರ್ಕಾರ ಆಡಳಿದಲ್ಲಿರಬೇಕೆಂಬ ವಾತಾವರಣ ಕ್ಷೇತ್ರದೆಲ್ಲೆಡೆ ಕಾಣುತ್ತಿದೆ. ಪ್ರಚಾರದ ವೇಳೆ ಮತದಾರರಿಂದ ನಿರೀಕ್ಷೆಗೂ ಮೀರಿದ ಪ್ರೀತಿ ಉತ್ಸಾಹ ಕಂಡಾಗ ಗೋಪಾಲಯ್ಯ ಗೆಲುವು ಖಾತ್ರಿಯಾಯಿತು. ಇದೊಂದು ಉತ್ತಮ ಬೆಳವಣಿಗೆ ಎಂದರು.

ಸಮಗ್ರ ಅಭಿವೃದ್ಧಿ ಕೈಗೊಂಡು ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಲೇಔಟ್‌ ಅನ್ನು ಮಾದರಿ ಕ್ಷೇತ್ರವನ್ನಾಗಿ ಗೋಪಾಲಯ್ಯ ಮಾಡುವುದು ಮತದಾರರಿಗೆ ಈಗಾಗಲೇ ಮನವರಿಕೆಯಾಗಿದೆ ಎಂದರು. ಪ್ರಚಾರದ ವೇಳೆ ಸಚಿವ ಸೋಮಣ್ಣ, ಮನೆ ಮನೆ ಮನೆಗೆ ತೆರಳಿ ಮತ ಯಾಚಿಸಿದರಲ್ಲದೆ, ಬಸ್‌ ನಿಲ್ದಾಣ, ಉದ್ಯಾನವನ ಸೇರಿ ಹಿರಿಯರು, ಆಟೋ ಚಾಲಕರು, ಸಾರ್ವಜನಿಕ ಸ್ಥಳಗಳಲ್ಲಿದ್ದವರಿಗೆ ಬಿಜೆಪಿ ಕರಪತ್ರ ನೀಡಿ, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದರು.

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಶನಿವಾರ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next