Advertisement
ಗಲ್ಫ್ ಆಫ್ ಈಡೆನ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ನೌಕಾಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ. ಮಾಲ್ಟಾದ ಹಡಗಿನ ಮೇಲೆ ಶಸ್ತ್ರ ಸಜ್ಜಿತ ಆರು ಮಂದಿ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ಕಡಲ್ಗಾವಲು ನೌಕೆ ಎಂ.ವಿ.ರುನ್‌ಗೆ ಸಂದೇಶ ರವಾನೆ ಯಾಯಿತು. ಕೂಡಲೇ ತೊಂದರೆಗೆ ಒಳಗಾದ ಹಡಗಿನತ್ತ ವಿಶೇಷ ವಿಮಾನವನ್ನು ಹಡಗಿನತ್ತ ಕಳುಹಿಸಲಾಯಿತು.ಡಿ.15 ನಮ್ಮ ದೇಶದ ವಿಮಾನ ಗಲ್ಫ್ ಆಫ್ ಈಡೆನ್‌ನಲ್ಲಿ ಕಡಲ್ಗಳ್ಳರ ಪ್ರಯತ್ನವನ್ನು ಹಿಮ್ಮೆಟ್ಟಿಸಿತು. ಈ ಸಂದರ್ಭದಲ್ಲಿ ಆರು ಮಂದಿ ಕಡಲ್ಗಳ್ಳರು ಪರಾರಿಯಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ಅವರು ಹೇಳಿದ್ದಾರೆ.