ಸೊಮಾಲಿಯಾ: ಮುಂಬೈನ ತಾಜ್ ಹೋಟೆಲ್‌ನ ಬಾಂಬ್ ದಾಳಿಯನ್ನು ನೆನಪಿಸುವಂತಹ ಮತ್ತೊಂದು ಘಟನೆ ಸೊಮಾಲಿಯಾದ ಹಯಾತ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆದಿದ್ದು, ಅವಘಡದಲ್ಲಿ ಸಾಕಷ್ಟು ಸಾವು- ನೋವುಗಳು ವರದಿಯಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಸೊಮಾಲಿಯಾ ರಾಜಧಾನಿ ಮೊಗಾದಿಶುನ ಹಯಾತ್ ಹೋಟೆಲ್ ಮೇಲೆ ಶುಕ್ರವಾರ ಅಲ್ಖೈದಾ ಜೊತೆಗೆ ಲಿಂಕ್ ಆಗಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಮನಬಂದಂತೆ ಗುಂಡು ಹಾರಿಸಿ, ಎರಡು ಕಾರು ಬಾಂಬ್ ಸ್ಪೋಟ್ ನಡೆಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳಾಗಿವೆ ಎಂದು ವರದಿಯಾಗಿದೆ.
ಒಂದು ಕಾರು ಹೋಟೆಲ್ ಬಳಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಸ್ಪೋಟಗೊಂಡರೇ, ಇನ್ನೊಂದು ಹೋಟೆಲ್‌ನ ಗೇಟ್‌ಗೆ ಢಿಕ್ಕಿಹೊಡೆದು ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಯಾತ್ ಹೋಟೆಲ್ ಮೇಲಿನ ದಾಳಿಯಲ್ಲಿ ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ. ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ತಿಳಿಸಿದ್ದಾರೆ.
ಇದನ್ನೂ ಓದಿ: ಸತ್ತ 9 ವರ್ಷದ ಬಳಿಕ ತಂದೆ ಬರೆದ ಪತ್ರ ಪತ್ತೆ:ಮಕ್ಕಳಿಗೆ ಹೇಳಿದ ಸಂದೇಶವೇನು?; ಪೋಸ್ಟ್ ವೈರಲ್
ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ಯಾವುದೇ ಸಾವು ನೋವುಗಳ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಸ್ಫೋಟದ ಸದ್ದುಗಳು ಕಡಿಮೆಯಾಗಿದೆ ಆದರೆ ಹೋಟೆಲ್‌ನ ದಿಕ್ಕಿನಿಂದ ಆಗಾಗ ಗುಂಡಿನ ಚಕಮಕಿ ಸದ್ದು ಇನ್ನೂ ಕೇಳಿಬರುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.