Advertisement

ಸೋಮಲಾಪುರ ಅಂಬಾದೇವಿ ಜಾತ್ರೋತ್ಸವ ಇಂದು

11:07 AM Jan 21, 2019 | |

ಗೊರೇಬಾಳ: ಸಿಂಧನೂರು ತಾಲೂಕಿನ ಸುಕ್ಷೇತ್ರ ಸೋಮಲಾಪುರ ಗ್ರಾಮದ ಅಂಬಾದೇವಿ ಜಾತ್ರಾ ಮಹೋತ್ಸವ ಸೋಮವಾರ ನಡೆಯಲಿದ್ದು, ಈಗಾಗಲೇ ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

ಜಾತ್ರಾ ಮಹೋತ್ಸವದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಭಕ್ತರಿಗಾಗಿ ವಿಶೇಷ ದರ್ಶನ ವ್ಯವಸ್ಥೆ, ವಸತಿ ಸೌಕರ್ಯ, ಶೌಚಗೃಹ, ಸ್ನಾನಗೃಹ, ಪ್ರಸಾದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಒದಗಿಸಲು ದೇವಸ್ಥಾನ ಸಮಿತಿ ಮುಂದಾಗಿದೆ. ಈಗಾಗಲೇ ಜಾತ್ರೆಯಲ್ಲಿ ಟೆಂಡರ್‌ ಅನ್ವಯ ಆಯಾ ಆಯಕಟ್ಟಿನಲ್ಲಿ ಬಳೆ, ಮಿಠಾಯಿ, ವಿವಿಧ ವಸ್ತುಗಳ ಮಾರಾಟ ಮಳಿಗೆ, ತಾತ್ಕಾಲಿಕ ಪೊಲೀಸ್‌ ಠಾಣೆ, ಆರೋಗ್ಯ ಮಳಿಗೆ, ಮಾಹಿತಿ ವಿನಿಮಯ ಕೇಂದ್ರ ಸೇರಿದಂತೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಭತ್ತ ಕೊಯ್ಲು ಮಾಡಿದ ಹೊಲದಲ್ಲಿ ಶೌಚಗೃಹ, ಸ್ನಾನಗೃಹ ನಿರ್ಮಿಸಲಾಗಿದೆ. ಹಳೆ ಶಾಲೆಯಲ್ಲಿ ಸ್ನಾನಗೃಹ ನಿರ್ಮಾಣ ಮಾಡಲಾಗಿದೆ. 7 ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ಪ್ರೌಢ ಶಾಲೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಅದರ ಎದುರಿಗೆ ವಿಶಾಲ ಜಾಗದಲ್ಲಿ ಖಾಸಗಿ ವಾಹನ, ಬೈಕ್‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಭವನ, ಯಾತ್ರಾ ನಿವಾಸದ ಕಡೆಗಳಲ್ಲಿ ಕೂಡ ಸಣ್ಣ-ಪುಟ್ಟ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 10 ಕುಡಿಯುವ ನೀರಿನ ಟ್ಯಾಂಕರ್‌, 2 ಲಕ್ಷ ನೀರಿನ ಸಾಮಾರ್ಥ್ಯದ ಓಎಚ್‌ಡಿ ಟ್ಯಾಂಕ್‌ ನಿರ್ಮಿಸಲಾಗಿದೆ. ಶುದ್ಧ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲುವೆಯಲ್ಲಿ ನೀರು ಇರುವುದರಿಂದ ಜೊತೆಗೆ ಜಿಪಂ ಉಪ ವಿಭಾಗದಿಂದ ಬೋರ್‌ವೆಲ್‌ ಕೊರೆಸಿರುವುದರಿಂದ ಈ ಬಾರಿ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇಲ್ಲ. ಜೊತೆಗೆ ದೇವಸ್ಥಾನ ಸುತ್ತಲೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಎಲ್ಲ ಉಸ್ತುವಾರಿಯನ್ನು ಸ್ವತಃ ತಹಶೀಲ್ದಾರ್‌ ಶಿವಾನಂದ ಸಾಗರ ವಹಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next