ಮೈಸೂರು: ಮಣ್ಣಿನ ಫಲವತ್ತತೆ ನಾಶದ ಜೊತೆಗೆ, ಕಡಿಮೆ ಇಳುವರಿಯ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ರೈತರು ಹೊರಬರಲು ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ಅಯ್ಯಪ್ಪನ್ ಸಲಹೆ ನೀಡಿದರು.
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆವರಣದಲ್ಲಿಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರಸಂಘದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರಏರ್ಪಡಿಸಿದ್ದ ಪೌಷ್ಟಿಕ ಆಹಾರ ಭದ್ರತೆಗೆ ಸುಸ್ಥಿರ ಹಾಗೂ ನಿರಂತರ ಆಹಾರ ಪೂರೈಕೆಯಮಾರ್ಗಗಳು ವಿಷಯದ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು. ಜಾಗತಿಕ ಹವಾಮಾನ ವೈಪರೀತ್ಯದಿಂದಾಗಿ ಇಂದು ಕೃಷಿ ವಲಯವು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗಳ ನಿವಾರಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಅಗತ್ಯವಿದೆ ಎಂದರು.
ವಿಶ್ವದಲ್ಲಿ ಕೃಷಿ ಹಾಗೂ ಅರಣ್ಯ ಭೂಮಿ ನಿರಂತರವಾಗಿ ಕಡಿಮೆಯಾಗುತ್ತಿದೆ. ಜತೆಗೆ ಮಣ್ಣಿನ ಫಲವತ್ತತೆ ನಾಶವಾಗುತ್ತಿರುವುದರಿಂದ ಕೃಷಿ ಇಳುವರಿ ತಗ್ಗಲಿದ್ದು, ಪೌಷ್ಟಿಕಾಂಶಯುಕ್ತ ಆಹಾರ ಉತ್ಪಾದನೆಯೂ ಕಡಿಮೆಯಾಗಲಿದೆ. ಹೀಗಾಗಿ ಸಮಸ್ಯೆಗಳನ್ನು ಸುಧಾರಿಸಲು ನ್ಯಾನೊ, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನಗಳ ಉಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಹಾಲಿನ ಉತ್ಪನ್ನಗಳಲ್ಲಿ ವಿಶ್ವದ ಶೇ. 25ರಷ್ಟು ಪಾಲನ್ನು ಭಾರತ ಹೊಂದಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ,ರೈತನ ಕೃಷಿ ಭೂಮಿ ಹಿಡುವಳಿ ತಲಾ ನಾಲ್ಕು ಎಕರೆಯಿದೆ. ಜಾಗತಿಕತಾಪಮಾನದ ಭಾದಿತ ರಾಷ್ಟ್ರಗಳಲ್ಲಿ ದೇಶವು7ನೇ ಸ್ಥಾನದಲ್ಲಿದ್ದರೆ ಹಸಿವು ಸೂಚ್ಯಂಕದಲ್ಲಿಕೊನೆಯ ದೇಶಗಳ ಸಾಲಿನಲ್ಲಿದೆ ಎಂದು ವಿವರಿಸಿದರು.
ಕೃಷಿ ನಿರ್ಲಕ್ಷ್ಯ ಸಲ್ಲದು: ಕೃಷಿ ಎಲ್ಲ ವಲಯಗಳ ಚಾಲಕ ಶಕ್ತಿಯಾದ ಕೃಷಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಆರಂಭದಲ್ಲಿ 1.5 ಕೋಟಿ ಟನ್ ಆಹಾರಉತ್ಪಾದನೆಯಾಗತ್ತಿತ್ತು. ಆದರೆ ಈಗ 31 ಕೋಟಿ ಟನ್ ಆಹಾರಬೆಳೆಗಳನ್ನು ಬೆಳೆಯುತ್ತಿದ್ದೇವೆ. ಈ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿÂಸುವುದು ಸರಿಯಲ್ಲ ಎಂದರು.
ಐಸಿಎಆರ್- ಕೇಂದ್ರೀಯ ಮೀನುಗಾರಿಕಾ ಶಿಕ್ಷಣ ಸಂಸ್ಥೆಯ ಕುಲಪತಿ ಡಾ.ಸಿ.ಎನ್.ರವಿಶಂಕರ್, ಡಿಎಫ್ಆರ್‌ಎಲ್ ಡಾ.ಭಾವಾ, ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘದ ಅಧ್ಯಕ್ಷ ಡಾ.ಎನ್. ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಡಾ.ನಂದಿನಿ ಪಿ.ಶೆಟ್ಟಿ ಇದ್ದರು.