Advertisement

ಗ್ರಾಮೀಣ ಜನರ ಸಮಸ್ಯೆ ವಾರದೊಳಗೆ ಪರಿಹರಿಸಿ

09:35 PM Jul 06, 2019 | Team Udayavani |

ಗೌರಿಬಿದನೂರು: ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಬಳಿಗೆ ಹೋಗಿ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸಬೇಕೆಂಬುದು ಸಂವಿಧಾನದ ಆಶಯ ಹಾಗೂ ನಮ್ಮ ಕಳಕಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್‌.ಹೆಚ್‌.ಶಿವಶಂಕರರೆಡ್ಡಿ ನುಡಿದರು.

Advertisement

ಗೌರಿಬಿದನೂರು ತಾಲೂಕು ಡಿ.ಪಾಳ್ಯ ಹೋಬಳಿ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ಅಲೆದು ಅಲ್ಲಿ ಕೆಲಸವಾಗದಿದ್ದಾಗ ಅಸಹಾಯಕತೆಯಿಂದ ಕೆಲಸ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವವರೇ ಹೆಚ್ಚು.

ಸಮಸ್ಯೆಗಳಿಗೆ ಸ್ಪಂದಿಸಿ: ಧ್ವನಿ ಇಲ್ಲದವರ ಮನೆಯ ಬಾಗಿಲಿಗೆ ಹೋಗಿ ನಾವು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ನಾವು ಜನರ ಸೇವೆ ಮಾಡಲು ಜನರು ನಮಗೆ ಮತ ನೀಡಿ ಗೆಲ್ಲಿಸಿರುತ್ತಾರೆ. ಅಂತಹವರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಪಂ, ತಾಪಂ, ಜಿಪಂ, ಶಾಸಕರು, ಸಂಸದರು, ಮಂತ್ರಿಗಳು ಸೇರಿದಂತೆ ಎಲ್ಲಾ ಹಂತಗಳಲ್ಲಿರುವವರೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಆಧಾರ್‌ ತಿದ್ದುಪಡಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಆಧಾರ್‌ ಕಾರ್ಡ್‌ ಅವ್ಯವಸ್ಥೆ ತಿದ್ದುಪಡಿ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹೋಬಳಿ ಕೇಂದ್ರಗಳ ಜೊತೆಗೆ ಪಂಚಾಯ್ತಿಗೂ ಆಧಾರ್‌ ತಿದ್ದುಪಡಿ ನೋಂದಣಿಗೆ ಅವಕಾಶ ಮಾಡಿಕೊಡಿ ಎಂದು ಸಚಿವರು ತಿಳಿಸಿದರು.

ವಾರದಲ್ಲಿ ಪರಿಹರಿಸಿ: ವೃದ್ಧಾಪ್ಯ, ವಿಧವಾ, ಅಂಗವಿಕಲರ ವೇತನ, ನಿವೇಶನ, ಖಾತೆ ಬದಲಾವಣೆ, ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಿಫ‌ಲವಾದವರು ನಮ್ಮಲ್ಲಿಗೆ ಬರುತ್ತಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಅವರ ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

Advertisement

ಜನಸ್ಪಂದನ ಸಭೆಯಲ್ಲಿ ಪ್ರಮುಖವಾಗಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಾಂಗವೇತನ, ನಿವೇಶನ, ಮನೆ, ಖಾತೆ ಬದಲಾವಣೆ, ಬಸ್‌ ಸಮಸ್ಯೆ, ನೀರಿನ ಸಮಸ್ಯೆ ಸೇರಿದಂತೆ 261ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಎಲ್ಲವನ್ನು ಸ್ಥಳದಲ್ಲೇ ಪರಿಶೀಲಿಸಿ ಸಚಿವರು ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗೆ ಹಾಗೂ ಜಿಲ್ಲಾ ಮತ್ತು ತಾಲಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಜಿಪಂ ಅಧ್ಯಕ್ಷ ಮಂಜುನಾಥ್‌, ಡೀಸಿ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಗುರುದತ್‌ ಹೆಗಡೆ, ತಾಪಂ ಅಧ್ಯಕ್ಷ ಚಿಕ್ಕೇಗೌಡ, ಮುಖಂಡ ಪ್ರಕಾಶ್‌ ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಮುಖಂಡ ಕೇಶವ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೊಮ್ಮಣ್ಣ , ಜಿಪಂ ಸದಸ್ಯೆ ಅರುಂಧತಿ, ಉಪವಿಭಾಗಾಧಿಕಾರಿ ಶಿವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್‌, ತಹಶೀಲ್ದಾರ್‌ ಶ್ರೀನಿವಾಸ್‌, ತಾಪಂ ಇಒ ಉಮಾಶಂಕರ್‌, ಬಿಇಒ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next