Advertisement
ಕಲ್ಮಡ್ಕ ಗ್ರಾಮ ಪಂಚಾಯತ್‌ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಡ್ಪಿನಂಗಡಿಯ ಶಿವ ಗೌರಿ ಕಲಾಮಂದಿರದಲ್ಲಿ ಗ್ರಾ.ಪಂ. ಅಧ್ಯಕ್ಷ ಧರ್ಮಣ್ಣ ನಾಯ್ಕ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Related Articles
Advertisement
ಜಿಯೋ ಗುಂಡಿಯಿಂದ ಹಾಳಾದ ರಸ್ತೆಕಲ್ಮಡ್ಕದಿಂದ ಕಾಪಡ್ಕದ ವರೆಗೆ ಜಿಯೋ ಸಂಸ್ಥೆ ಗುಂಡಿ ತೆಗೆದು ರಸ್ತೆ ಹಾಗೂ ಮೋರಿಯನ್ನು ಹಾಳುಗೆಡವಿದೆ. ರಸ್ತೆ ಬದಿಯ ಗುಂಡಿಯನ್ನೂ ಮುಚ್ಚದೆ ಸಂಚಾರವೇ ದುಸ್ತರವಾಗಿದೆ. ರಸ್ತೆಗೆ ಹಾಕಿರುವ ನಾಲ್ಕು ಮೋರಿಗಳನ್ನು ಹಾಳು ಮಾಡಿದ್ದಾರೆ ಎಂದು ಜಯರಾಜ್ ನಡ್ಕ ಹೇಳಿದರು. ಇದಕ್ಕೆ ತಾ.ಪಂ. ಸದಸ್ಯ ಗಫೂರ್ ಧ್ವನಿಗೂಡಿಸಿ, ಅವೈಜ್ಞಾನಿಕವಾಗಿ ಗುಂಡಿ ತೆಗೆಯಲು ಅವಕಾಶ ನೀಡಬಾರದೆಂದು ಹೇಳಿದ್ದೆ. ಜಿ.ಪಂ. ಎಂಜಿನಿಯರಿಂಗ್ ಇಲಾಖೆ ಸ್ಪಂದಿಸದ ಕಾರಣ 700 ಮೀಟರ್ ರಸ್ತೆಯೇ ಹಾಳಾಗಿ ಹೋಗಿದೆ. ಕಾನೂನು ಪ್ರಕಾರ ಯಾವುದನ್ನೂ ಮಾಡಿಲ್ಲ. ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಲು ದಾಕ್ಷಿಣ್ಯ ಏಕೆ? ಎಂದು ಜಿ.ಪಂ. ಎಂಜಿನಿಯರ್ ಸುಳ್ಯ ಉಪವಿಭಾಗದ ಎಚ್.ಎಸ್. ಹುಕ್ಕೇರಿ ಅವರನ್ನು ಪ್ರಶ್ನಿಸಿದರು. ಜಿಯೋ ಸಂಸ್ಥೆಗೆ ಬೇಸಗೆಯಲ್ಲಿ ಗುಂಡಿ ತೆಗೆಯಲು ಅನುಮತಿ ನೀಡಿದ್ದೇವೆ. ಮಳೆಗಾಲದಲ್ಲೂ ಅವರು ಕಾಮಗಾರಿ ನಡೆಸುತ್ತಿದ್ದು, ನೋಟಿಸ್ ಮಾಡಿದ್ದೇನೆ. ಕಾರ್ಯ ನಿರ್ವಾಹಕ ಅಭಿಯಂತರರಲ್ಲೂ ಮಾತನಾಡಿದ್ದೇನೆ ಎಂದು ಹುಕ್ಕೇರಿ ಉತ್ತರಿಸಿದರು. ಬೇಲಿ ತೆರವುಗೊಳಿಸಿಕೊಳ್ಸಿಗೆ ಎನ್ನುವಲ್ಲಿ 5-6 ಮನೆಗಳನ್ನು ಸಂಪರ್ಕಿಸುವ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿ ಮುಚ್ಚಿದ್ದಾರೆ. ಇದರಿಂದ ಸುತ್ತುಬಳಸು ದಾರಿಯೇ ಗತಿಯಾಗಿದೆ. ಕೂಡಲೇ ಬೇಲಿ ತೆರವುಗೊಳಿಸಬೇಕೆಂದು ಗ್ರಾಮಸ್ಥ ಸೋಮಪ್ಪ ಗೌಡ ಆಗ್ರಹಿಸಿದರು. ಈ ಮಧ್ಯೆ ಪೊಲೀಸ್ ದೂರಿನ ಪ್ರತಿ ಹಿಡಿದು ವೇದಿಕೆ ಏರಿ ಮನವಿ ಸಲ್ಲಿಸಿದ ಸೋಮಪ್ಪ ಗೌಡ ಹಾಗೂ ಸದಸ್ಯ ಲೋಕೇಶ್ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ನೋಡಲ್ ಅಧಿಕಾರಿ ನ್ಯಾಯ ಸಮಿತಿಯಲ್ಲಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಿ ಚರ್ಚೆ ಮುಗಿಸಿದರು. ಪರಿಹಾರದ ಮೊತ್ತದ ಅನುಪಾತ ಹೇಗೆ? ತೋಟಗಾರಿಕಾ ಇಲಾಖೆಯವರು ಮಾಹಿತಿ ನೀಡಿದಾಗ, ಗ್ರಾ.ಪಂ. ಸದಸ್ಯ ಲೋಕೇಶ್ ಅಕ್ರಿಕಟ್ಟೆ ಒಂದು ಎಕ್ರೆಗೆ 7,199.50 ರೂ. ಪರಿಹಾರ, 2 ಎಕ್ರೆಗೆ 2,500 ರೂ. ಪರಿಹಾರ ನೀಡಲಾಗಿದೆ. ಬೆಳೆ ನಷ್ಟ ಪರಿಹಾರದ ಅನುಪಾತ ಹೇಗೆ? ಎಂದು ಪ್ರಶ್ನಿಸಿದರು. 4 ಎಕ್ರೆಗೆ 5,000 ರೂ. ಪರಿಹಾರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ನೀರಿಂಗಿಸಲು ಅವಕಾಶ ಕೊಡಿ ನೀರಿಂಗಿಸುವಿಕೆಯನ್ನು ಆದಷ್ಟು ಬೇಗ ಮಾಡಬೇಕು. ಸರಕಾರಿ ಜಾಗದಲ್ಲಿ ನೀರಿಂಗಿಸುವಿಕೆ ಮಾಡಿದರೆ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲಿ ಬೇಕಾದರೂ ನೀರಿಂಗಿಸಲು ಅವಕಾಶ ಕೊಡಿ. ಪ್ರತಿ ಗ್ರಾಮದಲ್ಲೂ ನೀರಿಂಗಿಸುವ ಮಾಹಿತಿ ಕೊಡಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಜಯರಾಜ ನಡ್ಕ ಕೃಷಿ ಇಲಾಖೆ ಅಧಿಕಾರಿಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಲು ನಿರ್ಧರಿಸಲಾಯಿತು. ಕರಿಕ್ಕಳದಲ್ಲಿ ಮೆಸ್ಕಾಂ ಚರಂಡಿಯಲ್ಲೇ ಕಂಬ ಹಾಕಿದೆ. ಇದು ಅಪಾಯಕಾರಿಯಾಗಿದ್ದು, ಕೆಲವೆಡೆ ಬೀಳುವ ಸ್ಥಿತಿಯಲ್ಲಿವೆ ಎಂದು ಹಮೀದ್ ಹೇಳಿದರು. ಕಂಬ ತೆಗೆದ ಗುಂಡಿಗಳನ್ನೂ ಮುಚ್ಚದೆ ಹಲವು ಕಡೆ ಹೊಂಡಗಳು ನಿರ್ಮಾಣವಾಗಿವೆ ಎಂದು ಗ್ರಾಮಸ್ಥರು ದೂರಿದರು. ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ, ಸುಳ್ಯ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಲಕ್ಷಿ ್ಮೕಶ ರೈ, ತಾ.ಪಂ. ಸದಸ್ಯ ಗಫೂರ್ ಸಾಹೇಬ್, ಗ್ರಾ.ಪಂ. ಉಪಾಧ್ಯಕ್ಷೆ ವಾರಿಜಾ ಪಿ.ಎಸ್., ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಲ್ಲೇರಿ ಸೇತುವೆಯ ಮೇಲಿಂದ ಹೊಳೆಗೆ ನಿರಂತರವಾಗಿ ಕಸ ಎಸೆಯುತ್ತಿದ್ದಾರೆ. ಅಲ್ಲಿ ಸಿಸಿ ಕೆಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಜೀವ ಹಾನಿಯಿಂದ ರಕ್ಷಿಸಬೇಕೆಂದು ಗ್ರಾಮಸ್ಥ ಜಿ.ಎ. ಮಹಮ್ಮದ್ ಮನವಿ ಮಾಡಿದರು. ಮೋಟಾರು ವಾಹನ ಕಾಯ್ದೆ ಹಾಗೂ ಅಪಘಾತ ರಹಿತ ವಾಹನ ಚಾಲನೆಗೆ ಸಹಕರಿಸುವಂತೆ ಬೆಳ್ಳಾರೆ ಠಾಣೆಯ ಪ್ರೊಬೆಷನರಿ ಪಿಎಸ್‌ಐ ಆಂಜನೇಯ ರೆಡ್ಡಿ ಮನವಿ ಮಾಡಿದರು. ಮನೆ ಕಟ್ಟುವ ಉದ್ದೇಶಕ್ಕೆ ಮರಳು ಸಾಗಾಣಿಕೆಗೆ ಅವಕಾಶ ನೀಡಬೇಕೆಂದು ಎಂ.ಕೆ. ಹನೀಫ್ ಮನವಿ ಮಾಡಿದರು. ಕಲ್ಮಡ್ಕ ಹಾಗೂ ಪಂಬೆತ್ತಾಡಿಗೆ ಒಬ್ಬರೇ ಆರೋಗ್ಯ ಸಹಾಯಕಿ ಇದ್ದಾರೆ. ಇನ್ನೊಬ್ಬರು ಕಿರಿಯ ಆರೋಗ್ಯ ಸಹಾಯಕಿಯ ನೇಮಕಕ್ಕೆ ನಿರ್ಣಯ ಮಾಡಬೇಕು. ತಿಂಗಳಿಗೆ ಎರಡು ದಿನವಾದರೂ ಸಂಚಾರಿ ಆಸ್ಪತ್ರೆ ಬರಬೇಕು ಎಂದು ಹಮೀದ್ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ಡೆಂಗ್ಯೂ ಜ್ವರದ ಮುನೆ‌್ನಚ್ಚರಿಕೆಯ ಬಗ್ಗೆ ಮಾಹಿತಿ ನೀಡಬೇಕೆಂದು ಎಂ.ಕೆ. ಹನೀಫ್ ಹೇಳಿದರು. ಬಳಿಕ ಪಂಜ ಆರೋಗ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಹೊಳೆಗೆ ಕಸ ಎಸೆಯುತ್ತಾರೆ
ಕಲ್ಲೇರಿ ಸೇತುವೆಯ ಮೇಲಿಂದ ಹೊಳೆಗೆ ನಿರಂತರವಾಗಿ ಕಸ ಎಸೆಯುತ್ತಿದ್ದಾರೆ. ಅಲ್ಲಿ ಸಿಸಿ ಕೆಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಜೀವ ಹಾನಿಯಿಂದ ರಕ್ಷಿಸಬೇಕೆಂದು ಗ್ರಾಮಸ್ಥ ಜಿ.ಎ. ಮಹಮ್ಮದ್ ಮನವಿ ಮಾಡಿದರು. ಮೋಟಾರು ವಾಹನ ಕಾಯ್ದೆ ಹಾಗೂ ಅಪಘಾತ ರಹಿತ ವಾಹನ ಚಾಲನೆಗೆ ಸಹಕರಿಸುವಂತೆ ಬೆಳ್ಳಾರೆ ಠಾಣೆಯ ಪ್ರೊಬೆಷನರಿ ಪಿಎಸ್‌ಐ ಆಂಜನೇಯ ರೆಡ್ಡಿ ಮನವಿ ಮಾಡಿದರು. ಮನೆ ಕಟ್ಟುವ ಉದ್ದೇಶಕ್ಕೆ ಮರಳು ಸಾಗಾಣಿಕೆಗೆ ಅವಕಾಶ ನೀಡಬೇಕೆಂದು ಎಂ.ಕೆ. ಹನೀಫ್ ಮನವಿ ಮಾಡಿದರು.
ಆರೋಗ್ಯ ಸಹಾಯಕಿ ನೇಮಿಸಿ
ಕಲ್ಮಡ್ಕ ಹಾಗೂ ಪಂಬೆತ್ತಾಡಿಗೆ ಒಬ್ಬರೇ ಆರೋಗ್ಯ ಸಹಾಯಕಿ ಇದ್ದಾರೆ. ಇನ್ನೊಬ್ಬರು ಕಿರಿಯ ಆರೋಗ್ಯ ಸಹಾಯಕಿಯ ನೇಮಕಕ್ಕೆ ನಿರ್ಣಯ ಮಾಡಬೇಕು. ತಿಂಗಳಿಗೆ ಎರಡು ದಿನವಾದರೂ ಸಂಚಾರಿ ಆಸ್ಪತ್ರೆ ಬರಬೇಕು ಎಂದು ಹಮೀದ್ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ಡೆಂಗ್ಯೂ ಜ್ವರದ ಮುನೆ‌್ನಚ್ಚರಿಕೆಯ ಬಗ್ಗೆ ಮಾಹಿತಿ ನೀಡಬೇಕೆಂದು ಎಂ.ಕೆ. ಹನೀಫ್ ಹೇಳಿದರು. ಬಳಿಕ ಪಂಜ ಆರೋಗ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.