Advertisement

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ

09:11 PM Apr 03, 2021 | Team Udayavani |

ದಾಂಡೇಲಿ: ಸಮೀಪದ ಅವೇಡಾ ಗ್ರಾಪಂ ವ್ಯಾಪ್ತಿಯ ಕೊಂಡಪಾ ಗ್ರಾಮಸ್ಥರಿಗೆ ಕಳೆದೆರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಬಸವಳಿದಿದ್ದಾರೆ. ಸ್ಥಳೀಯ ಪಂಚಾಯ್ತನವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆಯದ್ದರಿಂದ ನೀರಿನ ಸಮಸ್ಯೆ ಕಳೆದೆರಡು ವರ್ಷಗಳಿಂದ ಹಾಗೆನೇ ಮುಂದುವರಿದಿದೆ.

Advertisement

ಇಲ್ಲಿ 11 ಮನೆಗಳಿದ್ದು, ಪ್ರತಿಮನೆಗಳಿಗೂ ಗ್ರಾಪಂನಿಂದ ನೀರಿನ ನಳದ ಸಂಪರ್ಕ ನೀಡಲಾಗಿತ್ತು. ಆದರೆ ಕಳೆದೆರಡು ವರ್ಷಗಳ ಹಿಂದೆ ಇಲ್ಲಿ ರಸ್ತೆ ಮತ್ತು ಗಟಾರ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ನಡೆಯುವಾಗ ಕುಡಿಯುವ ನೀರಿನ ಪೈಪ್‌ ಒಡೆದು ಹೋಗಿದ್ದರಿಂದ ಸಮಸ್ಯೆ ತಲೆದೋರಿದೆ. ಇಲ್ಲಿರುವ 11 ಕುಟುಂಬಗಳಲ್ಲಿ ಸಧ್ಯಕ್ಕೆ ಲಕ್ಷ್ಮಣ ಸಾವಂತ ಅವರ ಮನೆಗೆ ಬರುವ ನೀರನ್ನೆ ಎಲ್ಲರೂ ಆಶ್ರಯಿಸಬೇಕಾದ ಸ್ಥಿತಿಯಿದೆ.

ಅಂದ ಹಾಗೆ ಇಲ್ಲಿ ಒಡೆದು ಹೋದ ಪೈಪನ್ನು ದುರಸ್ತಿಗೊಳಿಸಲು ನಿರಾಸಕ್ತಿ ಯಾಕೆ ಎಂಬ ಪ್ರಶ್ನೆಯೂ ಸ್ಥಳೀಯರನ್ನು ಕಾಡತೊಡಗಿದೆ. ಗ್ರಾಮದ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಮೂಲಭೂತ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕಾದ ಅವೇಡಾ ಗ್ರಾಪಂ ದಿವ್ಯ ನಿರ್ಲಕ್ಷé ಎದ್ದು ಕಾಣುತ್ತಿದೆ.

ಇನ್ನಾದರೂ ನಿದ್ದೆಯಿಂದ ಎದ್ದು, ಇಲ್ಲಿಯ ನೀರಿನ ಸಮಸ್ಯೆಯಿಂದ ಬಸವಳಿದು ಸುಸ್ತು ಹೊಡೆದ ಕೊಂಡಪಾ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಸ್ಥಳೀಯರಾದ ಲಕ್ಷ್ಮಣ ಸಾವಂತ, ಸುಶೀಲಾ ಸಾವಂತ, ಗಂಗಪ್ಪಾ ವಡ್ಡರ, ಲಕ್ಷ್ಮೀಬಾಯಿ ವಡ್ಡರ, ಸುರೇಖಾ ಮೋರೆ, ಶಂಕರ ಸಿಂಧೆ, ರಾಮು ಸಿಂಧೆ, ಹನುಮಂತ ಅಪ್ಪಗೋಳ, ಬಾಳು ಕರಡಿ ಮತ್ತು ರಾಮಕ್ಕಾ ಜುಜ್ಜುವಾಡಕರ ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಆಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next