Advertisement

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

05:57 PM Jan 26, 2022 | Team Udayavani |

ಲಿಂಗಸುಗೂರು: ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಗ್ರಾ.ಪಂ ಮಟ್ಟದಲ್ಲಿ ಪರಿಹರಿಸಬೇಕು. ಗ್ರಾಮೀಣ ಭಾಗದ ಜನರನ್ನು ತಾಲೂಕು ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದು ವಿಧಾನ ಪರಿಷತ್‌ ಸದಸ್ಯ ಶರಣಗೌಡ ಬಯ್ನಾಪುರ ಪಿಡಿಒಗಳಿಗೆ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ನಡೆದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ನರೇಗಾದಡಿ ಕೃಷಿ ಹೊಂಡ, ರೈತರ ಹೊಲಗಳಿಗೆ ಬದು ನಿರ್ಮಾಣ ಸೇರಿದಂತೆ ರೈತರು ಹಾಗೂ ಕೃಷಿಗೆ ಹೆಚ್ಚು ಅನುಕೂಲವಾಗುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಪಂಯಲ್ಲಿನ ಸಮಸ್ಯೆ ಅಲ್ಲಿಯೇ ಪರಿಹರಿಸಬೇಕು. ಅದನ್ನು ತಾಲೂಕು ಕಚೇರಿವರೆಗೆ ಅಲೆದಾಡುವಂತೆ ಮಾಡಬೇಡಿ, ಗ್ರಾಮೀಣ ಜನರಿಗೆ ತೊಂದರೆಯಾಗದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಪಿಡಿಒಗಳು ಹೆಚ್ಚಿನ ಕಾಳಜಿ ವಹಿಸಿ, ಔಷಧಿ ಸಿಂಪಡಿಸಿ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.

ಈ ವೇಳೆ ಶಾಸಕ ಡಿ.ಎಸ್‌. ಹೂಲಗೇರಿ, ತಾಪಂ ಇಒ ಲಕ್ಷ್ಮೀದೇವಿ, ನರೇಗಾ ಎಡಿ ಸೋಮನಗೌಡ ಲೆಕ್ಕಿಹಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next