Advertisement

ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಿ

10:04 AM Jun 20, 2019 | Team Udayavani |

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಹಾಗೂ ಶಿರಗಾಂವ ಗ್ರಾಮದಲ್ಲಿ ನೀರು ಸಮಸ್ಯೆ ಹೋಗಲಾಡಿಸಲು ಬೋರೆವೆಲ್ ಕೊರೆಸುವಂತೆ ಮಾಹಿತಿ ತಿಳಿಸಿದರೂ ಇನ್ನೂವರಿಗೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಸದಸ್ಯ ಆನಂದ ನಾಡಗೌಡ ಆರೋಪಿಸಿದರು.

Advertisement

ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಕೃಷಿ ಇಲಾಖೆಯಿಂದ ಬೀಜಗಳನ್ನು ವಿತರಿಸಲು ರೈತರಿಂದ ಹಲವಾರು ದಾಖಲಾತಿ ಪಡೆಯುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕಾರಣ ರೈತರಿಗೆ ನೇರವಾಗಿ ಬೀಜ ವಿತರಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌. ಪಟಗುಂದಿ ಮಾತನಾಡಿ, ಕಳೆದ ವರ್ಷದಲ್ಲಿ ರೈತರಿಗೆ ಬೇಡಿದಷ್ಟು ಬೀಜಗಳನ್ನು ವಿತರಿಸಿದ ಪರಿಣಾಮ ಕೆಲ ರೈತರು ಮಹಾರಾಷ್ಟ್ರದ ತಮ್ಮ ಸಂಬಂಧಿಕರಿಗೆ ನೀಡಿದ್ದಾರೆ. ಈ ವರ್ಷ ಸರ್ಕಾರದ ನಿಯಮದಂತೆ ದಾಖಲಾತಿಗಳೊಂದಿಗೆ ಬೀಜ ವಿತರಿಸಲು ತಿರ್ಮಾಣಿಸಲಾಗಿದೆ ಎಂದು ಸದಸ್ಯರಿಗೆ ತಿಳಿಸಿದರು.

ಶಾಲಾ ಕಾಲೇಜಗಳು ಪ್ರಾರಂಭವಾಗಿದ್ದು, ಶಿಥಲಗೊಂಡಿರುವ ಶಾಲಾ ಕಟ್ಟಡಗಳಲ್ಲಿ ಮಕ್ಕಳಿಗೆ ಅವಕಾಶ ನೀಡದೇ. ಅಂತಹ‌ ಶಾಲೆಗಳನ್ನು ಗುರುತಿಸಿ ಹೊಸ ಕಟ್ಟಡ ಹಾಗೂ ಖಾಲಿ ಇರುವ ಶಿಕ್ಷರನ್ನು ನೇಮಕ ಮಾಡಿಕೊಳಬೇಕೆಂದು ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಅವರಿಗೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಬಿಇಒ, ಶೈಕ್ಷಣಿಕ ವರ್ಷದಲ್ಲಿ 4534 ಮಕ್ಕಳು ಹೊಸದಾಗಿ ದಾಖಲಾತಿಯಾಗಿವೆ. ತಾಲೂಕಿನಲ್ಲಿ 331 ಶಾಲಾ ಕಟ್ಟಡಗಳು ಶಿಥಲಾವಸ್ಥೆಯಲ್ಲಿದ್ದು, ಸರಕಾರದಿಂದ ಅನುದಾನ ಬಂದ ನಂತರ ಹಂತ ಹಂತವಾಗಿ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು.

Advertisement

ನ್ಯಾಯ ಬೆಲೆ ಅಂಗಡಿಗಳಲ್ಲಿ ಒತ್ತಾಯ ಪೂರ್ವಕವಾಗಿ ಚಹಾ ಪುಡಿ, ಸಾಬೂನು, ಕಡ್ಡಿಪೆಟ್ಟಿಗೆ ಅಡುಗೆ ಎಣ್ಣಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಪಡೆದುಕೊಂಡರೇ ಮಾತ್ರ ಪಡಿತರ ಧಾನ್ಯ ನೀಡುವುದಾಗಿ ಹೇಳುತ್ತಿದ್ದಾರೆ. ಇದನ್ನು ತಡೆಯಬೇಕೆಂದು ಸದಸ್ಯ ಶೋಭಾ ಜರಳೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಗ್ರೇಡ್‌ ತಹಶೀಲ್ದಾರ ಕಿರಣ ಬೆಳವಿ ಮಾತನಾಡಿ, ಯಾವುದೇ ಪಡಿತರ ಅಂಗಡಿಗಳಲ್ಲಿ ಒತ್ತಾಯವಾಗಿ ದಿನದಿಸಿ ವಸ್ತುಗಳನ್ನು ನೀಡದಂತೆ ಈಗಾಗಲೇ ನ್ಯಾಯ ಅಂಗಡಿಕಾರರಿಗೆ ತಿಳಿಸಲಾಗಿದೆ ಎಂದರು.

ಈ ವೇಳೆ ಸದಸ್ಯರಾದ ಲಕ್ಷ್ಮೀ ಪಂಚನ್ನವರ, ಮೀನಾಕ್ಷಿ ಮಾನಗಾಂವಿ, ಸುರೇಖಾ ರಾಚನ್ನವರ, ಬಸವರಾಜ ನಾಯಿಕ, ರಾಜು ಕಲ್ಲಟ್ಟಿ, ಸುರೇಶ ಬೆಣ್ಣಿ, ಬಾಳಾಸಾಹೇಬ ನಾಯಿಕ ಮೊದಲಾದ ತಾಪಂ ಸದಸ್ಯರು ಸಮಸ್ಯೆಗಳ ಕುರಿತು ಮಾತನಾಡಿದರು.

ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರೆ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀತಾ ಬಿಸಿರೊಟ್ಟಿ, ಇ.ಒ ಮಹಾದೇವ ಬಿರಾದಾರ ಪಾಟೀಲ, ಗ್ರೇಡ್‌ 2 ತಹಶೀಲ್ದಾರ್‌ ಕಿರಣ ಬೆಳವಿ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ಎಂ.ಬಿ. ನಾಯಿಕ ಸ್ವಾಗತಿದರು. ವ್ಯವಸ್ಥಾಪಕ ಆರ್‌.ಎ. ಚಟ್ನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next