Advertisement

ಸಾಮಾನ್ಯ ಶೀತಕ್ಕೆ ಇಲ್ಲಿದೆ ರಾಮಬಾಣ

09:34 AM Apr 27, 2021 | ಆದರ್ಶ ಕೊಡಚಾದ್ರಿ |

ವಾತಾವರಣದ ಬದಲಾವಣೆಗಳಿಗೆ ಅನುಗುಣವಾಗಿ ನಮ್ಮ  ಆರೋಗ್ಯದಲ್ಲಿ ಹಲವಾರು ಬದಲಾವಣೆಗಳಾಗುವುದನ್ನು ಕಾಣಬಹುದಾಗಿದೆ. ಮಳೆಗಾಲದ ಸಮಯದಲ್ಲಂತೂ  ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತದೆ.

Advertisement

ಶೀತ, ಜ್ವರ, ತಲೆನೋವಿನಂತಹ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರನ್ನೂ ಬಾಧಿಸುತ್ತವೆ. ಆದರೆ ಕೋವಿಡ್ ಆರಂಭದ ನಂತರ ಸಾಮಾನ್ಯ ಕಾಯಿಲೆ ಎನಿಸಿಕೊಂಡಿದ್ದ ಶೀತ, ಜ್ವರ, ತಲೆನೋವುಗಳು ಭಯಾನಕ ರೂಪವನ್ನು ತಳೆದಿವೆ. ಹಾಗೆಂದ ಮಾತ್ರಕ್ಕೆ ಕೋವಿಡ್ ಕಾಲಿದಲ್ಲಿ ಬರುವ  ಶೀತ, ಜ್ವರಗಳು ಕೋವಿಡ್ ಆಗಿರುವುದಿಲ್ಲ. ಬದಲಾಗಿ ಹಿಂದಿನಿಂದಲೂ ವಾತಾವರಣದಲ್ಲಿನ ಬದಲಾವಣೆಗಳಿಂದ ಜನರನ್ನು ಬಾಧಿಸಿಕೊಂಡು ಬಂದ ಸಾಮಾನ್ಯ ಜ್ವರ ಅಥವಾ ಶೀತವೂ ಆಗಿರಬಹುದು.

ಸಾಮಾನ್ಯ ಶೀತ ಜ್ವರವನ್ನು ನಾವು ಮನೆಯಲ್ಲಿಯೇ ಸಿಗುವ ಹಲವಾರು ನೈಸರ್ಗಿಕ   ಉತ್ಪನ್ನಗಳಿಂದ ಅತೀ ಸುಲಭವಾಗಿ ಗುಣಪಡಿಸಿಕೊಳ್ಳಬಹುದಾಗಿದೆ.

ಬೆಳ್ಳುಳ್ಳಿ- ಅರಶಿನದ ಹಾಲು ಸೇವನೆ

ಅರಶಿನ ಮತ್ತು ಬೆಳ್ಳುಳ್ಳಿಯಲ್ಲಿ  ಅತೀ ಹೆಚ್ಚು ರೋಗನಿರೋಧಕ ಶಕ್ತಿ ಇದ್ದು, ಇದು ನಮ್ಮನ್ನು ಕಾಡುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಹಾಗೆಯೇ ಶೀತವಾದಾಗಲೂ ಕೂಡಾ “ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಕುದಿಸಿ, ತದನಂತರ ಅರ್ಧ ಟೀ ಚಮಚ ಅರಿಶಿನ ಹಾಕಿ ಪ್ರತಿದಿನ ಎರಡು ಬಾರಿ ಸೇರಿಸಬೇಕು. ಇದು ನಮ್ಮನ್ನು ಬಾಧಿಸುವ ಶೀತವನ್ನು ತೊಡೆದು ಹಾಕಲು ಸಹಾಯಕವಾಗುವುದಲ್ಲದೆ  ಗಂಟಲು ನೋಯುತ್ತಿದ್ದರೆ ತ್ವರಿತ ಪರಿಹಾರವನ್ನು ನೀಡುತ್ತದೆ.

Advertisement

ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಇದು ಒಂದು ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಬಲವಾದ ಆಂಟಿ-ವೈರಲ್, ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ಹೊಂದಿದೆ.

 

ಕಾಳು ಮೆಣಸಿನ ಬಳಕೆ

ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಅಂಶ ಇದೆ. ಅಲ್ಲದೆ ಇದರಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ. ಇದು ಉತ್ತಮ ಪ್ರತಿಜೀವಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಭಾರತೀಯ ಆಹಾರ ಪರಂಪರೆಯ ಭಾಗವಾಗಿರುವ ಕಾಳು ಮೆಣಸು, ತನ್ನಲ್ಲಿ ಅಪಾರ ಔಷಧೀಯ ಗುಣವನ್ನು ಹೊಂದಿದೆ. ಶೀತದ ಸಮಸ್ಯೆ ನಮ್ಮನ್ನು ಬಾಧಿಸಿದಾಗ ಕೆಲವು ಕಾಳುಗಳನ್ನು  ಚೆನ್ನಾಗಿ ಪುಡಿ ಮಾಡಿ ಹಾಲು ಅಥವಾ ಚಹಾದೊಂದಿಗೆ ಬೆರಸಿ ಸೇವನೆ ಮಾಡುವುದರಿಂದ ಬಹುಬೇಗ ಶೀತದ ಸಮಸ್ಯೆ ನಿವಾರಣೆಯಾಗುತ್ತದೆ.  ಒಂದು ವೇಳೆ ಚಹಾ ಅಥವಾ ಹಾಲಿನ ಲಭ್ಯತೆ ಇಲ್ಲದ ಸಮಯದಲ್ಲಿ ಒಂದೆರಡು ಕರಿಮೆಣಸನ್ನು ಚೆನ್ನಾಗಿ ಜಗಿದು ತಿನ್ನುವುದರಿಂದಲೂ ಶೀತದ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಈರುಳ್ಳಿ ಸೇವನೆ

ಸಾಮಾನ್ಯ ಶೀತದ ಸಮಸ್ಯೆಗೆ ಈರುಳ್ಳಿಯ ಸೇವನೆಯೂ ಕೂಡಾ ಉತ್ತಮ ಪರಿಹಾರವಾಗಿದೆ. ಶೀತವಾದಾಗ ಸ್ಪಲ್ಪ ಪ್ರಮಾಣದ ಈರುಳ್ಳಿಯನ್ನು ತಿನ್ನುವುದರಿಂದ ದೇಹದಲ್ಲಿ ಶೇಖರಣೆಯಾದ ಕಫವನ್ನು ಇದು ಕರಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜೇನು ತುಪ್ಪ ಬಳಸಿ

ಒಂದು ಟೀಸ್ಪೂನ್ ಜೇನುತುಪ್ಪ, ಕಾಲು ಟೀ ಸ್ಪೂನ್ ಶುಂಠಿ ಪೇಸ್ಟ್ ಮತ್ತು ಅರ್ಧ ಟೀ ಸ್ಪೂನ್ ತುಳಸಿ ಎಲೆಗಳ ರಸವನ್ನು ಬೆರೆಸಿ  ಕಷಾಯ ಮಾಡಿಕೊಳ್ಳಿ. ನಂತರ  ಬೆಳಿಗ್ಗೆ ಮತ್ತು ಸಂಜೆ ಪ್ರತಿದಿನ ಎರಡು ಬಾರಿ ಈ ಕಷಾಯವನ್ನು ಕುಡಿಯಿರಿ.  2007 ರಲ್ಲಿ ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್‌ನಲ್ಲಿ ನಡೆಸಿದ ಅಧ್ಯಯನವು ಜೇನುತುಪ್ಪವು ವೈದ್ಯಕೀಯ ಔಷಧಿಗಳಿಗಿಂತಲೂ  ಹೆಚ್ಚು ಪರಿಣಾಮಕಾರಿ ಎಂದು ತೋರಿಸಿದೆ.

ಇದು ಹೆಚ್ಚಾಗಿ ಡೆಕ್ಸ್ಟ್ರೋಮೆಥೋರ್ಫಾನ್ ನಂತಹ ಕೆಮ್ಮು ನಿವಾರಕ ಗುಣಗಳನ್ನು ಹೊಂದಿರುತ್ತದೆ. ಶುಂಠಿ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತುಳಸಿ ಆಯುರ್ವೇದದಲ್ಲಿ ಒಂದು ಪ್ರಮುಖ ಸಸ್ಯವಾಗಿದೆ, ಇದು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

 

ನೀಲಗಿರಿ ತೈಲ

ಶೀತವನ್ನು ಹೊಡೆದೋಡಿಸಲು  ನೀಲಗಿರಿ ತೈಲವನ್ನು ಮೂಗು ಮತ್ತು ಹಣೆಯ ಮೇಲೆ ಹಚ್ಚಿ. ಒಂದು ಪಾತ್ರೆಯಲ್ಲಿ ಬಿಸಿನೀರನ್ನು ಕುದಿಸುವಾಗ ನೀಲಗಿರಿ ಎಣ್ಣೆಗೆ ಕರಿಮೆಣಸನ್ನು ಕೂಡ ಸೇರಿಸಬಹುದು. ನಿಮ್ಮ ಮುಖವನ್ನು ಪಾತ್ರೆಯ ಪಕ್ಕ ತಂದು ಆವಿಯನ್ನು ತೆಗೆದುಕೊಳ್ಳಿ. ಈ ಪ್ರಕ್ರಿಯೆಯಲ್ಲಿ ನಿಮ್ಮ ಮೂಗಿನ ಮೂಲಕ ಆವಿಗಳನ್ನು ಉಸಿರಾಡುವುದು ಅತ್ಯಗತ್ಯ, ತದನಂತರ ನಿಮ್ಮ ಬಾಯಿಯ ಮೂಲಕ ಬಿಡಬಹುದು.

ನೀಲಗಿರಿ ತೈಲವು ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ, ನೋವು ನಿವಾರಕ ಮತ್ತು ನಿರೀಕ್ಷಿತ ಗುಣಗಳನ್ನು ಹೊಂದಿದೆ. ಇದು ನಿಮ್ಮ ದೇಹದಲ್ಲಿ ಶೇಖರಣೆಯಾದ ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ.

ಈ ಎಲ್ಲಾ ವಿಧಾನಗಳನ್ನು ಬಳಸುವ ಮೂಲಕ ವಾತಾವರಣದ ಬದಲಾವಣೆಯಿಂದ ನಮ್ಮನ್ನು ಕಾಡುವ ಸಾಮಾನ್ಯ ಶೀತದ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿ. ಆದರೆ ಇದೀಗ ಕೋವಿಡ್ ಅಬ್ಬರ ಹೆಚ್ಚಾಗಿರುವ ಕಾರಣ ಒಂದು ಬಾರಿ ಈ ಮನೆಮದ್ದುನ್ನು ಬಳಸಿ. ಒಂದು ವೇಳೆ ಶೀತ ಕಡಿಮೆಯಾಗದೆ ಜ್ವರದಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ವೈದ್ಯಕೀಯ ಸಲಹೆಯನ್ನು ಪಾಲಿಸುವುದು  ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next