Advertisement

ಜೇನು ಹುಳು ಕಡಿದಾಗ  ಏನು ಮಾಡಬೇಕು? ಇಲ್ಲಿದೆ ಮಾಹಿತಿ…

06:10 PM Mar 17, 2021 | Team Udayavani |

ಜೇನು ತುಪ್ಪವನ್ನು ಸವಿಯಲು ಎಷ್ಟು ರುಚಿಕರವೋ ಅದೇ ರೀತಿ ಆ ಜೇನು ತುಪ್ಪವನ್ನು ತಯಾರಿಸಿದ ಜೇನು ಹುಳು ಕಡಿದರೆ ಅಷ್ಟೇ ನೋವಾಗುವುದೂ ಸಹಜ. ಜೇನು ಹುಳುಗಳು ಒಮ್ಮೆಲೆ ಆವರಿಸಿಕೊಂಡು ಕಚ್ಚಿದರೆ ವ್ಯಕ್ತಿ ದೇಹ ಸಂಪೂರ್ಣ ಊದಿಕೊಂಡು ಗುರುತು ಸಿಗದವನಂತೆ ಆಗುತ್ತಾನೆ. ಇನ್ನೂ ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇರುತ್ತದೆ.

Advertisement

ಜೇನು ಕಡಿದಾಗ ಏನು ಮಾಡಬೇಕು?

ಜೇನು ಹುಳದಿಂದ ಕಚ್ಚಿಸಿಕೊಂಡವರು ಮೊದಲು ಅದರ ಇಂಬನ್ನು ತೆಗೆದು ತಣ್ಣನೆಯ ನೀರಿನಲ್ಲಿ ಕೈ ತೊಳೆಯಬೇಕು. ನಂತರ ಈ ಕೆಳಗಿನ ಮದ್ದನ್ನು ಬಳಸಬಹುದಾಗಿದೆ.

ಜೇನು ತುಪ್ಪ ಹಚ್ಚಿ:  ಜೇನು ತುಪ್ಪದಲ್ಲಿ ರೋಗ ನಿರೋಧಕ ಅಂಶಗಳಿದ್ದು, ಜೇನು ಹುಳುಗಳು ಕಡಿದಾಗ ಸ್ಪಲ್ಪ ಜೇನು ತುಪ್ಪವನ್ನು ಲೇಪನ ಮಾಡಿ, ಒಂದು ಘಂಟೆಯ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.  ಇದರಿಂದ ತುರಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ:ಯಡಿಯೂರಪ್ಪ ಬಂಜಾರಾ ಸಮುದಾಯಕ್ಕೆ ಎರಡನೇ ಸೇವಾಲಾಲ್ ಇದ್ದಂತೆ : ಸಚಿವ ಪ್ರಭು ಚವ್ಹಾಣ್

Advertisement

ತುಳಸಿ ರಸ ಬಳಸಿ

ಜೇನು ಹುಳುಗಳು ಕಚ್ಚಿದ ಸಮಯದಲ್ಲಿ ತುಳಸಿ ಎಲೆಯ ರಸವನ್ನು ತೆಗೆದು ಗಾಯವಾದ ಜಾಗಕ್ಕೆ ಲೇಪನ ಮಾಡುವುದರಿಂದ ಗಾಯ ಬಹುಬೇಗ ಗುಣಮುಖವಾಗುತ್ತದೆ. ಅಲ್ಲದೆ ತುಳಸಿ ರಸವನ್ನು ದೇಹಕ್ಕೆ ಹಚ್ಚುವುದರಿಂದ ಜೇನು ಹುಳುಗಳ ಹೆಚ್ಚಿನ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಟೂಥ್ ಪೇಸ್ಟ್ ಲೇಪಿಸಿ

ಜೇನು ಹುಳಗಳು ದಾಳಿ ಮಾಡಿ ಗಾಯಗಳಾದ ಜಾಗಕ್ಕೆ ಟೂಥ್ ಪೇಸ್ಟ್ ಅನ್ನು ಲೇಪನ ಮಾಡಿ. ಒಂದು ಘಂಟೆಯ ಬಳಿಕ ತಂಪಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ನೋವು ಉಪಶಮನವಾಗುತ್ತದೆ.

ಪಪ್ಪಾಯ ಬಳಕೆ

ಪಪ್ಪಾಯ ಹಣ್ಣಿನಲ್ಲಿ ಹಲವಾರು ಆರೋಗ್ಯಕರವಾದ ಅಂಶಗಳಿದ್ದು, ಇದರ ಜೊತೆ ಜೊತೆಗೆ ಇದರಲ್ಲಿ ಪಪೈನ್ ಎನ್ನುವ ಕಿಣ್ವವಿದೆ. ಈ ಅಂ‍ಶ ಜೇನು ಹುಳುಗಳು ಕಚ್ಚಿದಾಗ ಉಂಟಾಗುವ ನೋವು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಹಣ್ಣಿನ ತಿರುಳನ್ನು ಗಾಯವಾದ ಜಾಗಕ್ಕೆ ಹಚ್ಚುವುದರಿಂದ ಸಮಸ್ಯೆ ಬಹುಬೇಗ ಪರಿಹಾರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next