Advertisement

ಮಹಾ ಉತ್ಸವ ಸಂಭ್ರಮಿಸಿ

11:07 AM Apr 14, 2019 | Team Udayavani |

ಸೊಲ್ಲಾಪುರ: ದೇಶದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮಹಾ ಉತ್ಸವ ಸಂಭ್ರಮಿಸುವುದರ ಜೊತೆಗೆ ಬೇರೆಯವರಿಗೂ ಮತದಾನ ಮಾಡಲು ಪ್ರೋತ್ಸಾಹಿಸಬೇಕೆಂದು ಮತ ಜಾಗೃತಿ ಅಧಿಕಾರಿ ಹಾಗೂ ಜಿ.ಪಂ. ಮುಖ್ಯಕಾರ್ಯಕಾರಿ ಅಧಿಕಾರಿ ಡಾ| ರಾಜೇಂದ್ರ ಭಾರೂಢ ಮತದಾರರಿಗೆ ಕರೆ ನೀಡಿದರು.

Advertisement

ಸೊಲ್ಲಾಪುರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಏ.18 ರಂದು ಮತ್ತು ಮಾಢಾ ಲೋಕಸಭೆ ಚುನಾವಣೆ ಸಲುವಾಗಿ ಏ.23 ರಂದು ಮತದಾನ ನಡೆಯಲಿರುವ ನಿಮಿತ್ತ ನಗರದ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಮತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಇಒ ಡಾ| ರಾಜೇಂದ್ರ ಭಾರೂಢ ಮಾತನಾಡಿ, ಯುವಕರು ದೇಶದ ಪ್ರಜಾಪ್ರಭುತ್ವದ ಮಹಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಯಾವುದೆ ಆಮಿಷ ಮತ್ತು ಒತ್ತಡಕ್ಕೆ ಒಳಗಾಗದೇ ನಿರ್ಭಯವಾಗಿ ತಮ್ಮ ಪವಿತ್ರವಾದ ಮತವನ್ನು ಚಲಾಯಿಸಬೇಕು.

ದಿವ್ಯಾಂಗರಿಗೆ ಸಹಕರಿಸಲು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಶೇಕಡಾ 90ಕ್ಕೂ ಮೇಲ್ಪಟ್ಟು ಮತದಾನ ಮಾಡಿದ ಆಯಾ ಗ್ರಾಪಂ ಚುನಾವಣೆ ಅಧಿ ಕಾರಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಗುವದು ಎಂದು ಹಳಿದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸಲೆ ಮಾತನಾಡಿ, ಮತದಾನ ಪ್ರತಿಯೊಬ್ಬ ಪ್ರಜೆಯ ಪವಿತ್ರ ನಾಗರಿಕ ಸೇವೆಯಾಗಿದ್ದು, ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಅಲ್ಲದೆ ಮತದಾರರು
ಮತದಾನದ ದಿವಸ ಮತಗಟ್ಟೆಗಳಿಗೆ ಹೋಗುವ ಮೂಲಕ ತಮ್ಮ ಬಂಧು-ಬಳಗ ಹಾಗೂ ಆಪ್ತ ಸ್ನೇಹಿತರಿಗೆ ಮತದಾನ ಮಾಡಲು ಪ್ರೋತ್ಸಾಹಿಸಬೇಕು
ಎಂದು ಹೇಳಿದರು. ಪೊಲೀಸ್‌ ಆಯುಕ್ತ ಮಹಾದೇವ ತಾಂಬಡೆ, ಜಿಲ್ಲಾ ಪೊಲೀಸ್‌ ಅಧಿಕ್ಷಕ ಮನೋಜ ಪಾಟೀಲ, ಕ್ಷೇತ್ರ ಅಧಿ ಕಾರಿ ಅಂಕುಶ ಚವ್ಹಾಣ ಮತ್ತಿತರರಿದ್ದರು.

Advertisement

ಇಂದಿರಾ ಗಾಂಧಿ  ಕ್ರೀಡಾಂಗಣದಲ್ಲಿ ಸ್ವೀಪ್‌ ಸಮಿತಿ ವತಿಯಿಂದ 45 ಅಡಿ ಎತ್ತರದ ಭಾರತ ದೇಶದ ತ್ರಿವರ್ಣ ಧ್ವಜ ‘ಮತ ಜಾಗೃತಿ’ ಲೋಗೋ ತಯಾರಿಸಿದ್ದು ನೋಡುಗರ ಮನಸೆಳೆಯಿತು. ಮತ ಜಾಗೃತಿಗಾಗಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚಿನ ನಾಗರಿಕರು ಮತ್ತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next