Advertisement

ವಾರದ ಮಲ್ಲಪ್ಪ‌ ಸಾಮಾಜಿಕ ಸೇವೆ ಅನನ್ಯ

11:13 AM Jun 20, 2019 | Naveen |

ಸೊಲ್ಲಾಪುರ: ಸೊಲ್ಲಾಪುರದ ವಾರದ ಮಲ್ಲಪ್ಪನವರು ವೀರಶೈವ ಧರ್ಮದ ಯುಗ ಪುರುಷರಾಗಿದ್ದರು. ವಾರದ ಮಲ್ಲಪ್ಪನವರನ್ನು ಸೊಲ್ಲಾಪುರದ ಜನತೆ ಅಪ್ಪಸಾಹೇಬ್‌ ಎಂದು ಕರೆಯುತ್ತಿದ್ದರು ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

ಸೊಲ್ಲಾಪುರ ನಗರದ ಹುತಾತ್ಮ ಸ್ಮೃತಿ ಭವನದಲ್ಲಿ ಹಮ್ಮಿಕೊಂಡಿದ್ದ ವಾರದ ಮಲ್ಲಪ್ಪನವರ ಚರಿತ್ರೆ ಗ್ರಂಥವಾದ ಪುಣ್ಯಶ್ಲೋಕ ವಾರದ ಗ್ರಂಥದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಬ್ರಿಟಿಷ್‌ ಸರ್ಕಾರವು ಇವರ ಸಾಮಾಜಿಕ ಸೇವೆಯನ್ನು ಪರೀಕ್ಷಿಸಿ ಇವರಿಗೆ ರಾವ್‌ ಬಹದ್ದೂರ್‌ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ಅಪ್ಪಸಾಹೇಬ್‌ ವಾರದವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಮಾಡಿದ ಸೇವೆ ಅಪೂರ್ವವಾದದು. ಸೊಲ್ಲಾಪುರದ ಜನತೆ ಇವರನ್ನು ಮಹಾರಾಜ ಎಂತಲೆ ಕರೆಯುತ್ತಿದ್ದರು. ಇವರು ನರಸಿಂಹ ಗಿರಿಜಿ ಎಂಬ ಮುಂಬೈಯ ಮಾರ್ವಾಡಿ ಅವರ ಸಹಭಾಗಿತ್ವದಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಿದ್ದರು. ಅದ್ದರಿಂದ ಸಾವಿರಾರು ಬಡ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. ತಮ್ಮ ಸಾವಿರಾರು ಎಕರೆ ಭೂಮಿ ಜೊತೆಗೆ ಇತರರ ಭೂಮಿಯನ್ನು ಸಹ ಪಡೆದುಕೊಂಡು 16 ಸಾವಿರ ಎಕರೆ ಭೂಮಿಯನ್ನು ರೈತರಿಂದ ಮಾಡಿಸುವುದರ ಮೂಲಕ ಅನೇಕ ರೈತರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು.

ವಾರದ ಕಾಮರ್ಸ್‌ ಕಾಲೇಜ್‌ ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದ್ದರು. ವೀರಶೈವ ಧರ್ಮದ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ಇರುವುದರಿಂದ ನಮ್ಮ ಸಮಾಜದ ಸ್ವಾಮಿಗಳಿಗೆ ಮತ್ತು ಶಾಸ್ತ್ರಿಗಳಿಗೆ ಸೊಲ್ಲಾಪುರದಲ್ಲಿ ಉತ್ತಮ ಸಂಸ್ಕೃತ ಅಧ್ಯಯನಕ್ಕಾಗಿ ಶ್ರೀಮದ್‌ ವೀರಶೈವ ವಾರದ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿ ನಾಲ್ಕಾರು ಪಂಡಿತರ ಮೂಲಕ ವೀರಶೈವ ಮಠಾಧಿಪತಿಗಳಿಗೆ ಸಂಸ್ಕೃತ ಅಧ್ಯಯನಕ್ಕೆ ಅನುಕೂಲತೆ ಮಾಡಿಕೊಟ್ಟರು. ಈ ಪಾಠ ಶಾಲೆಯಲ್ಲಿ ಕಲಿತ ಅನೇಕರು ಮುಂದೆ ಕಾಶಿ ಪೀಠದಲ್ಲಿ ಉನ್ನತ ಅಧ್ಯಯನವನ್ನು ಮಾಡಿ ಪಂಚ ಪೀಠಗಳ ಪೀಠಾಧಿಪತಿಗಳಾದರು. ಅಲ್ಲದೆ ಅನೇಕರು ನಿರಂಜನ ಪೀಠಗಳು, ಅಧಿಪತಿಗಳು ಸಮಾಜದಲ್ಲಿ ಶೈಕ್ಷಣಿಕ ಸೇವೆಯನ್ನು ಮಾಡಿದರು. ಅನೇಕ ಜನ ವಿದ್ವಾಂಸರು ವಿವಿಧ ಪಾಠಶಾಲೆಗಳ ಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸಿದ್ದು ಬಹು ದೊಡ್ಡ ದಾಖಲೆಯಾಗಿದೆ ಎಂದರು.

ವಾರದ ಮಲ್ಲಪ್ಪನವರು ಶ್ರೀಮದ್‌ ವೀರಶೈವಲಿಂಗ ಬ್ರಾಹ್ಮಣ ಗ್ರಂಥಮಾಲೆ ಸ್ಥಾಪಿಸಿ ಅದರ ವತಿಯಿಂದ ದುರ್ಮಿಳ ಗ್ರಂಥಗಳನ್ನು ಸಂಗ್ರಹಿಸಿ ವಿದ್ವಾಂಸರಿಂದ ಸಂಶೋಧಿಸಿ ಮರಾಠಿ ಭಾಷೆಗೆ ಅನುವಾದ ಮಾಡಿ ತಮ್ಮ ಅಡತ್‌ ಅಂಗಡಿಗಳಲ್ಲಿ ಅವುಗಳ ಮಾರಾಟದ ವ್ಯವಸ್ಥೆಯನ್ನು ಮಾಡಿದ್ದು ಎಲ್ಲರೂ ಒಪ್ಪುವಂತಹದ್ದು. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ವಾರದ ಮಲ್ಲಪ್ಪನವರು ಒಬ್ಬರೇ ತಮ್ಮ ಆದಾಯದಿಂದ ಗ್ರಂಥ ಮುದ್ರಣವನ್ನು ಮಾಡಿ ಬಹುದೊಡ್ಡ ಉಪಕಾರ ಮಾಡಿದ್ದಾರೆ ಎಂದರು.

Advertisement

ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯ ಅಪೂರ್ವವಾದದ್ದು. ಇಂತಹ ಮಹನೀಯ ವ್ಯಕ್ತಿಯು ತಮ್ಮ ನಿವಾಸಕ್ಕಾಗಿ ಸೊಲ್ಲಾಪುರದಲ್ಲಿ ಇಂದ್ರ ಭವನವನ್ನು ನಿರ್ಮಿಸಿದ್ದರು. ಸೊಲ್ಲಾಪುರದಲ್ಲಿ ಅಷ್ಟು ಸುಂದರವಾದ ವಾಸ್ತುಶಿಲ್ಪವನ್ನು ಮತ್ತೆ ಯಾರಿದಂಲೂ ನಿರ್ಮಿಸಲಿಕ್ಕೆ ಸಾಧ್ಯವಾಗಲಿಲ್ಲ. ಈ ವಾಸ್ತುವಿನಲ್ಲಿ ಇಂದು ಸೊಲ್ಲಾಪುರ ಮಹಾನಗರ ಪಾಲಿಕೆ ಕಾರ್ಯ ನಿರ್ವಹಿಸುತ್ತಿದೆ.

ಬ್ರಿಟಿಷರ್‌ ವಾಸ್ತುವಿನ ಮಾದರಿಯಲ್ಲಿ ನಿರ್ಮಿಸಿದ ಈ ವಾಸ್ತು ಸೊಲ್ಲಾಪುರಕ್ಕೆ ಒಂದು ಹೆಮ್ಮೆಯ ಗರಿಯನ್ನು ಮೂಡಿಸುವಂತಿದೆ. ಹೀಗೆ ವಾರದ ಮಲ್ಲಪ್ಪನವರು ಬಹು ಪ್ರತಿಭೆಯ ವ್ಯಕ್ತಿತ್ವವನ್ನು ಅಮರಾವತಿ ನಾ.ರಾ. ಬಾಮನ ಗಾವ್ಕರ್‌ ಇವರು ಮರಾಠಿಯಲ್ಲಿ ಅವರ ಚರಿತ್ರೆಯನ್ನು ಪುಣ್ಯಶ್ಲೋಕ ವಾರದ ಎಂಬ ಹೆಸರಿನಿಂದ ವಿರಚಿಸಿದ್ದರು. ಇಂದು ಅದೇ ಗ್ರಂಥ ಮರು ಮುದ್ರಣಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ಒಂದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೊಲ್ಲಾಪುರ ವಿವಿ ಕುಲಪತಿ ಮೃಣಾಲಿನಿ ಫಡನವಿಸ್‌ ಆಗಮಿಸಿದ್ದರು. ಸೊಲ್ಲಾಪುರದ ಮೇಯರ್‌ ಶೋಭಾ ಬನಶೆಟ್ಟಿ, ರಾಜಶೇಖರ್‌ ಶಿವದಾರೆ ಪಾಲ್ಗೊಂಡಿದ್ದರು. ಮರಾಠಿ ವೀರಶೈವ ಸಾಹಿತ್ಯದ ಶ್ರೇಷ್ಠ ಸಂಶೋಧಕರಾದ ಡಾ|| ಶೇಷನಾರಾಯಣ ಪಸಾರಕರ ಇವರು ಗ್ರಂಥದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next