Advertisement

ಪಂಢರಪುರ ವಿಠ್ಠಲನಿಗೆ ಫಡ್ನವೀಸ್‌ ಮಹಾಪೂಜೆ

11:02 AM Jul 13, 2019 | Naveen |

ಸೊಲ್ಲಾಪುರ: ಬರಗಾಲ ಮುಕ್ತ ಮಹಾರಾಷ್ಟ್ರಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ನಿಸರ್ಗದ ಸಾಥ್‌ ದೊರೆಯಲಿ, ರಾಜ್ಯದಲ್ಲಿ ಸಾಕಷ್ಟು ಮಳೆಯಾಗುವ ಮೂಲಕ ರೈತರಿಗೆ ಸುಖವಾಗಲಿ, ರೈತರಿಗೆ ನಿನ್ನ ಆಶೀರ್ವಾದ ಸದಾ ಇರಲಿ ಮತ್ತು ಮಹಾರಾಷ್ಟ್ರ ಸುಜಲಾಂ, ಸುಫಲಾಂವಾಗಲಿ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪಂಢರಪುರ ವಿಠuಲನಲ್ಲಿ ಪಾರ್ಥಿಸಿದರು.

Advertisement

ಆಷಾಢ ಏಕಾದಶಿ ಅಂಗವಾಗಿ ಶುಕ್ರವಾರ ಬೆಳಗ್ಗೆ ಪಂಢರಪುರ ವಿಠuಲ-ರುಕ್ಮಿಣಿಯ ಸರ್ಕಾರಿ ಮಹಾಪೂಜೆಯನ್ನು ರಾಜ್ಯದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್‌, ಪತ್ನಿ ಅಮೃತಾ ಫಡ್ನವೀಸ್‌ ನೆರವೇರಿಸಿದರು.

ಸರಕಾರಿ ಮಹಾಪೂಜೆ ನೆರವೇರಿಸಿದ ನಂತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಸುಖವಾಗಲಿ, ರೈತರು ಸುಖವಾಗಿದ್ದರೇ ರಾಜ್ಯವು ಸುಖವಾಗಿರಲು ಸಾಧ್ಯ. ಬರಗಾಲ ಮುಕ್ತ ಮಹಾರಾಷ್ಟ್ರಕ್ಕಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದೆ. ರಾಜ್ಯ ಸರಕಾರದ ಪ್ರಯತ್ನಗಳಿಗೆ ನಿಸರ್ಗದ ಸಹಾಯ ಮಹತ್ವದ್ದಾಗಿದೆ. ಈಗಾಗಲೇ ರಾಜ್ಯ ಸರಕಾರ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಗಿಡ-ಮರಗಳಿಂದ ಬರಗಾಲ ಮುಕ್ತವಾಗಲಿದೆ. ಹೀಗಾಗಿ ಆಷಾಢ ಏಕಾದಶಿಯಂದು ಪಂಢರಪುರ ವಿಠuಲನ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಒಂದೊಂದು ಮರಗಳನ್ನು ಬೆಳಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಭಾಗವತ ಧರ್ಮ ವಾರಕರಿ ಸಂಪ್ರದಾಯವು ಮಹಾರಾಷ್ಟ್ರಕ್ಕೆ ವೈಭವದ ಸಾಂಸ್ಕೃತಿಕ ಪರಂಪರೆ ಹಾಕಿಕೊಟ್ಟಿದೆ. ಈ ಪರಂಪರೆಯಿಂದ ಶಕ್ತಿ, ಸಮತೆ, ಸಂಸ್ಕಾರಗಳು ಮಾನವ ಜೀವನಕ್ಕೆ ಕೊಡುಗೆಯಾಗಿವೆ. ಪ್ರತಿಯೊಂದು ಆಷಾಢ ವಾರಿವು ನಿರ್ಮಲಯುತ ವಾರಿಗಾಗಿ ನಾನು ರಾಜ್ಯ ಸರ್ಕಾರದಿಂದ ಪ್ರಯತ್ನಿಸುವುದಾಗಿ ಹೇಳಿದರು.

ಇಂದು ಸರ್ಕಾರಿ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿನ ಭಾಗ್ಯದ ದಿನವಾಗಿದೆ. ಇದರಿಂದ ಸಿಕ್ಕಿರುವ ಶಕ್ತಿಯನ್ನು ರಾಜ್ಯದ ಸಮಾನ್ಯ ಜನರ ಕಲ್ಯಾಣಕ್ಕಾಗಿ ಉಪಯೋಗಿಸಲಾಗುವುದು. ಅಲ್ಲದೆ ಮುಂದಿನ ಸರಕಾರಿ ಪೂಜೆಯೂ ಸಲ್ಲಿಸುವ ಅವಕಾಶ ದೊರೆಯಲಿ ಎಂದ ಅವರು, ಪಂಢರಪುರ ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಹೇಳಿದರು.

Advertisement

ಗ್ರಾಮೀಣ ಪ್ರದೇಶದಲ್ಲಿ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಜತೆಗೆ, ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಉದ್ಯೋಗ ಯೋಜನೆ, ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಅಲ್ಲದೆ ಮರಾಠಾ ಸಮುದಾಯಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ನೀಡಿಲಾಗಿದೆ. ಇದರಿಂದ ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ವಿಠuಲ-ರುಕ್ಮಿಣಿ ಮಂದಿರ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು. ಪಂಢರಪುರ ವಾರಿಗೆ ಬರುವ ಭಕ್ತರಿಗೆ ಸಕಲ ಸೌಲಭ್ಯ ಒದಗಿಸುವ ಕೆಲಸವನ್ನು ಜಿಲ್ಲಾ ಪ್ರಶಾಸನ ಮಾಡಿದೆ. ವಾರಕರಿಗಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಂಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ ಹೇಳಿದರು.

ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ, ಶಿಕ್ಷಣ ಸಚಿವ ವಿನೋದ ತಾವಡೆ, ವಿಧಾನ ಪರಿಷದ್‌ ಉಪ ಸಭಾಪತಿ ನೀಲಮ್‌ ಗೋಹ್ರೆ, ಮಾಢಾ ಸಂಸದ ರಣಜೀತಸಿಂಹ ನಿಂಬಾಳಕರ್‌, ಮಂದಿರ ಸಮಿತಿಯ ಸಭಾಪತಿ ಹಾಗೂ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸಲೆ ಸೇರಿದಂತೆ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next