Advertisement

ಸೊಲ್ಲಾಪುರ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಗೋಷ್ಠಿ 

02:57 PM Jul 13, 2017 | |

ಸೊಲ್ಲಾಪುರ: ಅನುವಾದಕನೊಬ್ಬ ನದಿಯ ಸೇತುವೆಯಂತೆ. ತಾನು ಅನುವಾದಿಸಿರುವ ಕೃತಿಯಿಂದ ಎರಡು ಬೇರೆ ಬೇರೆ ಭಾಷೆಯ ಓದುಗರಿಗೆ ವಿಷಯ ತಲುಪಿಸುವ ಕಾರ್ಯ ಮಾಡುತ್ತಾನೆ. ಒಂದು ದಡದಿಂದ ಇನ್ನೊಂದು ದಡ ಸೇರುತ್ತಿದ್ದಾಗ ಸೇತುವೆ ಕೆಳಗಿದ್ದ ಕಂಭ ಯಾರ ಕಣ್ಣಿಗೂ ಕಾಣುವುದಿಲ್ಲ. ಹಾಗೇ ಒಬ್ಬ ಅನುವಾದಕನು ಕೂಡ ಆ ಕಂಭದಂತೆ ಯಾರ ಕಣ್ಣಿಗೂ ಕಾಣದೆ ಮರೆಯಾಗಿರುತ್ತಾನೆ. ಒಟ್ಟಾರೆ ಅನುವಾದಕನು ನದಿಯ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಾನೆ ಎಂದು ಪತ್ರಕರ್ತ ಚನ್ನವೀರ ಭದ್ರೇಶ್ವರಮಠ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜು. 9ರಂದು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ ಇಲ್ಲಿಯ ಹುತಾತ್ಮ ಸ್ಮೃತಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಮರಾಠಿ ಭಾಷೆಗಳ ಅನುವಾದ ಕುರಿತು ಅವರು ಮಾತನಾಡಿ, ಅನುವಾದಕನಿಗೆ ಎರಡು ಭಾಷೆಗಳ ಮೇಲೆ ಪರಿಪೂರ್ಣತೆ ಇರಬೇಕು. ಅನುವಾದಕನಿಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎರಡು ಭಾಷೆಯ ಶಬ್ದಗಳ ಅರ್ಥವನ್ನು ಓದುಗರಿಗೆ ತಿಳಿಯುವಂತೆ ಅನುವಾದಿಸಬೇಕು. ಅಲ್ಲದೆ ತಾನು ಅನುವಾದಿಸಿದ ಕೃತಿ ಓದುಗನಿಗೆ ಮಾತೃ  ಭಾಷೆಯಂತೆ ಕಾಣಬೇಕು. ಅನುವಾದಕನು ತನ್ನ ಬರವಣಿಗೆಯ ಮೂಲಕ ಓದುಗರ ಮನ ಮುಟ್ಟುತ್ತಾನೆ. ಕನ್ನಡ ಮತ್ತು ಮರಾಠಿ ಇವೆರಡು ಭಾಷೆಗಳು ನಮಗೆ ತಾಯಿ ಮತ್ತು ಚಿಕ್ಕಮ್ಮ ಇದ್ದಂತೆ. ಹಾಗೇ ಕನ್ನಡ ಮತ್ತು ಮರಾಠಿ ಭಾಷೆಗಳು ನಮಗೆ ರಕ್ತ ಸಂಬಂಧದ ಸಹೋದರರಂತೆ ಕಾಣಬೇಕು. ಎರಡು ಭಾಷೆಗಳ ಅನುವಾದದಿಂದ ತಮ್ಮ ತಮ್ಮ ಭಾಷೆಯ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ ಎಂದು ಹೇಳಿದರು.

ಜಾನಪದ ಸಾಹಿತ್ಯದ ಹಿರಿಯ ಸಾಹಿತಿ ಡಾ| ವೀರಣ್ಣ ದಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕ್ಕಲ್‌ಕೋಟೆಯ ಪೂಜ್ಯ  ಕ್ಕರೇವಣಸಿದ್ದ ಶ್ರೀಗಳ ಸಾನ್ನಿಧ್ಯದಲ್ಲಿ ಕನ್ನಡ-ಮರಾಠಿ ಸಾಹಿತ್ಯ ಬಾಂಧವ್ಯ ಕುರಿತು ಹಂಪಿ ವಿವಿಯ ಡಾ| ವಿಟuಲರಾವ್‌ ಕಾಯಕ್ವಾಡ್‌, ಕನ್ನಡ-ಮರಾಠಿ ಭಾಷೆಗಳ ಸಂಸ್ಕೃತಿಕ ಕುರಿತು ವಿಜಯಪುರದ ಡಾ| ವಿ. ಎಸ್‌. ಮಾಳಿ ಅವರು ಉಪನ್ಯಾಸ ನೀಡಿದರು. ಸರ್ವಾಧ್ಯಕ್ಷ ಡಾ| ಬಿ. ಬಿ. ಪೂಜಾರಿ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ವೇದಿಕೆಯಲ್ಲಿದ್ದರು. ಸುನೀವ್‌ ಸಾವಳಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ವಾಘ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next