Advertisement

ಅನ್ನಛತ್ರ ಮಂಡಳದಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ

10:06 AM Aug 12, 2019 | Team Udayavani |

ಸೊಲ್ಲಾಪುರ: ಮಹಾರಾಷ್ಟ್ರದ ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಸಿಲುಕಿರುವ ಜನರ ನೋವಿಗೆ ಸ್ಪಂದಿಸಿದ ತಿರ್ಥಕ್ಷೇತ್ರ ಅಕ್ಕಲಕೋಟ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರು ಅಲ್ಲಿನ ಜನರಿಗೆ ದೈನಂದಿನ ಜೀವನಾವಶ್ಯಕ ವಸ್ತುಗಳನ್ನು ಕಳಿಸಲು ವ್ಯವಸ್ಥೆ ಮಾಡಿದ್ದಾರೆ.

Advertisement

ಮಹಾರಾಷ್ಟ್ರದ ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದಿಂದ ಜನರು ತತ್ತರಿಸಿದ್ದಾರೆ. ನೂರಾರು ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲದೇ ಲಕ್ಷಾಂತರ ಜನರು ತಮ್ಮವರನ್ನೆಲ್ಲ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ದೈನಂದಿನ ಜಿವನಾವಶ್ಯಕ ವಸ್ತುಗಳು ಸಿಗದೇ ಪರದಾಡುತ್ತಿದ್ದಾರೆ.

ಇಂಥವರ ನೋವಿಗೆ ಸ್ಪಂದಿಸಲು ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಹಾಗೂ ಅವರ ಪುತ್ರ ಮುಖ್ಯ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ನೇತೃತ್ವದಲ್ಲಿ ಜಿವನಾವಶ್ಯಕ ವಸ್ತುಗಳಾದ ಸುಮಾರು ಒಂದು ಲಕ್ಷ ಬಿಸ್ಕಿಟ್ ಪಾಕೇಟ್, ಚೂಡಾ ಪಾಕೇಟ್, ನೀರಿನ ಬಾಟಲ್, ಔಷಧ ಮತ್ತು ಮಕ್ಕಳ ಬಟ್ಟೆ ಸೇರಿದಂತೆ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ನಾಲ್ಕು ವಾಹನಗಳ ಮೂಲಕ ಪ್ರವಾಹ ಪೀಡಿತ ನಿರಾಶ್ರಿತರಿಗೆ ತಲುಪಿಸಲು ರವಿವಾರ ಸ್ವತಃ ಅಮೋಲರಾಜೆ ಭೋಸಲೆ ಅವರು ಸಾಂಗ್ಲಿ ಮತ್ತು ಕೊಲ್ಲಾಪುರಕ್ಕೆ ತೆರಳಿದ್ದಾರೆ. ಮೊದಲಿಗೆ ಅನ್ನಕ್ಷೇತ್ರದ ಆವರಣದಲ್ಲಿ ಜಿಲ್ಲಾ ಮುಖ್ಯ ನ್ಯಾಯಾಧಿಧೀಶ ಮಂಗಲಾ ಧೋಟೆ ಮತ್ತು ಔರಂಗಾಬಾದ ಹಿರಿಯ ನ್ಯಾಯಾಧೀಶ ಆಶಿಶ್‌ ಐಚಿತ್‌ ಅವರ ಹಸ್ತದಿಂದ ವಾಹನಗಳಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಅನ್ನಕ್ಷೇತ್ರ ಮಂಡಳವು ಸಾಮಾಜಿಕ ಬದ್ಧತೆ ಕಾಪಾಡುವ ಮೂಲಕ ವಿವಿಧ ಸಾಮಾಜಿಕ ಕಾರ್ಯ ಕೈಗೊಂಡಿದೆ. ಹಿಂದೆ ಭೀಕರ ಬರಗಾಲ, ಭೂಕಂಪ ಮತ್ತು ರಾಜ್ಯ ಮತ್ತು ಪರರಾಜ್ಯಗಳಲ್ಲಿ ಸಂಭವಿಸಿದ ಸಂಕಷ್ಟ ಸಮಯದಲ್ಲಿ ಸಹಾಯ ಮಾಡುತ್ತ ಬಂದಿದೆ. ಮಂಡಳ ಕಾರ್ಯದರ್ಶಿ ಶಾಮರಾವ್‌ ಮೋರೆ, ಲಾಲಾ ರಾಠೊಡ, ಲಕ್ಷ್ಮಣ ಪಾಟೀಲ, ಅಪ್ಪಾ ಹಂಚಾಟೆ, ಸಂತೋಷ ಭೋಸಲೆ, ಶಿವಸೇನೆ ನಗರ ಮುಖ್ಯಸ್ಥ ಯೋಗೇಶ ಪವಾರ, ಭಜನಿ ಮಂಡಳ ಅಧ್ಯಕ್ಷ ಸುರೇಶ ಜಾಧವ, ದೀಪಕ ಪೋತದ್ದಾರ್‌, ಸ್ವಪ್ನಿಲ್ ಮೋರೆ, ಅನೀಲ ಪವಾರ, ಕಾಶಿನಾಥ ಪೋತದ್ಡಾರ, ಪದ್ಮಕರ್‌ ಡಿಗ್ಗೆ, ಪ್ರವೀಣ ದೇಶಮುಖ, ಡಾ| ಸತೀಶ ಬಿರಾಜದಾರ, ಶೀತಲ ಫುಟಾಣೆ, ರಾಜು ನವಲೆ, ಧನಂಜಯ್‌ ಬಣಜಗೋಳ, ಮನೋಜ ಅತನೂರೆ, ಕಿರಣ ಪಾಟೀಲ, ಮನೋಜ ನಿಕ್ಕಂ, ಚಂದ್ರಕಾಂತ್‌ ಕುಂಬಾರ, ಗಣೇಶ ಭೋಸಲೆ, ರೋಹಿತ್‌ ಖೋಬರೆ, ಸತೀಶ್‌ ಮಹೀಂದ್ರಕರ್‌, ಪ್ರವೀಣಘಾಟಗೆ, ಮಹಾಂತೇಶ ಸ್ವಾಮಿ, ಸಿದ್ಧರಾಮ ಪೂಜಾರಿ, ಬಾಳಾಸಾಹೇಬ್‌ ಘಾಟಗೆ, ಶಹಾಜಿ ಯಾದವ್‌, ಗೊಟು ಮಾನೆ, ವೈಭವ್‌ ಮೋರೆ, ಆಕಾಶ್‌ ಗಡ್ಕರಿ, ಅತಿಶ್‌ ಪವಾರ, ಪಿಂಟು ದೊಡ್ಡಮನಿ ಹಾಗೂ ಮತ್ತಿತರರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ನಾಗರಿಕರಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸಲೆ ನೀಡಿದ ಕರೆಗೆ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಸ್ಪಂದಿಸಿ, ಅಗತ್ಯ ಸಾಮಗ್ರಿಗಳನ್ನು ಕಳುಹಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿಯೂ ಅಲ್ಲಿನ ಜನರ ನೋವಿಗೆ ನಾವು ಸ್ಪಂದಿಸುತ್ತೇವೆ.
ಜನ್ಮೇಜಯರಾಜೆ ಭೋಸಲೆ,
ಸಂಸ್ಥಾಪಕ ಅಧ್ಯಕ್ಷ, ಅನ್ನಛತ್ರ ಮಂಡಳ

ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ದೈನಂದಿನ ಜೀವನಾವಶ್ಯಕ ವಸ್ತುಗಳನ್ನು ನೀಡುವ ಸಲುವಾಗಿ ರವಿವಾರ ಕೊಲ್ಲಾಪುರಕ್ಕೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗೆ ತಲುಪಿಸಲಾಗುವುದು. ಸಹ‌ಕಾರ ಮನೋ ಭಾವನೆಯಿಂದ ಅಕ್ಕಲಕೋಟ ನಗರದ ಜನರು ಸ್ಪಂದಿಸಿ ಆದಷ್ಟು ಸಹಾಯ ಮಾಡಿದ್ದಾರೆ.
ಅಮೋಲರಾಜೆ ಭೋಸಲೆ,
ಮುಖ್ಯ ಕಾರ್ಯಕಾರಿ ವಿಶ್ವಸ್ತ, ಅನ್ನಛತ್ರ ಮಂಡಳ

Advertisement
Advertisement

Udayavani is now on Telegram. Click here to join our channel and stay updated with the latest news.

Next