Advertisement

ಇಂದು ಚಾಮರಾಜನಗರದಲ್ಲಿ ‘ಸೋಲಿಗ ಚಿತ್ರಗಳು’ ಪುಸ್ತಕ ಬಿಡುಗಡೆ

09:06 AM Mar 23, 2021 | Team Udayavani |

ಚಾಮರಾಜನಗರ: ನಗರದ ದೀನಬಂಧು ಸಂಸ್ಥೆಯ ಸಂಸ್ಥಾಪಕ, ಚಿಂತಕ ಪ್ರೊ. ಜಿ.ಎಸ್. ಜಯದೇವ ಅವರ ಸೋಲಿಗ ಚಿತ್ರಗಳು ಪುಸ್ತಕ ಬಿಡುಗಡೆ ಸಮಾರಂಭ ನಗರದ ದೀನಬಂಧು ಆಶ್ರಮದಲ್ಲಿ ಮಾ. 23ರಂದು ಸಂಜೆ 5.30ಕ್ಕೆ ನಡೆಯಲಿದೆ.

Advertisement

ಸಾಹಿತಿ ಡಾ. ಕೃಷ್ಣಮೂರ್ತಿ ಹನೂರು ಕೃತಿ ಬಿಡುಗಡೆ ಮಾಡುವರು. ಜಿಲ್ಲಾಧಿಕಾರಿ ಡಾ. ರವಿ ಅಧ್ಯಕ್ಷತೆ ವಹಿಸುವರು, ವಿಮರ್ಶಕ ಟಿ.ಪಿ. ಅಶೋಕ ಪುಸ್ತಕ ಕುರಿತು ಮಾತನಾಡುವರು. ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ಕೆ. ಮರುಳಸಿದ್ದಪ್ಪ, ಜಿ.ಎಸ್. ಜಯಂತಿ ಉಪಸ್ಥಿತರಿರುವರು.

ಈ ಪುಸ್ತಕದಲ್ಲಿ ಜಯದೇವ ಅವರು, 1978ರಿಂದ ಈವರೆಗೂ ತಾವು ಒಡನಾಡಿಕೊಂಡು ಬಂದ ಬಿಳಿಗಿರಿರಂಗನ ಬೆಟ್ಟದ ಸೋಲಿಗರೊಂದಿಗಿನ ನೆನಪುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮನುಕುಲದ ಉಳಿವಿಗೆ ಹವಾಮಾನವೇ ಶ್ರೀರಕ್ಷೆ: ಇಂದು ವಿಶ್ವ ಹವಾಮಾನ ದಿನ

ಈ ಪುಸ್ತಕದಲ್ಲಿ ಹರಡಿರುವ ನೆನಪುಗಳು ಸ್ವಾರಸ್ಯಕರವಾಗಿ, ಕೆಲವೊಮ್ಮೆ ವಿನೋದಕರವಾಗಿ, ಹಲವುಬಾರಿ ಗಹನವಾಗಿ, ಮತ್ತೆ ಪದೇ ಪದೇ ನಮ್ಮ ಪ್ರಕೃತಿಯ, ಕಾಡುಗಳ ಈಗಿನ ಪರಿಸ್ಥಿತಿಯನ್ನು ವಿವರಿಸುತ್ತಾ ವಿಸ್ತಾರವಾಗಿ ಹರಿಯುತ್ತದೆ.

Advertisement

ಕಾರ್ಯಕ್ರಮ ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಸಭಿಕರ ಉಪಸ್ಥಿತಿಯಲ್ಲಿ ನಡೆಯಲಿದೆ.  ಕಾರ್ಯಕ್ರಮ ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಸಭಿಕರ ಉಪಸ್ಥಿತಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಬಹುದಾಗಿದೆ. Deenabandhu Teacher Resource Center ಯೂಟ್ಯೂಬ್ ಚಾನೆಲ್ ಮೂಲಕ ಮಾ. 23 ರ ಸಂಜೆ 5.30ರಿಂದ ನೇರ ಪ್ರಸಾರವಿರುತ್ತದೆ.

ನೇರ ಪ್ರಸಾರದ ಲಿಂಕ್ ಇಲ್ಲಿದೆ:

 

Advertisement

Udayavani is now on Telegram. Click here to join our channel and stay updated with the latest news.

Next