Advertisement

ಘನ ತ್ಯಾಜ್ಯ ನಿರ್ವಹಣಾ ಘಟಕ ಆರಂಭ

03:31 PM Oct 16, 2019 | Suhan S |

ಕುಮಟಾ: ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕ ಸಾಂಕೇತಿಕವಾಗಿ ಆರಂಭಿಸಲಾಯಿತು.

Advertisement

ಪಂಚಾಯತ ಸುತ್ತಮುತ್ತಲಿನ ಹಾಗೂ ರೈಲ್ವೆ ಗೇಟ್‌ನಿಂದ ಹಳಕಾರ ರಸ್ತೆ ಅಕ್ಕ ಪಕ್ಕದಲ್ಲಿ ಬೀಸಾಡಿರುವ ಪ್ಲಾಸ್ಟಿಕ್‌ ಬಾಟಲಿ, ಹಾಲಿನ ಪ್ಯಾಕೆಟ್‌ ಮತ್ತಿತರ ಘನ ತ್ಯಾಜ್ಯಗಳನ್ನು ಆರಿಸಿ ತಂದು 10 ವಿಭಾಗಗಳಾಗಿ ವಿಂಗಡನೆ ಮಾಡಿ ಘಟಕದಲ್ಲಿ ಹಾಕಲಾಯಿತು. ಈ ಘಟಕದ ಕುರಿತು ಗ್ರಾಪಂ ಅಧ್ಯಕ್ಷ ಮಂಜುನಾಥ ಪಟಗಾರ ಮಾತನಾಡಿ, ಸಾರ್ವಜನಿಕರು ಸcತ್ಛತೆ ಬಗ್ಗೆ ಜಾಗೃತಿಗೊಳ್ಳಬೇಕಿದ್ದು, ಗ್ರಾಪಂ ಕೆಲಸಕ್ಕೆ ಗ್ರಾಮಸ್ಥರು ಕೈಜೋಡಿಸಬೇಕಿದೆ. ಎಲ್ಲೆಂದರಲ್ಲಿ ಕಸ ಬೀಸಾಡದೆ, ಕಸಗಳನ್ನು ವಿಂಗಡಿಸಿ ಘಟಕಕ್ಕೆ ಹಾಕಿದರೆ ಅದನ್ನು ಸಂಬಂಧಪಟ್ಟವರು ವಿಲೇವಾರಿ ಮಾಡುತ್ತಾರೆ ಎಂದರು. ತಾಪಂ ಇಒ ಸಿ.ಟಿ. ನಾಯ್ಕ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ನಿರ್ದೇಶನದಂತೆ ಹೆಗಡೆ ಗ್ರಾಮಕ್ಕೆ 23 ಲಕ್ಷ ರೂ. ವೆಚ್ಚದ ಘನ ಮತ್ತು ದ್ರವ ಸಂಪನ್ಮೂಲ ಘಟಕವನ್ನು ಪ್ರಾರಂಭಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next