Advertisement

ಘನ-ದ್ರವ ತ್ಯಾಜ್ಯ ನಿರ್ವಹಣೆ ಜಾಗೃತಿ

04:19 PM Jan 22, 2020 | Suhan S |

ಗದಗ: ನಗರದ ರೈತ ಭವನದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬಾಗಲಕೋಟೆ ಜಿ.ಪಂ. ಸಂಯುಕ್ತ ಆಶ್ರಯದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕುರಿತು ಕಾರ್ಯಾಗಾರ ಜರುಗಿತು.

Advertisement

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ವಿತ್ತಧಿಕಾರಿ ಜೆ.ಸಿ. ಪ್ರಶಾಂತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ನೈರ್ಮಲ್ಯದ ನಿರ್ವಹಣೆ ಸಾಧಿಸುವುದು ಅತೀ ಅವಶ್ಯಕವಾಗಿದ್ದು, ಗ್ರಾಮ ಪಂಚಾಯತಿಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ತಮ್ಮದೇಯಾದಂತಹ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು. ಸ್ವತ್ಛ ಭಾರತ ಅಭಿಯಾನದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಗ್ರಾಮ ಪಂಚಾಯತಗಳಿಗೆ ಅನುದಾನ ಸಾಕಷ್ಟು ಬರುತ್ತಿದ್ದು, ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ, ಪರಿಕಲ್ಪನೆ, ಸ್ವತ್ಛತೆ, ನೈರ್ಮಲ್ಯನಡೆದು ಬಂದ ಹಾದಿ, ಪ್ರಕೃತಿ ಜೀವನದ ಮೇಲೆ ತ್ಯಾಜ್ಯದ ಪರಿಣಾಮಗಳು, ಘನ ದ್ರವ ಸಂಪನ್ಮೂಲದ ನಿರ್ವಹಣೆ ವಿಧಗಳು, ಪ್ರಕ್ರಿಯೆಗಳು (ಹಸಿ –ಒಣ ಕಸ) ಸುಸ್ಥಿರತೆ, ಸ್ಥಳೀಯ ಆಡಳಿತದ ಪಾತ್ರ ಹಾಗೂನಾಗರಿಕರ ಜವಾಬ್ದಾರಿ, ಸ್ವತ್ಛತಾ ಅಧಿನಿಯಮ-2016 ಘನ ತ್ಯಾಜ್ಯ ನಿರ್ವಹಣೆ, ಸವಾಲುಗಳು-ಪರಿಹಾರ ಅನುದಾನ ಲಭ್ಯತೆ -ಮಾರುಕಟ್ಟೆ ಲಭ್ಯತೆ, ಆರ್ಥಿಕ ನಿರ್ವಹಣೆ -ಆದಾಯ ಸೃಜನೆ, ಇನ್ಸಿನರೇಟರ್‌ – ಬಯೋ ಕಾಂಪೋಸ್ಟ್‌, ಸ್ವಚ್ಛಾಗ್ರಹಿ –ಸ್ವತ್ಛತಾ ಕಾರ್ಯಕರ್ತರು, ಕಾಂಪೋಸ್ಟ್‌ ಪಿಟ್‌ಗಳ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಹಿರಿಯ ಪರಿಸರ ಅಧಿಕಾರಿ ಕುಮಾರಸ್ವಾಮಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಹೇಶ ಕೆ., ಡಾ| ಗುಳ್ಳಪ್ಪ ಡಿ., ಡಾ| ಅಬ್ಬುಲ್‌ ಅಜೀಜ್‌ ಮುಲ್ಲಾ ಮಾತನಾಡಿದರು. ಉಮೇಶ ಬಾರಕೇರ, ಮುತ್ತುರಾಜ್‌, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next