ಕಲಾದಗಿ: ಜಿಲ್ಲೆಯಲ್ಲಿ ದೊಡ್ಡ ಗ್ರಾಮ ಪಂಚಾಯತ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲಾದಗಿ ಗ್ರಾಮ ಪಂಚಾಯತ ಎದುರಿಸುತ್ತಿದ್ದ ತಾಜ್ಯ ನಿರ್ವಹಣೆ ವಿಲೇವಾರಿ ಸಮಸ್ಯೆ ನಿರ್ವಹಣೆಗೆ ಘನ ತಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಘಟಕ ಮಂಜೂರಾಗಿದೆ.
ಕಲಾದಗಿ ಗ್ರಾಮ ದೊಡ್ಡದಾಗಿರುವುದರಿಂದ ಕಸ ವಿಲೇವಾರಿ ತಾಜ್ಯ ನಿರ್ವಹಣೆ ಸಮಸ್ಯೆಯಾಗಿತ್ತು. ಈಗ ಘನ ತಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲು 20 ಲಕ್ಷ ರೂ ಮೊತ್ತದಲ್ಲಿ ಗ್ರಾಮದಲ್ಲಿ ಘಟಕ ನಿರ್ಮಾಣವಾಗಲಿದೆ. ಗ್ರಾಮದಲ್ಲಿ 12 ವಾರ್ಡಗಳು, 35
ಸದಸ್ಯರು ಇದ್ದು, 2011 ಜನಗಣತಿ ಪ್ರಕಾರ 13774 ಜನ ಸಂಖ್ಯೆ, 4784 ಕುಟುಂಬಗಳ ಹೊಂದಿದೆ, ಸದ್ಯ ಇದು ಸುಮಾರು 6000 ಕುಟುಂಬಗಳು, 23ಸಾವಿರ ಜನಸಂಖ್ಯೆಯನ್ನು ಹೊಂದಿದೆ. ರಾಷ್ಟ್ರೀಯ ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಈ ಘನ, ದ್ರವ ತಾಜ್ಯನಿರ್ವಹಣೆ ಘಟಕ ನಿರ್ಮಾಣ ಮಂಜೂರಾತಿದೊರೆತಿದ್ದು ಶೀಘ್ರದಲ್ಲೇ ಘಟಕ ನಿರ್ಮಾಣ ಕಾರ್ಯ ಆರಂಭವಾಗಲಿದೆ, ಈಗಾಗಲೇಘಟಕ ನಿರ್ಮಾಣದ ಭೂಮಿಪೂಜೆ ನೆರವೇರಿಸಲಾಗಿದೆ.
ಕಳೆದ ಎರಡು ವರ್ಷದಿಂದ ಗ್ರಾಮದಲ್ಲಿ ಕಸ ವಿಲೇವಾರಿ ವಾಹನದಿಂದ ಗ್ರಾಮದಲ್ಲಿನ ಮನೆ ಮನೆಗಳ, ಅಂಗಡಿ ಮುಂಗಟ್ಟುಗಳ ಕಸವನ್ನು ಸಂಗ್ರಹಿಸಿ ಗ್ರಾಮದಿಂದ ದೂರವಿರುವ ಪ್ರದೇಶದಲ್ಲಿ ಹಾಕಿ ತ್ಯಾಜ್ಯ ನಾಶ ಮಾಡಲಾಗುತ್ತಿತ್ತು, ಘಟಕ ನಿರ್ಮಾಣದಿಂದಇನ್ನೂ ಸುಲಭ ಸರಳವಾಗಲಿದೆ, ಇದರಿಂದ ಕಲಾದಗಿ ಗ್ರಾಮ ಈ ಮೊದಲಿಗಿಂತಲೂ ಸ್ವಚ್ಚ ಸುಂದರವಾಗಲಿದೆ ಎನ್ನುವ ವಿಶ್ವಾಸ ಜನರಲ್ಲಿ ಮೂಡಿದೆ.
ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಕಲಾದಗಿ ಗ್ರಾಮಕ್ಕೆ ಘನ, ದ್ರವ ತ್ಯಾಜ್ಯ ನಿರ್ವಹಣೆ ಘಟಕ ಮಂಜೂರಾಗಿದೆ. ಶೀಘ್ರದಲ್ಲೇ ಘಟಕ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
–ದ್ರಾಕ್ಷಾಯಣಿ ಹಿರೇಮಠ, ಪಿಡಿಒ ಕಲಾದಗಿ