Advertisement
ಸೋಲನ್ನೇ ಮೆಟ್ಟಿಲಾಗಿಸಿಕೊಳ್ಳಿಸೋಲು ಎಂದಿಗೂ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಬಾರದು. ಬದಲಾಗಿ ಗೆಲುವಿನ ಛಲ ಮೂಡಿಸುವಂತಾಗಬೇಕು. ಯಾವುದಾದರೂ ಕೆಲಸಕ್ಕೆ ಹೊರಟು ಅದರಲ್ಲಿ ವಿಫಲರಾದಿರಿ ಎಂದಿಟ್ಟುಕೊಳ್ಳಿ. ಅಷ್ಟಕ್ಕೇ ಸುಮ್ಮನಾಗಬೇಡಿ. ಮುಂದಿನ ಬಾರಿ ಮತ್ತೂಮ್ಮೆ ಪ್ರಯತ್ನಿಸಿ. ಹಿಂದಿನ ಬಾರಿ ಯಾವ ಕಾರಣಕ್ಕೆ ನಿಮ್ಮ ಯತ್ನ ವಿಫಲವಾಯಿತು. ಎಡವಲು ಕಾರಣವೇನು ಎನ್ನುವುದರ ಕುರಿತು ಚಿಂತಿಸಿ. ಆ ತಪ್ಪು ಮರುಕಳಿಸದಂತೆ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಲೆಕ್ಕ ಹಾಕಿ. ಅನಂತರ ಹೊರಡಿ. ಸಂಶಯ ಬೇಡ. ಆಗ ಗೆಲುವು ನಿಮ್ಮದೇ.
ಶಾಲಾ ದಿನಗಳನ್ನು ನೆನಪು ಮಾಡಿಕೊಳ್ಳಿ. ನಮಗೆ ಯಾವುದಾದರೂ ಕಷ್ಟ ಅಥವಾ ಇಷ್ಟ ಇಲ್ಲದ ವಿಷಯ ಇದ್ದರೆ ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಆದರೆ ಪರೀಕ್ಷೆ ಸಮಯದಲ್ಲಿ ಮಾತ್ರ ಜಾಗೃತರಾಗುತ್ತೇವೆ. ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಬಂದು ಇದರಲ್ಲಿ ಫೇಲ್ ಆದರೆ ಎನ್ನುವ ಭಯದಲ್ಲೇ ಅಧ್ಯಯನ ನಡೆಸುತ್ತೇವೆ. ಹಗಲು-ರಾತ್ರಿ ಕಷ್ಟ ಪಟ್ಟು ಶ್ರದ್ಧೆಯಿಂದ ಓದಿ ತೇರ್ಗಡೆಯಾಗಿ ನಿಟ್ಟುಸಿರು ಬಿಡುತ್ತೇವೆ. ಇಲ್ಲಿ ನಮ್ಮ ಗೆಲುವಿಗೆ ಪ್ರೇರಣೆ ಯಾಗಿದ್ದು ಸೋತರೆ ಮುಂದೇನು ಎನ್ನುವ ಭಯ. ಒಂದು ಸೋಲು ಬಂದಾಗ ತಲೆ ಮೇಲೆ ಕೈ ಹೊತ್ತು ಕೂರುವ ಬದಲು ಮರಳಿ ಯತ್ನ ಮಾಡಬೇಕು. ಮನೆಯ ಮೂಲೆಯಲ್ಲಿನ ಜೇಡರ ಬಲೆಯನ್ನು ನಾವು ಕಿತ್ತರೂ ಮತ್ತೆ ಮತ್ತೆ ನೇಯುವಂತೆ… ಶ್ರಮ ನಿರರ್ಥಕವಲ್ಲ
ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ? ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ?
Related Articles
Advertisement