Advertisement

ಯೋಧರು ಪ್ರಾಣ ತೆರಲು ಕಾರಣ ಕಾಂಗ್ರೆಸ್ ಪಕ್ಷದ 370ನೇ ವಿಧಿ ಮೇಲಿನ ಪ್ರೀತಿ: ಪ್ರಧಾನಿ ಮೋದಿ

10:28 AM Oct 16, 2019 | Nagendra Trasi |

ಹರ್ಯಾಣ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಹಾಗೂ ತ್ರಿವಳಿ ತಲಾಖ್ ರದ್ದುಪಡಿಸಿರುವ ಕೇಂದ್ರದ ನಿರ್ಧಾರವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಈ ನಿರ್ಧಾರದಿಂದ ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕೀಯಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.

Advertisement

ಹರ್ಯಾಣದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿಯನ್ನು ಕಾಂಗ್ರೆಸ್ ಪ್ರೀತಿಸುತ್ತಿದೆಯೇ ಎಂಬುದನ್ನು ವಿವರಿಸಬೇಕು. ಕಾಂಗ್ರೆಸ್ ಪಕ್ಷ 370ನೇ ವಿಧಿಯನ್ನು ಅಪ್ಪಿಕೊಂಡಿದ್ದರಿಂದಲೇ ನಮ್ಮ ಸೈನಿಕರು ಹುತಾತ್ಮರಾಗುವಂತಾಗಿದೆ ಎಂದು ಕಿಡಿಕಾರಿದರು.

ಹರ್ಯಾಣದ ಧೈರ್ಯಶಾಲಿ ಯೋಧರು ಜಮ್ಮು-ಕಾಶ್ಮೀರದ ಅಮಾಯಕ ಜನರ ರಕ್ಷಣೆ ಮಾಡುತ್ತಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಸಿಕ್ಕು ಹುತಾತ್ಮರಾದ ಯೋಧರ ಪಾರ್ಥೀವ ಶರೀರ ತ್ರಿವರ್ಣ ಧ್ವಜ ಸುತ್ತಿದ ಪೆಟ್ಟಿಗೆಯೊಂದಿಗೆ ತಾಯ್ನಾಡಿಗೆ ಬರುತ್ತದೆ. ನಿಮ್ಮ 370ನೇ ವಿಧಿಯ ಪ್ರೀತಿಯಿಂದಾಗಿ ಅದೆಷ್ಟು ಮಂದಿ ತಾಯಿಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೇಳಿಕೊಳ್ಳಿ ಎಂದು ಮೋದಿ ಹೇಳಿದರು.

ನಿಮ್ಮ (ಕಾಂಗ್ರೆಸ್) 370ನೇ ವಿಧಿಯ ಮೋಹದಿಂದಾಗಿ ಅದೆಷ್ಟು ಮಂದಿ ವಿಧವೆಯರಾಗಿದ್ದಾರೆ, ಅದೆಷ್ಟು ಮಕ್ಕಳು ಅನಾಥರಾಗಿದ್ದಾರೆ ಗೊತ್ತಾ ಎಂದು ಪ್ರಶ್ನಿಸಿದರು.

ಅಕ್ಟೋಬರ್ 21ರಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಲ್ಲಾಬ್ ಗಢ್ ನಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ನಾಯಕತ್ವವನ್ನೇ ಕಳೆದುಕೊಂಡಿದೆ. ಹರ್ಯಾಣದಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ನಂತಹ ಬಲಿಷ್ಠ ನಾಯಕನನ್ನು ಹೊಂದಿದೆ. ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಈ ಸಂದರ್ಭದಲ್ಲಿ ಮೋದಿ ಮನವಿ ಮಾಡಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next