Advertisement

Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ

09:00 PM Jul 26, 2024 | Team Udayavani |

ಕಮಲನಗರ(ಬೀದರ್) : ಸಿಕ್ಕಿಂ ಗಡಿ ಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ತಾಲೂಕಿನ ಕೋರ‍್ಯಾಳ್ ಗ್ರಾಮದ ಯೋಧ ಅನಿಲಕುಮಾರ ಉಮಾಕಾಂತರಾವ ನವಾಡೆ (40) ಶುಕ್ರವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ.

Advertisement

ಸಿಕ್ಕಿಂನ ದಟ್ಟನೆಯ ಹಿಮಪ್ರದೇಶದ ವಾತಾವರಣದಲ್ಲಿ ಸೇವೆಯಲ್ಲಿ ಅನಿಲಕುಮಾರ ಅವರ ಆರೋಗ್ಯದಲ್ಲಿ ಏರುಪೇರು ಆಗಿ ಮೃತಪಟ್ಟಿದ್ದಾರೆ. ನವಾಡೆ 2004 ರಲ್ಲಿ ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಸದ್ಯ ಹವಾಲ್ದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸೇರಿ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ ಅಮಿತಕುಮಾರ ಕುಲಕರ್ಣಿ ಕೋರ‍್ಯಾಳ್ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮೃತ ಯೋಧ ಅನೀಲಕುಮಾರ ಅವರ ಪಾರ್ಥಿವ ಶರೀರ ಸಿಕ್ಕಿಂನಿಂದ ಕೋರ‍್ಯಾಳ್ ಸ್ವಗ್ರಾಮಕ್ಕೆ ಭಾನುವಾರ ಸಂಜೆ ಬರುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next