ಸಂಜ್ವಾನ್: ಜಮ್ಮು ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ಸಿಬ್ಬಂದಿ ವಸತಿ ನಿಲಯದ ಮೇಲೆ ಜೈಶ್ ಎ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಜ್ಯೂನಿಯರ್ ಕಮಿಷನ್ ಆಫೀಸರ್ (ಜೆಸಿಒ) ಹುತಾತ್ಮರಾಗಿದ್ದಾರೆ. ಇತರ 9 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಸೇನಾ ಮೇಜರ್ ಹಾಗೂ ಸೇನಾ ಸಿಬ್ಬಂದಿ ಪುತ್ರಿಯೂ ಸೇರಿದ್ದಾರೆ.
ಶನಿವಾರ ರಾತ್ರಿಯವರೆಗೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ ಯೋಧರು, ವಸತಿ ನಿಲಯದೊಳಗೆ ಅವಿತಿದ್ದ ಮೂವರು ಜೈಶ್ ಉಗ್ರರನ್ನೂ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಶನಿವಾರ ಬೆಳಗಿನ ಜಾವ 4.55ರ ಸುಮಾರಿಗೆ ಭದ್ರತಾ ಸಿಬ್ಬಂದಿಗೆ ಅನುಮಾ ನಾಸ್ಪದ ಚಟುವಟಿಕೆ ಕಂಡುಬಂದಿದ್ದು, ಆಗ ಭದ್ರತಾ ಪಡೆಯ ಬಂಕರ್ ಮೇಲೆ ದಾಳಿ ನಡೆದಿದೆ. ಕೂಡ ಸೇನೆಯ ವಿಶೇಷ ಪಡೆ ಮತ್ತು ವಿಶೇಷ ಕಾರ್ಯಾಚರಣೆ ತಂಡ
ಆ ಪ್ರದೇಶವನ್ನು ಸುತ್ತುವರಿದಿದೆ. ಈ ಭಾಗದಿಂದ 5 ಕಿ.ಮೀ ಸುತ್ತಲೂ ಇರುವ ಶಾಲೆಗಳನ್ನು ಮು°ನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿತ್ತು. ಜಮ್ಮು ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ. ಅಫjಲ್ ಗುರು ಗಲ್ಲು ಶಿಕ್ಷೆ ವಿಧಿಸಿ ಫೆ.9ಕ್ಕೆ 5 ವರ್ಷವಾಗಲಿರುವು ದರಿಂದ ಪ್ರತೀಕಾರಕ್ಕಾಗಿ ಉಗ್ರರು ಇನ್ನಷ್ಟು ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.ಹೆದ್ದಾರಿಯಲ್ಲಿ ಸಹಜ ಸಂಚಾರ: ಜಮ್ಮು- ಲಖನ್‌ಪುರ ಬೈಪಾಸ್‌ಗೆ ತಾಗಿಕೊಂಡು ಇರುವ ಸೇನಾ ವಸತಿ ನಿಲಯದಲ್ಲಿ ಉಗ್ರ ಕಾರ್ಯಾಚರಣೆ ನಡೆಯುತ್ತಿದ್ದರೂ, ಹೆದ್ದಾರಿ ಯಲ್ಲಿ ವಾಹನ ಸಂಚಾರ ಸಹಜವಾಗಿಯೇ ನಡೆದಿತ್ತು. ಹೆದ್ದಾರಿಯ ಅಂಚಿನಲ್ಲೇ ಸೇನಾ ಪಡೆಗಳ ಬುಲೆಟ್‌ಪ್ರೂಫ್ ವಾಹನಗಳು ನಿಂತು ಕಾರ್ಯಾಚರಣೆ ನಡೆಸುತ್ತಿದ್ದವು.
ಪಾಕ್ ಪರ ಘೋಷಣೆ ಕೂಗಿದ ಎನ್‌ಸಿ ಶಾಸಕ
ಜಮ್ಮು ನಗರದ ಹೊರಭಾಗದಲ್ಲಿ ಪಾಕ್ ಮೂಲದ ಜೈಶ್ ಉಗ್ರರು ದಾಳಿ ನಡೆಸುತ್ತಿ ದ್ದರೆ, ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಶಾಸಕರೊಬ್ಬರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಸದನ ಆರಂಭವಾಗುತ್ತಿದ್ದಂತೆಯೇ ಉಗ್ರ ಕೃತ್ಯ ಖಂಡಿಸಿ ನಿಲುವಳಿ ಗೊತ್ತುವಳಿ ಮಾಡಲಾಯಿತು. ಈ ವೇಳೆ ಸ್ಪೀಕರ್ ಮಾತಿಗೆ ಬಿಜೆಪಿ ಆಕ್ಷೇಪಿಸಿ ಪಾಕ್ ವಿರೋಧಿ ಘೋಷಣೆ ಕೂಗಿತು. ಈ ವೇಳೆ ಸಿಟ್ಟಿಗೆದ್ದ ಶಾಸಕ ಮೊಹಮ್ಮದ್ ಅಕºರ್ ಲೋನ್ ಪಾಕ್ ಪರ ಘೋಷಣೆ ಕೂಗಿದ್ದಾರೆ. ಶಾಸಕ ಲೋನ್ ನಿಲುವಿಗೆ ಪಕ್ಷ ಬದ್ಧವಾಗಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಹೇಳಿಕೊಂಡಿದೆ.