Advertisement
ಮೇ 29ರಂದು ಈ ಘಟನೆ ನಡೆದಿದ್ದು ತಡ ವಾಗಿ ಬೆಳಕಿಗೆ ಬಂದಿದೆ. ಜೂ. 6ರಂದು ಪೋಷಕರಿಗೆ ಕರೆ ಮಾಡಿರುವ ಮಹೇಶ್ ಘಟನೆಯ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಮೇ 29ರಂದು ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಮನೆಯೊಂದರಲ್ಲಿ ನಾಲ್ವರು ಉಗ್ರರು ಆಶ್ರಯ ಪಡೆದಿರುವ ಮಾಹಿತಿ ಕಲೆ ಹಾಕಿದ ರಾಷ್ಟ್ರೀಯ ರೈಫಲ್ಸ್‌ನ 60 ಮಂದಿ ಯೋಧರು ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಈ ವೇಳೆ ಉಗ್ರರು ಸಿಡಿಸಿದ ಗುಂಡು ಮಹೇಶ್ ಅವರ ಮುಖಕ್ಕೆ ಬಡಿಯಿತು. ಇದೇ ವೇಳೆ ಮಹೇಶ್ ಜತೆಗಿದ್ದ ಯೋಧರು ಉಗ್ರರು ಅವಿತಿದ್ದ ಮನೆಯನ್ನೇ ಸ್ಫೋಟಿಸಿ ನಾಲ್ವರು ಉಗ್ರರನ್ನೂ ಕೊಂದು ಹಾಕಿದ್ದಾರೆ.