Advertisement

ಮನೆಗೊಬ್ಬರು ದೇಶ ಕಾಯ್ತಾರೆ 

06:00 AM Aug 15, 2018 | |

ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಈ ಚಿಕ್ಕ ಗ್ರಾಮದಲ್ಲಿ ಮನೆಗೊಬ್ಬ ಸೈನಿಕರಿದ್ದಾರೆ. ಸದ್ಯ 260ಕ್ಕೂ ಹೆಚ್ಚು ಯೋಧರು ಭಾರತದ ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದು, ಈವರೆಗೆ ಸಾವಿರಕ್ಕೂ ಹೆಚ್ಚು ಯೋಧರು ಸೇವೆ ಸಲ್ಲಿಸಿರುವುದೇ ಈ ಹಳ್ಳಿಯ ಹಿರಿಮೆ. ಕರ್ನಾಟಕದಿಂದ ಕೇವಲ 10 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸೈನಿಕ ಟಾಕಳಿ ಎಂಬ ಇಡೀ ಹಳ್ಳಿ ಯೋಧರ ಕುಟುಂಬದಿಂದಲೇ ತುಂಬಿದೆ.

Advertisement

ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕಾಗಿ ಈ ಹಳ್ಳಿಯ ಕೊಡುಗೆ ಅಪಾರ. ಪ್ರತಿ ವರ್ಷ ಹತ್ತಾರು ಯುವಕರು ಭಾರತೀಯ ಸೇನೆಯ ಸೇವೆಗೆ ಹೊರಡುತ್ತಾರೆ. ತಂದೆ-ತಾಯಿ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವುದರಲ್ಲಿ ಉತ್ಸುಕರಾಗಿರುತ್ತಾರೆ. 427 ಯೋಧರು ಮಾಜಿ ಸೈನಿಕರಾಗಿ ಪಿಂಚಣಿ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 1009 ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೈನ್ಯ ಸೇರಲು ಉತ್ಸುಕ: ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಈ ಊರು ಮುಂಚೆಯಿಂದಲೂ ಟಾಕಳಿ ಎಂತಲೇ ಇತ್ತು. ಸೈನಿಕರೇ ಹೆಚ್ಚಾಗಿರುವುದರಿಂದ ಇದಕ್ಕೆ ಸೈನಿಕ ಟಾಕಳಿ ಎನ್ನುತ್ತಾರೆ. ಪ್ರತಿ ಮನೆಯಲ್ಲಿ ಒಬ್ಬರೋ, ಇಬ್ಬರೋ ಸೈನಿಕರು ಇರುವುದು ಗ್ರಾಮದ ವಿಶೇಷ. 265 ಯೋಧರು ವಾಯುಸೇನೆ, ಭೂಸೇನೆ ಹಾಗೂ ನೌಕಾಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನಾಭರ್ತಿಯ ಅಧಿಸೂಚನೆ ಬಂದರೆ
ಸಾಕು ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಭರ್ತಿಯಾಗುತ್ತವೆ. ತಿಂಗಳಿಗೆ ಮೂರ್‍ನಾಲ್ಕು ಜನ ಭರ್ತಿಯಾಗುವುದಂತೂ ನಿಶ್ಚಿತ. 

18 ಯೋಧರು ಹುತಾತ್ಮ: ಪ್ರಥಮ ಮಹಾಯುದಟಛಿದಿಂದಲೂ ಇಲ್ಲಿಯವರು ಸೇನೆಯಲ್ಲಿರುವ ಇತಿಹಾಸವಿದೆ. ಅದರಲ್ಲಿ 18 ಜನ ಯೋಧರು ಹುತಾತ್ಮರಾಗಿದ್ದಾರೆ. 1970ರಲ್ಲಿ ಸೈನ್ಯ ಸೇರಿದ್ದ ರಾವಸಾಹೇಬ ಪಾಟೀಲ 1971ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಗ್ರಾಮದಲ್ಲಿ ಅಮರ್‌ ಜವಾನ್‌ ಎಂಬ ಸ್ಮಾರಕ ನಿರ್ಮಿಸಲಾಗಿದೆ. ಕಾರ್ಗಿಲ್‌ ವಿಜಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  ಪ್ರತಿ ವರ್ಷ 4-5 ಯೋಧರಾದರೂ ನಿವೃತ್ತರಾಗುತ್ತಿರುತ್ತಾರೆ.  

ಮೊದಲಿನಿಂದಲೂ ಈ ಹಳ್ಳಿ ಕುಸ್ತಿಗೆ ಹೆಸರುವಾಸಿ. ರಾಜ ಮನೆತನದವರು ಆಗ ಒತ್ತಾಯಪೂರ್ವಕವಾಗಿ ಇಲ್ಲಿಯ ಯುವಕರನ್ನು ಸೈನ್ಯಕ್ಕೆ ಕಳುಹಿಸುತ್ತಿದ್ದರು. ರಷ್ಯಾ, ಇರಾಕ್‌, ಫ್ರಾನ್ಸ್‌, ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳಲ್ಲೂ ಇಲ್ಲಿನ ಯೋಧರು ಸೇವೆ ಸಲ್ಲಿಸಿದ್ದಾರೆ.
ಅಟ್ಲಾಂಟಿಕ್‌ ಪರ್ವತದ ಮೇಲೆ 180 ಕಿಮೀ ವೇಗವಾಗಿ ಗಾಳಿ ಬೀಸುತ್ತದೆ. ಅಲ್ಲಿ ಅಮೆರಿಕ ಹಾಗೂ ರಷ್ಯಾದ ಸೈನಿಕರು ಒಂದೂವರೆ ವರ್ಷಗಳ ಕಾಲ ಶ್ರಮವಹಿಸಿ ಅಲ್ಲಿ ತಮ್ಮ ಪ್ರಯೋಗ ಶಾಲೆ ಕಟ್ಟಡ ನಿರ್ಮಿಸಿದ್ದರು. ಆದರೆ ಸೈನಿಕ ಟಾಕಳಿಯ ಅಜೀತ ಪಾಟೀಲ ಎಂಬ ಯೋಧ ತುಕಡಿಯ ನೇತೃತ್ವ ವಹಿಸಿ ಕೇವಲ ಒಂದೂವರೆ ತಿಂಗಳಲ್ಲಿ ಈ ಕಟ್ಟಡ ನಿರ್ಮಿಸಿ ಶೌರ್ಯ ಮೆರೆದಿದ್ದರು. 1984ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಅಜೀತ ಪಾಟೀಲರಿಗೆ ಪುರಸ್ಕಾರ ನೀಡಿ ಗೌರವಿಸಿದ್ದರು ಎಂದು ಗ್ರಾಮದ ಹಿರಿಯ ಮಧುಕರ ಪಾಟೀಲ ನೆನಪಿಸಿಕೊಳ್ಳುತ್ತಾರೆ. ಒಂದೇ ಮನೆಯ
ಐವರು ಯೋಧರು: ಐದನೇ ತಲೆಮಾರಿನವರೆಗೂ ಸೈನಿಕರೇ ಇರುವ ಮನೆಯೂ ಇಲ್ಲಿ ಉಂಟು. ಭರತ ಬಾಪುಸಾಹೇಬ ಜಾಧವ ಎಂಬವರ ಕುಟುಂಬದಲ್ಲಿ ಅಜ್ಜ, ಮುತ್ತಜ್ಜ, ಮಕ್ಕಳು, ಮೊಮ್ಮಕ್ಕಳು ಸೇರಿ ಐದನೇ ತಲೆಮಾರಿನ ಸೈನಿಕರು ಇರುವುದು ವಿಶೇಷ. ಮನೆಗಿಬ್ಬರಂತೆ ಯೋಧರಿರುವ ಮನೆಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.

Advertisement

ಯುದ್ಧ ಭೂಮಿಗಾಗಿ ಪ್ರಮಾಣ: ಸೈನಿಕ ಟಾಕಳಿ ಗ್ರಾಮದ ಯುವಕನ ಮದುವೆಗೆ ಮುನ್ನ ಯುವಕರು ಸೇರಿ ತಲವಾರ ಹಾಗೂ ಕಟಿಯಾರ ಕೈಯಲ್ಲಿ ಕೊಟ್ಟು ಪ್ರಮಾಣ ಮಾಡಿಸುತ್ತಾರೆ. ಹೆಂಡತಿಯನ್ನು ಬಿಟ್ಟೇನು ಹೊರತು ತಲವಾರ ಬಿಡುವುದಿಲ್ಲ. ಅಗತ್ಯ ಬಿದ್ದರೆ ಯುದ್ಧ ಭೂಮಿಗೆ ನಾನು ಹೋಗಲು ಸಿದ್ಧ ಎಂದು ಮದುಮಗನಿಂದ ಪ್ರಮಾಣ ಮಾಡಿಸುವ ರೂಢಿ ಇನ್ನೂ ಇದೆ. 

 ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next