ಮಹಾಲಿಂಗಪುರ: ಕಾಶ್ಮೀರದ ಪೂಂಛ್ ಸೆಕ್ಟರ್ ನಲ್ಲಿ ಡಿ.24ರ ಮಂಗಳವಾರ ಸೇನಾ ವಾಹನ ಕಮರಿಗೆ ಬಿದ್ದು ಮೃತಪಟ್ಟ ಐವರು ಯೋಧರಲ್ಲಿ ಮಹಾಲಿಂಗಪುರದ ಕೆಂಗೇರಿಮಡ್ಡಿಯ(ಸ್ಲಂ) ನಿವಾಸಿ ಮಹೇಶ ನಾಗಪ್ಪ ಮರೆಗೊಂಡ(25) ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಮಹೇಶ ನಾಗಪ್ಪ ಮರೆಗೊಂಡ ಅವರು ಬೆಳಗಾವಿಯ ಮರಾಠಾ ಲೈಟ್ ಇನ್ ಪೆಂಟರಿ ರೆಜ್ ಮೆಂಟ್ ಕೇಂದ್ರದಲ್ಲಿ ತರಬೇತಿ ಪಡೆದು ಕಳೆದ 6 ವರ್ಷಗಳ ಹಿಂದೆ ಸೈನಿಕನಾಗಿ ದೇಶ ಸೇವೆಗೆ ತೆರಳಿದ್ದರು.
12 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಹೇಶ ಅವರನ್ನು ತಾಯಿ ಶಾರದಾ ಅವರು ಕೂಲಿ ಕೆಲಸ ಮಾಡಿ ಕಡುಬಡತನದ ನಡುವೆಯೂ ಶಿಕ್ಷಣ ನೀಡಿ ಸೈನ್ಯಕ್ಕೆ ಕಳಿಸಿದ್ದರು.
ಮೂರು ವರ್ಷಗಳ ಹಿಂದೆ ಮಹೇಶ ಅವರು ಲಕ್ಷ್ಮೀ ಎಂಬವರೊಂದಿಗೆ ವಿವಾಹವಾಗಿದ್ದಾರೆ. ಇನ್ನು ಮಕ್ಕಳಿಲ್ಲ.
ಹುತ್ಮಾತ್ಮ ಯೋಧ ಮಹೇಶ ಅವರು ತಾಯಿ ಶಾರದಾ, ತಂಗಿ ವಿದ್ಯಾಶ್ರೀ, ತಮ್ಮ ಸಂತೋಷ, ಪತ್ನಿ ಲಕ್ಷ್ಮೀ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಹುತ್ಮಾತ್ಮರಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಡಿ.26ರ ಗುರುವಾರ ಮೃತ ಯೋಧರ ಪಾರ್ಥಿವ ಶರೀರ ಪಟ್ಟಣಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.