Advertisement
ಜಾಲಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಸೋಲಾರ್ ಅಳವಡಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಿದೆ. ಇನ್ನು ಮುಂದೆ ಸೋಲಾರ್ ದೀಪಗಳು ಗ್ರಾಮಗಳಲ್ಲಿ ಬೆಳಕನ್ನು ಚೆಲ್ಲಲ್ಲಿದೆ.
Related Articles
Advertisement
ಗ್ರಾಮ ಪಂಚಾಯಿತಿಯ ಎರಡು ಗ್ರಾಮಗಳಲ್ಲಿ ಯಶಸ್ವಿಯಾದರೆ, ಮುಂದಿನ ಹಂತದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ವಿದ್ಯುತ್ ದೀಪ ಮುಕ್ತ: ಸೋಲಾರ್ ದೀಪಗಳ ಗ್ರಾಮಗಳನ್ನಾಗಿಸಲು ಗ್ರಾಮ ಪಂಚಾಯಿತಿ ಮುಂದಾಗಿದ್ದು, ಗ್ರಾಮಗಳ ರಸ್ತೆಯುದ್ದಕ್ಕೂ ಇದೀಗ ಸೋಲಾರ್ ಬೆಳಕು ಚೆಲ್ಲಲಿದೆ. ವಿದ್ಯುತ್ ಶುಲ್ಕ ಸಾಕಷ್ಟು ಕಟ್ಟುವುದು ಗ್ರಾಪಂಗೆ ಹೊರೆಯಾಗುತ್ತಿರು ವುದನ್ನು ತಪ್ಪಿಸಲು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಡಿಸಿಯಿಂದ ಎಸಿ ಕನ್ವರ್ಟರ್ ಗಳನ್ನಾಗಿ ಗ್ರಾಮದುದ್ದಕ್ಕೂ ದೀಪಗಳನ್ನು ಅಳವಡಿಸಲು ಅಗತ್ಯ ಪರಿಕರಗಳನ್ನು ಇಟ್ಟುಕೊಳ್ಳಲಾಗಿದೆ.
ಪ್ರಾಯೋಗಿಕ ಜಾರಿ: ಬೀದಿ ದೀಪ ನಿರ್ವಹಣೆಯಲ್ಲಿ ಗ್ರಾಪಂಗೆ ವಿದ್ಯುತ್ ಶುಲ್ಕ ಬಾಕಿ ಹೆಚ್ಚು ಇರುವುದರಿಂದ ಪರ್ಯಾಯವಾಗಿ ವಿದ್ಯುತ್ ಸಂಪರ್ಕರಹಿತ ಸೌರಶಕ್ತಿ ಬಳಸಿಕೊಂಡು ಸೌರಬೆಳಕು ಚೆಲ್ಲುವ ಜಾಲಿಗೆ ಗ್ರಾಪಂಯ ಎರಡು ಗ್ರಾಮ ಗಳಲ್ಲಿ ಪ್ರಾಯೋಗಿಕವಾಗಿ ಖಾಸಗಿ ಕಂಪನಿಯ ನಿರ್ವಹಣೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ, ಸೋಲಾರ್ ದೀಪ ಅಳವಡಿಸಲು ಮುಂದಾಗಿದೆ.
ನಿರ್ವಹಣೆ ಹೇಗೆ?: ಸೌರಶಕ್ತಿ ದೀಪಗಳ ನಿರ್ವಹಣೆಯನ್ನು ಖಾಸಗಿ ಕಂಪನಿಯೇ 5ವರ್ಷಗಳು ಜವಾಬ್ದಾರಿಯನ್ನು ತೆಗೆದುಕೊಂಡು ಅವಧಿ ಮುಗಿದ ನಂತರ ಗ್ರಾಪಂ ನಿರ್ವಹಣೆಗೆ ಬಿಟ್ಟುಕೊಡಲಾಗುತ್ತದೆ. 200ಎಎಚ್‌ನ 15ಬ್ಯಾಟರಿಗಳು, ಸೋಲಾರ್ ಪ್ಯಾನಲ್‌ಗೆ ಅವಶ್ಯಕತೆ ಇರುವಷ್ಟು ಕಿಲೋವ್ಯಾಟ್ ನಷ್ಟು ಬ್ಯಾಟರಿಗಳನ್ನು ಅಳವಡಿಸಲಾಗುತ್ತದೆ. 30ವ್ಯಾಟ್‌ನ ಎಲ್‌ಇಡಿ 50 ಬಲ್ಪ್ ಹೊಂದಿರುತ್ತದೆ. ಬ್ಯಾಟರಿ ಆಯುಷ್ 7 ವರ್ಷ ಮತ್ತು ಪ್ಯಾನಲ್ ಆಯುಷ್ 25ವರ್ಷ ಇದ್ದು, ವಿದ್ಯುತ್ ಕಂಬದ ಮೇಲಿನ ಭಾಗದಲ್ಲಿ ದೀಪಗಳನ್ನು ಅಳವಡಿಸಿ, ವೈರಿಂಗ್ ಮೂಲಕ ಪ್ಯಾನಲ್‌ಗೆ ಸಂಪರ್ಕ ನೀಡ ಲಾಗುತ್ತದೆ. ಇದರಿಂದ ಬ್ಯಾಟರಿ, ಇನ್ನಿತರೆ ಕಳ್ಳತನಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಎನ್ನಲಾಗಿದೆ.
ಸೋಲಾರ್ ಪ್ಯಾನಲ್ ಅಳವಡಿಸಿದ್ದರಿಂದ ಡಿಸಿಯಿಂದ ಎಸಿ ಕನ್ವರ್ಟ್ ಆಗಿ ದೀಪದ ಬೆಳಕು ಇತರೆ ಸೋಲಾರ್ ಬೆಳಕಿಗಿಂತಲೂ ಹೆಚ್ಚು ಪ್ರಕರತೆ ಇರುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ವಿದ್ಯುತ್ ಬಿಲ್ ಬಾಕಿ ಇದೆ. ರಾತ್ರಿ ವೇಳೆ ಗ್ರಾಮಗಳಲ್ಲಿ ವಿದ್ಯುತ್ ಕಡಿತದಿಂದ ಅನಾನುಕೂಲ ವಾಗುತ್ತದೆ. ಸೋಲಾರ್ ದೀಪ ಅಳವಡಿ ಸಿದಾಗ ರಾತ್ರಿವಿಡೀ ಬೆಳಕು ನೀಡುತ್ತದೆ. ●ಪ್ರಕಾಶ್, ಪಿಡಿಒ, ಜಾಲಿಗೆ ಗ್ರಾಪಂ
ವಾಟರ್‌ಮ್ಯಾನ್ ಕೆಲಸದ ಒತ್ತಡ ಮತ್ತು ಗ್ರಾಮದಲ್ಲಿ ಬ್ಯಾಟರಿ ಕಳ್ಳತನ ಕಡಿವಾಣ ಹಾಕು ವಂತಾಗುತ್ತದೆ. ಜತೆಗೆ ವಿದ್ಯುತ್ ಬಿಲ್‌ಗೆ ಗ್ರಾಪಂಗೆ ತಪ್ಪುತ್ತದೆ. ಇಂಜಿನಿಯರ್ ನಿಂದ ಅನುಮೋದನೆ ಮಾಡಿಕೊಂಡು ಜನವರಿ ಯಿಂದ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಪ್ರಾಯೋಗಿಕವಾಗಿ ಬಸವ ನ ಪುರ ಮತ್ತು ಸಿಂಗ್ರಹಳ್ಳಿ ಗ್ರಾಮ ಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದು, 7ಲಕ್ಷ ರೂ. ಗಳಲ್ಲಿ ಸಿಂಗ್ರಹಳ್ಳಿ ಗ್ರಾಮದಲ್ಲಿ ಮತ್ತು 13ಲಕ್ಷ ರೂ.ಗಳ ಕಾಮಗಾರಿಯನ್ನು ಜಾಲಿಗೆ ಗ್ರಾಪಂನಲ್ಲಿ ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ. ●ಎಸ್.ಎಂ.ಆನಂದ್‌ಕುಮಾರ್, ಅಧ್ಯಕ್ಷರು, ಜಾಲಿಗೆ ಗ್ರಾಪಂ
-ಎಸ್.ಮಹೇಶ್