Advertisement

ವಿದ್ಯುನ್ಮಂಡಳಿಯಿಂದ ಸೌರಶಕ್ತಿ ಯೋಜನೆಗೆ ನಾಂದಿ

12:30 AM Jan 19, 2019 | Team Udayavani |

ಕಾಸರಗೋಡು: “ನಾಡಿಗೆ ಬೆಳಕು-ಮನೆಗೆ ಲಾಭ’ ಎಂಬ ಗುರಿಯೊಂದಿಗೆ ಮನೆಯ ಮೇಲ್ಛಾವಣಿ ಯಲ್ಲಿ ಸೌರಶಕ್ತಿ ಯೋಜನೆಗೆ ವಿದ್ಯುತ್‌ ಖಾತೆ ನಾಂದಿಹಾಡುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೆ.ಎಸ್‌.ಇ.ಬಿ. ನೇತೃತ್ವದಲ್ಲಿ ರಾಜ್ಯದಲ್ಲಿ ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತನ್ನು ಸೌರಶಕ್ತಿ ಯೋಜನೆ ಮೂಲಕ ಉತ್ಪಾದಿಸುವುದು ಈ ಯೋಜನೆಯ ಉದ್ದೇಶ. 

Advertisement

ಇದರಲ್ಲಿ 30 ಮೆಗಾವ್ಯಾಟ್‌ (3 ಸಾವಿರ ಕಿಲೋವ್ಯಾಟ್‌) ಕಾಸರಗೋಡು ಜಿಲ್ಲೆಯಿಂದ ಉತ್ಪಾದನೆಗೊಳಿಸುವ ಗುರಿಯಿದೆ.
ಮನೆ, ಕೃಷಿ ಬಳಕೆದಾರರಿಗೆ 150 ಮೆಗಾವ್ಯಾಟ್‌, ಸರಕಾರದ ಕಟ್ಟಡಗಳಿಗೆ 100, ಮನೆಯೇತರ, ಸರಕಾರೇತರ ಸಂಸ್ಥೆಗಳಿಗೆ 250 ಮೆಗಾವ್ಯಾಟ್‌ ಎಂದು ವಿಂಗಡಿಸಿ ರಾಜ್ಯದಲ್ಲಿ ಒದಗಿಸಲಾಗುವುದು. ಪ್ರತಿ ಗ್ರಾಹಕನಿಗಾಗಿ ವಿವಿಧ ಯೋಜನೆಗಳೂ ಇವೆ.

ಮೊದಲ ಯೋಜನೆ 
ಫಲಾನುಭವಿಯ ಕಟ್ಟಡದ ಮೇಲ್ಛಾವಣಿಯಲ್ಲಿ ವಿದ್ಯುತ್‌ ಮಂಡಳಿಯ ವೆಚ್ಚದಲ್ಲಿ (ಉಚಿತವಾಗಿ)ಸೌರಶಕ್ತಿ ಪ್ಯಾನೆಲ್‌ ನಿಲಯವನ್ನು ಸ್ಥಾಪಿಸುವುದು ಮೊದಲ ಯೋಜನೆಯಾಗಿದೆ. ಈ ಮೂಲಕ ಉತ್ಪಾದಿಸುವ ವಿದ್ಯುತ್‌ನ ಶೇ.10 ಕಟ್ಟಡದ ಮಾಲಕನಿಗೆ ಪೂರೈಕೆಯಾಗಲಿದೆ. ಜತೆಗೆ ಉತ್ಪಾದಿಸುವ ವಿದ್ಯುತ್‌ ದೀರ್ಘಾವ ಧಿಗೆ ಬಳಸುವ ನಿಟ್ಟಿನಲ್ಲಿ ನಿಗದಿತ ಶುಲ್ಕದಲ್ಲಿ ಕಟ್ಟಡದ   ಮಾಲಕನಿಗೆ ಒದಗಿಸಲಾಗುವುದು. ಇಲ್ಲಿನ ಸೌರ ನಿಲಯದ ಪರಿಪಾಲನೆಯ ಹೊಣೆಯನ್ನು 25 ವರ್ಷಗಳ ವರೆಗೆ ಕೆ.ಎಸ್‌.ಇ.ಬಿ.ವಹಿಸಿಕೊಳ್ಳಲಿದೆ.

ಎರಡನೇ ಯೋಜನೆ 
ಎರಡನೇ ಯೋಜನೆಯ ರೂಪದಲ್ಲಿ ಕಟ್ಟಡದ ಮೇಲ್ಛಾವಣಿಯಲ್ಲಿ ಗ್ರಾಹಕನ ವೆಚ್ಚದಲ್ಲಿ ಸೌರಶಕ್ತಿ ನಿಲಯ ಸ್ಥಾಪಿಸಿ ಕೊಡಲಾಗುವುದು. ಇಲ್ಲಿ ಉತ್ಪಾದಿಸಲಾಗುವ ವಿದ್ಯುತ್ತನ್ನು ಭಾಗಶ: ಅಥವಾ ಪೂರ್ಣರೂಪದಲ್ಲಿ ವಿದ್ಯುತ್‌ ಮಂಡಳಿ ನಿಗದಿತ ರೂಪದಲ್ಲಿ ಖರೀದಿ ಮಾಡಲಿದೆ. ಗ್ರಾಹಕ ಅಗತ್ಯವಿದ್ದರೆ ಈ ವಿದ್ಯುತ್ತನ್ನು ಬಳಸಲೂಬಹುದು.

ಮಾಡಿನಲ್ಲಿ ಯಾ ಜಾಗದಲ್ಲಿ 
ಗ್ರಾಹಕನ ಮನೆ ಮಾಡಿನಲ್ಲಿ ಯಾ ಜಾಗದಲ್ಲಿ ಸೌರಶಕ್ತಿ ನಿಲಯವನ್ನು ಸ್ಥಾಪಿಸಿ ನೀಡಲಾಗುವುದು. ಇದಕ್ಕೆ ಕನಿಷ್ಠ 200 ಚದರ ಅಡಿ ಜಾಗದ ಅಗತ್ಯವಿದೆ.ಇಲ್ಲಿ 2 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯ. 200 ಚದರ ಅಡಿ ಸೋಲಾರ್‌ ಪ್ಯಾನೆಲ್‌ ಸ್ಥಾಪನೆಗೆ ಕೇವಲ 1.30 ಲಕ್ಷ ರೂ. ವನ್ನು ಕೆ.ಎಸ್‌.ಇ.ಬಿ. ಪಡೆಯಲಿದೆ. 

Advertisement

ಜನರ ಬಳಿಗೆ ಯೋಜನೆ 
ಜನತೆಯ ಬಳಿಗೆ ಈ ಯೋಜನೆ ತಲಪಿಸುವ ನಿಟ್ಟಿನಲ್ಲಿ ಕೆ.ಎಸ್‌. ಇ.ಬಿ.ಎಲ್‌. ಪ್ರತಿ ಸಬ್‌ ಡಿವಿಜನ್‌ ಮಟ್ಟದಲ್ಲಿ ತಲಾ ಇಬ್ಬರು ಸೋಲಾರ್‌ ಎಕ್ಸಿಕ್ಯೂಟಿವ್‌ಗಳನ್ನು ನೇಮಿಸಿದೆ. ಜಿಲ್ಲೆಯಲ್ಲಿ ಈವರೆಗೆ 2 ಸಾವಿರಕ್ಕೂ ಅ ಧಿಕ ಮಂದಿ ಮನೆಯ ಮೇಲ್ಛಾವಣಿ ಸೌರಶಕ್ತಿ ಯೋಜನೆಯಲ್ಲಿ ನೋಂದಣಿ ನಡೆಸಿದ್ದಾರೆ. ರಾಜ್ಯದಲ್ಲಿ ಅತ್ಯಧಿ ಕ ನೋಂದಣಿ ನಡೆದಿರುವ ಪ್ರದೇಶ ವಯನಾಡ್‌ ಜಿಲ್ಲೆಯ ಕಲ್ಪಟ್ಟ ಆಗಿದೆ. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0471 2555544,1912

ಮಾಡಬೇಕಾದುದೇನು? 
ಮನೆಯ ಮೇಲ್ಛಾವಣಿಯಲ್ಲಿ ಸೌರಶಕ್ತಿ ಯೋಜನೆ ಜಾರಿಗೊಳಿಸಲು ಆಸಕ್ತರು ಜ.31ರ ಮುಂಚಿತವಾಗಿ ಕೆ.ಎಸ್‌.ಇ.ಬಿ.ಯಲ್ಲಿ ನೋಂದಣಿ ನಡೆಸಬೇಕು. ಸರಳವಾದ 5 ಹಂತಗಳಲ್ಲಿ ನೋಂದಣಿ ನಡೆಸಬಹುದಾಗಿದೆ. ಮನೆಗಳಲ್ಲಿ/ಸಂಸ್ಥೆಗಳಲ್ಲಿ ಎಪ್ರಿಲ್‌ ತಿಂಗಳ ವರೆಗೆ ಇಲಾಖೆಯ ಸಿಬಂದಿ ಈ ಸಂಬಂಧ ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ನಂತರ 2019ನೇ ಇಸವಿಯ ಮಧ್ಯದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳ ಸ್ಥಾಪನೆ ನಡೆಯಲಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next