Advertisement

ಎರಡು ಶೀಥಲೀಕರಣ ಘಟಕಕ್ಕೆ ಸೋಲಾರ್‌ ಶಕ್ತಿ

11:07 AM Jan 19, 2019 | |

ಹಾವೇರಿ: ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಬ್ಯಾಡಗಿಯಲ್ಲಿರುವ ಎರಡು ಶೀಥಲೀಕರಣ ಘಟಕಗಳ ಮೇಲ್ಛಾವಣಿ ಮೇಲೆ ಸೌರಶಕ್ತಿಯನ್ನು ಆರ್ಬ್ ಸಂಸ್ಥೆಯಿಂದ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಸಂಸ್ಥೆಯ ಸಿಇಒ ಡೇಮಿಯನ್‌ ಮಿಲ್ಲರ್‌ ತಿಳಿಸಿದರು.

Advertisement

ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶೀಥಲೀಕರಣ ಘಟಕಗಳಿಗೆ ಅಳವಡಿಸಿದ ಸೌರಶಕ್ತಿ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಬ್ಯಾಡಗಿಯಲ್ಲಿರುವ ಒಣಮೆಣಸಿನಕಾಯಿ ಶೇಖರಿಸಿಡುವ ಕೇದಾರನಾಥ ಕೋಲ್ಡ್‌ ಸ್ಟೋರೇಜ್‌ ಮತ್ತು ಪ್ರಯಾಗ್‌ ಕೋಲ್ಡ್‌ ಸ್ಟೋರೇಜ್‌ ಕಟ್ಟಡಗಳ ಮೇಲೆ 80 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಪ್ರತಿ ವರ್ಷ ಸರಾಸರಿ 1.5 ಲಕ್ಷ ಯೂನಿಟ್‌ಗಳಷ್ಟು ಮಾಲಿನ್ಯರಹಿತ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಇದರಿಂದ ಶೈತ್ಯಾಗಾರ ನಡೆಸಲು ಬೇಕಾಗುವ ವಿದ್ಯುತ್ತಿನ ವೆಚ್ಚವನ್ನು ಗಣನೀಯ ಪ್ರಮಾನದಲ್ಲಿ ಕಡಿಮೆ ಮಾಡುತ್ತಿದೆ ಎಂದರು.

ಸಾಮಾನ್ಯವಾಗಿ ಶೀಥಲೀಕರಣ ಘಟಕಗಳಿಗೆ ಹೆಚ್ಚಿನ ವಿದ್ಯುತ್‌ ಬೇಕಾಗುತ್ತದೆ. ಸೌರಶಕ್ತಿ ವ್ಯವಸ್ಥೆ ಅಳವಡಿಸಿಕೊಂಡರೆ ವಿದ್ಯುತ್‌ ವೆಚ್ಚ ಬಹಳ ಕಡಿಮೆಯಾಗುತ್ತದೆ. ಬಂಡವಾಳ ಹೂಡಿಕೆ ಮಾಡಿದ 3-4 ವರ್ಷಗಳಲ್ಲಿ ಪ್ರತಿಫಲ ನೀಡುತ್ತದೆ. ಭಾರತದಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಆರ್ಥಿಕ ನೆರವಿನ ಅಗತ್ಯವಿರುವುದರಿಂದ ಆರ್ಬ್ ಎನರ್ಜಿ ಸಂಸ್ಥೆಯು ಅವರ ಪ್ರತಿಫಲಗಳನ್ನು ಪಡೆಯುವ ಅವಧಿಗೆ ಅನುಸಾರವಾಗಿ ಸೌರ ವ್ಯವಸ್ಥೆ ಅಳವಡಿಸಿಕೊಳ್ಳಲು ಸಾಲ ನೀಡುತ್ತದೆ. ಈ ಅವಧಿಯ ನಂತರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಬಳಸುವ ಎಲ್ಲ ಸೌರ ಉತ್ಪಾದಿತ ವಿದ್ಯುತ್‌ ಅವರಿಗೆ ಉಚಿತವಾಗಿರುತ್ತದೆ. ನಿರ್ವಹಣೆ ವೆಚ್ಚ ಏನೂ ಇರುವುದಿಲ್ಲ ಎಂದರು.

ಕೇದಾರನಾಥ ಕೋಲ್ಡ್‌ ಸ್ಟೋರೇಜ್‌ ಸಂಸ್ಥೆಯ ಮಾಲೀಕ ವಿನಯ್‌ ಎಸ್‌. ಪಾಟೀಲ ಮತ್ತು ಪ್ರಯಾಗ್‌ ಕೋಲ್ಡ್‌ ಸ್ಟೋರೇಜ್‌ನ ಮ್ಯಾನೇಜಿಂಗ್‌ ಪಾರ್ಟ್‌ನರ್‌ ಶ್ರೀನಿವಾಸ ಬೆಟಗೇರಿ ಮಾತನಾಡಿ, ಸೌರವಿದ್ಯುತ್‌ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಈಗ ಪ್ರತಿ ದಿನ 400 ಯೂನಿಟ್‌ಗಳಷ್ಟು ಮಾಲಿನ್ಯ ರಹಿತ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಇದರಿಂದ ಪ್ರತಿ ವರ್ಷ ವಿದ್ಯುತ್‌ಗಾಗಿ ಖರ್ಚು ಮಾಡುತ್ತಿದ್ದು 5.5 ಲಕ್ಷ ರೂ. ಹಣ ಉಳಿತಾಯವಾಗುತ್ತಿದೆ ಎಂದರು. ಆರ್ಬ್ ಸಂಸ್ಥೆಯ ಮಾರುಕಟ್ಟೆ ಪ್ರಮುಖ ಸುಧಿಧೀಂದ್ರ ಹಾಗೂ ಇತರ ಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next