ಬೆಳೆಯನ್ನು ಕೀಟಗಳಿಂದ ರಕ್ಷಿಸಲು ರೈತರು ಕೀಟನಾಶಕಗಳ ಮೊರೆ ಹೋಗುವುದು ಗೊತ್ತೇ ಇದೆ. ಕೀಟನಾಶಕಗಳನ್ನು ಸಿಂಪಡಿಸುವುದರಲ್ಲಿ ನಾನಾ ವಿಧಾನಗಳನ್ನು ಅನುಸರಿಸಲಾಗುತ್ತದೆ. ಸಾಮಾನ್ಯವಾಗಿ ಕೀಟನಾಶಕ ಸಿಂಪಡಣೆಗೆ ಸ್ಪ್ರೇಯರ್‌ಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿಯೂ ಕೆಲ ವಿಧಗಳಿವೆ. ಬೆನ್ನಿಗೆ ನೇತು ಹಾಕಿಕೊಂಡು, ಒಂದು ಕೈನಲ್ಲಿ ಕೊಳವೆ ಹಿಡಿದು ಇನ್ನೊಂದು ಕೈನಲ್ಲಿ ಪಂಪ್ ಹೊಡೆಯುವ ಸ್ಪ್ರೇಯರ್‌ಅನ್ನು ಮೆಕ್ಯಾನಿಕಲ್ ಸ್ಪ್ರೆಯರ್ ಎಂದು ಕರೆಯಲಾಗುತ್ತದೆ. ಅದು ಶ್ರಮದಾಯಕ. ಇನ್ನೊಂದು ಇಂಧನ ಚಾಲಿತ ಮತ್ತು ವಿದ್ಯುತ್ ಚಾಲಿತ ಸ್ಪ್ರೇಯರ್. ಇಂಧನ ಮತ್ತು ವಿದ್ಯುತ್ ಖಾಲಿಯಾದರೆ ಅದನ್ನು ಮತ್ತೆ ರೀಚಾರ್ಜ್ ಮಾಡಬೇಕಾಗುವುದು. ಅದಕ್ಕೆ ಪರಿಹಾರವಾಗಿ ಇನ್ನೊಂದು ರೀತಿಯ ಸ್ಪ್ರೇಯರ್ ಮಾರುಕಟ್ಟೆಯಲ್ಲಿ ಲಭ್ಯವಿದೆ- ಅದೇ ಸೋಲಾರ್ ಸ್ಪ್ರೇಯರ್. ಅದರಲ್ಲಿ ರಾಸಾಯನಿಕ ತುಂಬಿದ ಕ್ಯಾನ್ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಬ್ಯಾಟರಿ ಖಾಲಿಯಾದರೂ ರೀಚಾರ್ಜ್ ಆಗುತ್ತಿರುತ್ತದೆ.
ವಿಡಿಯೋ ಕೊಂಡಿ - bit.ly/2Q94aGS