ಸುವರ್ಣ ವಿಧಾನಸೌಧ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಪಿಎಂ ಕುಸುಮ್-ಸಿ ಯೋಜನೆಯಡಿ 3,37,000 ರೈತರ ಕೃಷಿಪಂಪ್‌ಸೆಟ್‌ಗಳಿಗೆ ಸೋಲಾರ್ ಫೀಡರ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾಲೂರು ಶಾಸಕ ನಂಜೇಗೌಡ ಹಾಗೂ ಮಧುಗಿರಿ ಶಾಸಕ ವೀರಭದ್ರಪ್ಪ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಪ್ರಧಾನಿಯವರ ಈ ಕೊಡುಗೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಯೋಜನೆಗೆ ಟೆಂಡರ್ ಕೂಡ ಆಗಿದೆ, ಒಟ್ಟು 1300 ಮೆಗಾವ್ಯಾಟ್ ವಿದ್ಯುತ್‌ನ್ನು ಸೋಲಾರ್‌ಫೀಡರ್ ಮೂಲಕ ಐಪಿಸೆಟ್‌ಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಧುಗಿರಿ ಶಾಸಕ ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದುವರೆಗೆ 71,115 ರೈತರು ತತ್ಕಾಲ್ ಯೋಜನೆಯಡಿ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮೊದಲ ಹಂತದಲ್ಲಿ 2014 ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಹೇಳಿದರು.
68 ಸಾವಿರ ರೈತರು 10 ಸಾವಿರ ರೂ. ವಂತಿಗೆ ಪಾವತಿಸಿದ್ದಾರೆ, ಆದರೆ ಆಯಾ ಕಂಪನಿ ತಲಾ 1.5 ಲಕ್ಷ ರೂ. ವ್ಯಯಿಸಬೇಕಾಗಿದ್ದು ಇಷ್ಟು ರೈತರಿಗೆ ದೊಡ್ಡ ಮೊತ್ತ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ಮೊದಲ ಹಂತದಲ್ಲಿ 2014ಮಂದಿಗೆ ಪರಿವರ್ತಕಗಳನ್ನು ಒದಗಿಸಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು, ಹಣಕಾಸಿನ ವ್ಯವಸ್ಥೆಗಳನ್ನು ನೋಡಿಕೊಂಡು ಜ್ಯೇಷ್ಠತೆ ಆಧಾರದಲ್ಲಿ ಮುಂದೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದರು.
ಪ್ರಸ್ತುತ 12,03,887 ಕೃಷಿ ಪಂಪ್‌ಸೆಟ್‌ಗೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿಹಾಕಿದ್ದಾರೆ, ಇದರಲ್ಲಿ 66,086 ಮಂದಿಗೆ ವಿದ್ಯುತ್ ಸಂಪರ್ಕ ಒದಗಿಸುವುದಕ್ಕೆ ಟೆಂಡರ್ ಆಗಿದೆ, ಉಳಿದದ್ದನ್ನು ಮುಂದಿನ ಹಂತದಲ್ಲಿ ಒದಗಿಸಲಾಗುವುದು. ವಿದ್ಯುತ್ ಸಂಪರ್ಕ ಅಂತಿಮವಾಗುವ ವರೆಗೂ ಕೃಷಿಕರಿಗೆ ವಿಜಿಲೆನ್ಸ್ ತಂಡಗಳಿಂದ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ.ಒಟ್ಟಾರೆಯಾಗಿ ರಾಜ್ಯದಲ್ಲಿ 32.55 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ, 1900 ಮೆಗಾವಾಟ್ ವಿದ್ಯುತ್ ಪ್ರತಿದಿನ ಇದಕ್ಕೆ ವಿನಿಯೋಗವಾಗುತ್ತದೆ, ವರ್ಷಕ್ಕೆ 13,632 ಕೋಟಿ ರೂ. ಸಬ್ಸಿಡಿಯನ್ನು ರೈತರಿಗಾಗಿ ನೀಡಲಾಗುತ್ತದೆ ಎಂದೂ ತಿಳಿಸಿದರು.
2022-23ನೇ ಸಾಲಿನ ಯುಡೈಸ್ / ಸ್ಯಾಟ್ಸ್ ಅಂಕಿ-ಅಂಶಗಳ ಪ್ರಕಾರ 75,675 ಸರ್ಕಾರಿ ಶಾಲಾ ಕೊಠಡಿಗಳಿಗೆ ದುರಸ್ತಿ ಆವಶ್ಯಕತೆ ಇದ್ದು, ಪ್ರತಿ ಕೊಠಡಿಗಳಿಗೆ 2 ಲಕ್ಷ ರೂ.ಗಳಂತೆ 36,724 ಕೊಠಡಿಗಳ ಸಣ್ಣ ದುರಸ್ತಿಗೆ 734.48 ಕೋಟಿ ರೂ. ಖರ್ಚಾಗುವ ಅಂದಾಜಿದೆ. ದೊಡ್ಡ ಪ್ರಮಾಣದ ದುರಸ್ತಿ ಅವಶ್ಯವಿರುವ ಪ್ರತಿ ಕೊಠಡಿಗೆ 5 ಲಕ್ಷ ರೂ.ಗಳಂತೆ 38,951 ಕೊಠಡಿಗಳಿಗೆ 1947.55 ಕೋಟಿ ಸೇರಿ ಒಟ್ಟಾರೆ 75,675 ಕೊಠಡಿಗಳ ದುರಸ್ತಿಗೆ 2682.03 ಕೋಟಿ ರೂ. ಬೇಕಿದೆ. ನಾವೀಗ 18,618 ಕೊಠಡಿಗಳ ರಿಪೇರಿ ಹಾಗೂ 8100 ಹೊಸ ಕಟ್ಟಡ ಕಾಮಗಾರಿ ಕೈಗೊಂಡಿದ್ದೇವೆ. ಹೀಗಾಗಿಯೇ ಕೇಸರಿ-ಹಸಿರು ಬಣ್ಣದ ಚರ್ಚೆ ಮುನ್ನೆಲೆಗೆ ಬಂತು ಎಂದು ವಿವರಿಸಿದರು.