ಸೊಲ್ಲಾಪುರ: ಲಿಂಗದ ಮುಖವೇ ಜಂಗಮನಾಗಿದ್ದು, ಜಂಗಮ ಸಮಾಜವು ಶ್ರೇಷ್ಠತೆ ಪಡೆದಿದೆ. ಅಲ್ಲದೇ ಇನ್ನೊಬ್ಬರ ಒಳಿತು ಬಯಸುವುದರ ಜೊತೆಗೆ ಜಂಗಮ ಸಮಾಜದ ಉನ್ನತಿಗಾಗಿ ನಾವೆಲ್ಲರೂ ಒಂದಾಗಬೇಕು ಎಂದು ಸಂಸದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಅಕ್ಕಲಕೋಟ ಪಟ್ಟಣದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಗಮ ಸಮಾಜದ ಕೌಟುಂಬಿಕ ಸಮಾವೇಶ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಒಂದು ಎನ್ನುವ ಭಾವನೆ ನಮ್ಮೊಳಗಿರಬೇಕು. ಸಮಾಜದ ಉನ್ನತಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ನಾಗಣಸೂರಿನ ಶ್ರೀಕಂಠ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜಂಗಮ ಸಮಾಜದ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕು. ಅಲ್ಲದೇ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಬೇಕು. ಭೇದ-ಭಾವ ಮರೆತು ಸಮಾಜಕ್ಕಾಗಿ ಒಂದಾಗಬೇಕು ಎಂದರು.
ಸ್ತ್ರೀ ಜಾಗೃತಿ ವಿಷಯ ಕುರಿತು ಬೆಂಗಳೂರಿನ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಉಪನ್ಯಾಸ ನೀಡಿದರು. ಇದೆ ವೇಳೆ 51 ಭಕ್ತರಿಗೆ ಲಿಂಗದೀಕ್ಷೆ, ಜಂಗಮ ಸಮಾಜದ 30 ಜನರಿಗೆ ಅಯ್ನಾಚಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಂಗಮ ಸಮಾಜದ ವೀರಭದ್ರಯ್ನಾ ಸ್ವಾಮಿ, ದಾನಯ್ಯ ಕವಟಗಿಮಠ, ಗುರುಸಿದ್ಧಯ್ಯ ಸ್ವಾಮಿ, ಮಯೂರ ಸ್ವಾಮಿ, ಗೌರಿ ಸ್ವಾಮಿ, ತಪಸಯ್ಯ ಹಿರೇಮಠ, ರೇವಣಸಿದ್ಧ ಚಡಚಣಕರ್, ಸಂಜಯ ಕಿಣಿಕರ, ಬಸವರಾಜ ಶಾಸ್ತ್ರೀ, ಡಾ| ಮಲ್ಲಿನಾಥ ಸ್ವಾಮಿ ಸೇರಿದಂತೆ 10 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ಕಲಕೋಟ ವಿರಕ್ತ ಮಠದ ಬಸವಲಿಂಗ ಶ್ರೀಗಳು, ನಾಗಣಸೂರಿನ ಡಾ| ಅಭಿನವ ಬಸವಲಿಂಗ ಶ್ರೀಗಳು, ದುಧನಿಯ ಡಾ| ಶಾಂತಲಿಂಗ ಶ್ರೀಗಳು, ವಾಗªರಿಯ ಶಿವಲಿಂಗೇಶ್ವರ ಶ್ರೀಗಳು, ಕಡಬಗಾವದ ವೀರ ಶೀವಲಿಂಗೇಶ್ವರ ಶ್ರೀಗಳು, ಮೈದರ್ಗಿಯ ನೀಲಕಂಠ ಶ್ರೀಗಳು, ಮುಗಳಿ ಬಸವ ಮಂಟಪದ ಪೂಜ್ಯ ಮಹಾನಂದ ಸ್ವಾಮಿ, ಮಹಾದೇವ ಶಿವಾಚಾರ್ಯ ಶ್ರೀಗಳು ಹಾಗೂ ಹತ್ತಿಕಣಬಸ್, ಕರಜಗಿ ಸೇರಿದಂತೆ ಇನ್ನಿತರ ಶ್ರೀಗಳು ಪಾಲ್ಗೊಂಡಿದ್ದರು. ಸಿದ್ಧೇಶ್ವರ ಮಠಪತಿ ಪ್ರಾಸ್ತವಿಕವಾಗಿ ಮಾತನಾಡಿದರು. ದಾನಯ್ಯ ಸ್ವಾಮಿ ನಿರೂಪಿಸಿದರು, ಚಿದಾನಂದ ಮಠಪತಿ ವಂ ದಿಸಿದರು. ರುದ್ರಯ್ನಾ ಸ್ವಾಮಿ, ಶಿವರಾಜ ಸ್ವಾಮಿ, ಉಮೇಶ ಸ್ವಾಮಿ, ಶಿವಶಂಕರ ಸ್ವಾಮಿ, ಧಾನಯ್ಯ ಸ್ವಾಮಿ, ವೀರೌದ್ರ ಸ್ವಾಮಿ, ಗುರುಶಾಂತ ಸ್ವಾಮಿ, ಸಿದ್ಧೇಶ್ವರ ಮಠಪತಿ, ಗುಡ್ಡಯ್ಯ ಸ್ವಾಮಿ, ಶಿವಲಿಂಗ ಸ್ವಾಮಿ, ಮಲ್ಲಿನಾಥ ಸ್ವಾಮಿ, ನಾಗಲಿಂಗಯ್ಯ ಸ್ವಾಮಿ, ಚಂದ್ರಕಾಂತ ಸ್ವಾಮಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.