ವಿಜಯಪುರ: ಮನೆ ಎದುರಿನ ರಸ್ತೆಯೊಂದನ್ನು ಪೂರ್ಣ ಗೊಳಿಸಲಿಕ್ಕೇ ವರ್ಷ ಗಟ್ಟಲೆ ಕಾಲಾವಕಾಶ ತೆಗೆದು ಕೊಳ್ಳು ವು ದನ್ನು ನೋಡಿ ಬೇಸತ್ತಿರುವ ನಮ್ಮೆಲ್ಲರಿಗೂ ಇಲ್ಲೊಂದು ಅಚ್ಚರಿಯ ಸುದ್ದಿ ಇದೆ. ಕೇವಲ 18 ಗಂಟೆಗಳಲ್ಲಿ 25.54 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರ ಸಂಪರ್ಕಿಸುವ 110 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ದ್ವಿಪಥ ದಿಂದ ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆದಿದೆ. ಯೋಜನೆಗೆ ಕೇಂದ್ರ ಸರಕಾರ 1,540 ಕೋಟಿ ರೂ. ವೆಚ್ಚ ಮಾಡುತ್ತಿದೆ. 110 ಕಿ.ಮೀ. ವ್ಯಾಪ್ತಿಯ ಚತುಷ್ಪಥದಲ್ಲಿ ಒಂದು ಮಾರ್ಗದ 25.54 ಕಿ.ಮೀ. ರಸ್ತೆ ಕಾಮಗಾರಿಯನ್ನು ಕೇವಲ 18 ಗಂಟೆಯಲ್ಲಿ ಸಂಪೂರ್ಣ ಮುಗಿಸಿ ಡಾಮರೀಕರಣ ಮಾಡಲಾಗಿದೆ.
ಗುತ್ತಿಗೆದಾರ ಸಂಸ್ಥೆಯ 500 ಕಾರ್ಮಿಕರ ನಿರಂತರ ಪರಿಶ್ರಮದಿಂದ ಇದು ಸಾಧ್ಯವಾಗಿದ್ದು, ಲಿಮ್ಕಾ ಪುಸ್ತಕದಲ್ಲಿ ದಾಖಲೆ ಬರೆದಿದೆ. ಕಾರ್ಮಿಕರ ಸಾಧನೆಯನ್ನು ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ದೇಶದಲ್ಲಿ ಈ ಹಿಂದೆ ನಿತ್ಯ ಹೆದ್ದಾರಿಯ 3 ಕಿ.ಮೀ. ಕಾಮಗಾರಿ ನಡೆಯುತ್ತಿತ್ತು. ಈಗ ಕನಿಷ್ಠ 100 ಕಿ.ಮೀ. ನಿರ್ಮಾಣಗೊಳ್ಳುತ್ತಿದೆ.
ಪ್ರಧಾನಿ ಮೋದಿ ನೇತೃತ್ವದ ಸರ ಕಾರದ ಬದ್ಧತೆಯ ಆಡಳಿತಕ್ಕೆ ಲಿಮ್ಕಾ ದಾಖಲೆಗೆ ಸಿದ್ಧವಾಗಿರುವ ಸೊಲ್ಲಾ ಪುರ- ವಿಜಯಪುರ ಹೆದ್ದಾರಿ ಕಾಮಗಾರಿಯೇ ಸಾಕ್ಷಿ. ಕಾರ್ಮಿಕರ ಪರಿಶ್ರಮದಿಂದ ಈ ಸಾಧನೆ- ದಾಖಲೆ ನನ್ನ ಕ್ಷೇತ್ರದಲ್ಲಿ ಆಗಿರುವುದು ನನಗೆ ಹೆಮ್ಮೆ ಎನಿಸಿದೆ.
– ರಮೇಶ ಜಿಗಜಿಣಗಿ, ವಿಜಯಪುರ ಸಂಸದ