Advertisement

ಸೊಲ್ಲಾಪುರ: ಆಷಾಢ ಏಕಾದಶಿ- ಪಂಢರಪುರದಲ್ಲಿ ಭಕ್ತರ ದಂಡು

06:09 PM Jun 29, 2023 | Team Udayavani |

ಸೊಲ್ಲಾಪುರ: ಪಂಢರಪುರ ವಿಠಲ-ರುಕ್ಮಿಣಿ ಇಡೀ ಮಹಾರಾಷ್ಟ್ರದ ಆರಾಧ್ಯ ದೈವವಾಗಿದ್ದು, ವಾರಕರಿಗಳೆಲ್ಲರೂ ವಿಠಲನ ದರ್ಶನ ಕ್ಕಾಗಿ ಉತ್ಸುಕರಾಗಿದ್ದಾರೆ. ವಾರಕರಿಗಳು ಹರಿನಾಮದ ಹಿನ್ನೆಲೆಯಲ್ಲಿ ಪಂಢರಿ ಕಡೆಗೆ ಸಾಗುತ್ತಿದ್ದಾರೆ. ಜೂ.29ರಂದು ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಪಂಢರಪುರದಲ್ಲಿ ಭಕ್ತರ ದಂಡು ನೆರೆದಿದೆ.

Advertisement

ಪ್ರಸ್ತುತ ಆಷಾಢ ಯಾತ್ರೆಗೆ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಪಂಢರಪುರಕ್ಕೆ ಆಗಮಿಸುತ್ತಿದ್ದಾರೆ. ಆಷಾಢ ಏಕಾದಶಿಯಂದು ಪಲ್ಲಕ್ಕಿ ಮೆರವಣಿಗೆ ಪಂಢರಪುರದ ಬಳಿ ಬಂದಾಗಲೆಲ್ಲ ದರ್ಶನ ಸರತಿ ಸಾಲು ಗೋಪಾಲಪುರ ತಲುಪುತ್ತದೆ. ಆದರೆ, ಈ ವರ್ಷ ಪಲ್ಲಕ್ಕಿ ಜಿಲ್ಲೆಗೆ ಆಗಮಿಸುವ ಮುನ್ನವೇ ಭಕ್ತಾದಿಗಳ ಸಂಖ್ಯೆ ದಾಖಲೆಯತ್ತ ತಲುಪಿದೆ.

ಹಾಗಾಗಿ ಆಷಾಢ ಏಕಾದಶಿಯಂದು ಈ ವರ್ಷ ಪಂಢರಪುರದಲ್ಲಿ ಭಕ್ತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆಶಾಡಿ ವಾರಿ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ. ಸಂತ ಜ್ಞಾನೇಶ್ವರ ಸೇರಿದಂತೆ
ಹಲವು ಪಲ್ಲಕ್ಕಿಗಳನ್ನು ಪಂಢರಪುರಕ್ಕೆ ಆಗಮಿಸಿವೆ. ಪಾದಯಾತ್ರೆ ಮುಗಿಸಿ ಪಲ್ಲಕ್ಕಿಯು ಜೂನ್‌ 28ರಂದು ಪಂಢರಪುರ
ತಲುಪಿವೆ. ಜೂನ್‌ 29ರಂದು ಆಷಾಢ ಏಕಾದಶಿ ಆಚರಿಸಲಾಯಿತು.

ಮಹಾರಾಷ್ಟ್ರ ರಾಜ್ಯದ ಆರಾಧ್ಯ ದೈವವಾದ ಪಾಂಡುರಂಗನ ಅಧಿಕೃತ ಮಹಾ ಪೂಜೆಯನ್ನು ಪ್ರಸ್ತುತ ಮಹಾ ರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನೆರವೇರಿಸಿದರು. ಇದು ಅಧಿಕೃತ ಮಹಾ ಪೂಜೆಯಾಗಿದ್ದು, ಪರಂಪರೆಯಂತೆ ರಾಜ್ಯದ ಮುಖ್ಯಮಂತ್ರಿಗಳು ಸರ್ಕಾರಿ ಪೂಜೆ ನೆರವೇರಿಸುತ್ತಾರೆ.

ಸಂತಸದ ವಾತಾವರಣ ಪಂಢರಪುರ ಆಷಾಢ ಯಾತ್ರೆಗೆ ಸಿದ್ಧವಾಗಿದ್ದು, ಸಂತ ತುಕಾರಾಮ ಮಹಾರಾಜರ ಮತ್ತು ಸಂತ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿಗಳು ಪಂಢರಪುರ ನಗರಕ್ಕೆ ಆಗಮಿಸಲಿದ್ದು, ವಾರಕರಿ ಕಾಲ್ನಡಿಗೆಯಲ್ಲಿ ಪಂಢರಪುರ ಪ್ರವೇಶಿಸುತ್ತಿದ್ದಂತೆ ವಾರಕರಿಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಈ ವರ್ಷ ಪ್ರಥಮ ಬಾರಿಗೆ ಐದು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಸ್ಥಳದಲ್ಲಿ ವಸತಿ ಕಲ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next