ಬೆಂಗಳೂರು: ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಹಿರಿಯ ಚಿತ್ರನಟಿ ಲೀಲಾವತಿ ಅವರ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ (ನ.28) ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಇದನ್ನೂ ಓದಿ:Agniveer: ಪ್ರಿಯಕರನ ಜತೆ ಜಗಳ: ತರಬೇತಿಯಲ್ಲಿದ್ದ ಅಗ್ನಿವೀರ್ ಯುವತಿ ನೇಣಿಗೆ ಶರಣು
ನಂತರ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಲೀಲಾವತಿಯವರು ಹಾಗೂ ವಿನೋದ್ ರಾಜ್ ಅವರು ಸಮಾಜಕ್ಕೆ ಒಂದು ದೊಡ್ಡ ಸಂದೇಶ ನೀಡಿದ್ದಾರೆ ಎಂದು ಡಿಕೆಶಿ ಹೇಳಿದರು.
ಶ್ರೀಮಂತರು ಹಲವಾರು ರೀತಿಯಲ್ಲಿ ದಾನ, ಧರ್ಮ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಲೀಲಾವತಿಯವರು ಮೂಕ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿ ತೋರಿದ ಸಾಮಾಜಿಕ ಕಳಕಳಿ ಇದೆಲ್ಲವನ್ನು ಮೀರಿದ್ದು.
60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಲೀಲಾವತಿಯವರು, ಇಂದು ಸಾಮಾಜಿಕ ಸೇವೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪಶುಗಳ ಚಿಕಿತ್ಸೆಗಾಗಿ ಕಟ್ಟಿರುವ ಈ ಆಸ್ಪತ್ರೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಡಿಕೆ ಶಿವಕುಮಾರ್ ಈ ಸಂದರ್ಭದಲ್ಲಿ ಶುಭಹಾರೈಸಿದರು.