Advertisement

ಮಣ್ಣನ್ನು ಟ್ರ್ಯಾಕ್‌ ಮಾಡುವ ತಂತ್ರಜ್ಞಾನ

08:31 PM Sep 29, 2019 | Team Udayavani |

ವೈದ್ಯರಿಗೆ ನಾಡಿ ಮಿಡಿತ ಹೇಗೋ ಅದೇ ರೀತಿ ಕೃಷಿಕರಿಗೆ ಮಣ್ಣು. ಆರೋಗ್ಯ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನಾಡಿ ಮಿಡಿತದಿಂದ ಹೇಗೆ ಪತ್ತೆ ಹಚ್ಚುತ್ತಾರೋ, ಅದೇ ರೀತಿ ಮಣ್ಣನ್ನು ಪರೀಶೀಲಿಸುವುದರಿಂದ ಬೆಳೆ ಯಾವ ರೀತಿ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ.

Advertisement

ಈ ಉದ್ದೇಶಕ್ಕಾಗಿಯೇ “ಕ್ರಾಪ್‌ ಸೆನ್ಸಾರ್‌’ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಅವುಗಳಲ್ಲೊಂದು ಕೇಂದ್ರ ಸರ್ಕಾರವೇ ಅಭಿವೃದ್ಧಿ ಪಡಿಸಿರುವ “ಸಾಯಿಲ್‌ಸೆನ್ಸ್‌’ ಉಪಕರಣ. ಐಐಟಿ ಬಾಂಬೆ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಈ ಉಪಕರಣ ತಯಾರಾಗಿದೆ. ಇದರಿಂದ ಮಣ್ಣಿನಲ್ಲಿ ನೀರಿನಂಶ ಎಷ್ಟಿದೆ, ಎಷ್ಟು ಫ‌ಲವತ್ತಾಗಿದೆ, ರೋಗ ಕಾರಕವೇ ಎಂಬಿತ್ಯಾದಿ ಮಾಹಿತಿಯನ್ನು ಒದಗಿಸುತ್ತದೆ.

ಸೌರಶಕ್ತಿ ಚಾಲಿತ ಸೆನ್ಸಾರ್‌ಅನ್ನು ಮಣ್ಣಲ್ಲಿ ಹುದುಗಿಸಿ, ಮೊಬೈಲ್‌ ಅ್ಯಪ್‌ ಮುಖಾಂತರ ಮಾಹಿತಿ ಪಡೆದುಕೊಳ್ಳಬಹುದು. ಗೊಬ್ಬರ, ನೀರು, ವಿದ್ಯುತ್‌ ಇನ್ನಿತರ ದುಂದುವೆಚ್ಚಗಳಿಗೆ ಇದರಿಂದ ಕಡಿವಾಣ ಬೀಳುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಸುಮಾರು ಎರಡು ವರ್ಷಗಳಿಂದ ತಜ್ಞರ ತಂಡ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರಿಶೀಲನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next